»   » ಶಿವಣ್ಣನ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹರ್ಷೋದ್ಗಾರ

ಶಿವಣ್ಣನ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹರ್ಷೋದ್ಗಾರ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗಿಂದು 55ನೇ ಹುಟ್ಟುಹಬ್ಬ. ಪ್ರತಿವರ್ಷದಂತೆ ಈ ವರ್ಷವೂ ಶಿವಣ್ಣನ ಅಭಿಮಾನಿಗಳು ತಮ್ಮ ನೆಚ್ಚಿನ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸುವ ಸಿದ್ದತೆಯಲ್ಲಿದ್ದರು. ಆದ್ರೆ, ಈ ವರ್ಷದ ಬರ್ತ್ ಡೇ ಆಚರಣೆಯನ್ನ ಸಂಭ್ರಮಿಸಿದಂತೆ ಸ್ವತಃ ಶಿವರಾಜ್ ಕುಮಾರ್ ಅವರೇ ಕರೆ ಕೊಟ್ಟರು.

ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನದ ಹಿನ್ನೆಲೆ ಹುಟ್ಟುಹಬ್ಬವನ್ನ ಆಚರಿಸದಿರಲು ಸೆಂಚುರಿ ಸ್ಟಾರ್ ತೀರ್ಮಾನಿಸಿದ್ದರು. ಆದ್ರೆ, ಅವರ ಅಭಿಮಾನಿಗಳು ಮಾತ್ರ ಕರುನಾಡ ಚಿತ್ರವರ್ತಿಯ ಜನುಮದಿನವನ್ನ ಹಬ್ಬದಂತೆ ಕೊಂಡಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಕನ್ನಡದ ಸ್ಟಾರ್ ನಟ, ನಟಿಯರು ಹಾಗೂ ಅವರ ಅಭಿಮಾನಿ ಸಂಘಟನೆಗಳು ಕೂಡ 'ಲೀಡರ್' ಬರ್ತ್ ಡೇಯನ್ನ ಸಂಭ್ರಮಿಸುತ್ತಿದೆ. ಮುಂದೆ ಓದಿ....

ಡಾ.ರಾಜ್ ಜೊತೆ ಬಾಲ ಶಿವ

ಡಾ.ರಾಜ್ ಜೊತೆ ಮತ್ತು ಬಾಲ ಶಿವರಾಜ್ ಕುಮಾರ್ ಇರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿವಣ್ಣ ಹುಟ್ಟುಹಬ್ಬದ ಪ್ರಯುಕ್ತ ಈ ಮುದ್ದಾದ ಫೋಟೋ ಈಗ ಸಂಚಲನ ಸೃಷ್ಟಿಸಿದ್ದು, ಅಭಿಮಾನಿಗಳು ಹೆಚ್ಚು ಲೈಕ್ ಮಾಡುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಫ್ಯಾನ್ಸ್

ಸ್ಟಾರ್ ನಟರ ಅಭಿಮಾನಿ ಸಂಘಗಳು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಸೆಂಚುರಿಸ್ಟಾರ್ ಹುಟ್ಟುಹಬ್ಬವನ್ನ ಸಂಭ್ರಮಿಸುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಶಿವಣ್ಣನಿಗೆ ಬರ್ತ್ ಡೇ ವಿಶ್ ಮಾಡಿದರು.

ರಮ್ಯಾ ಫ್ಯಾನ್ಸ್

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿಮಾನಿಗಳಿಂದ ಮನಮೋಹಕ ನಟ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ದರ್ಶನ್ ಅಭಿಮಾನಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು, ಕರುನಾಡ ಚಕ್ರವರ್ತಿಯ ಜನುಮದಿನಕ್ಕೆ ಶುಭ ಕೋರಿದ್ದಾರೆ.

ಸುದೀಪ್ ಫ್ಯಾನ್ಸ್

ಕಿಚ್ಚ ಸುದೀಪ್ ಅಭಿಮಾನಿಗಳು ಬಂಗಾರದ ಮನುಷ್ಯನ ಮಗನಿಗೆ ಜನಮದಿನದ ವಿಶೇಷವಾಗಿ ಶುಭ ಹಾರೈಸಿದ್ದಾರೆ.

ಅಮೂಲ್ಯ ಅಭಿಮಾನಿಗಳು

ಗೋಲ್ಡನ್ ಕ್ವೀನ್ ಅಮೂಲ್ಯ ಅಭಿಮಾನಿಗಳು ಕೂಡ ಮಾಸ್ ಲೀಡರ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಶ್ರೇಯಾ ಶರಣ್ ಫ್ಯಾನ್ಸ್

ಬಹುಭಾಷಾ ನಟಿ ಶ್ರೇಯಾ ಶರಣ್ ಅಭಿಮಾನಿಗಳು ಕೂಡ ಹ್ಯಾಟ್ರಿಕ್ ಹೀರೋ ಶಿವಣ್ಣನ ಬರ್ತ್ ಡೇ ಆಚರಿಸಿದ್ದಾರೆ.

ಶ್ರೀಮುರಳಿ ಫ್ಯಾನ್ಸ್

ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿಮಾನಿಗಳು ನಟ ಶಿವರಾಜ್ ಕುಮಾರ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಈ ವಿಶೇಷ ದಿನದ ಪ್ರಯುಕ್ತ, ಶ್ರೀಮುರಳಿ ಹಾಗೂ ಶಿವಣ್ಣ ಅಭಿನಯದ 'ಮಫ್ತಿ' ಚಿತ್ರದ ಎರಡನೇ ಟೀಸರ್ ಬಿಡುಗಡೆಯಾಗಿದೆ.

ಗಣೇಶ್ ಫ್ಯಾನ್ಸ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳು ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

ಒಳ್ಳೆ ಹುಡುಗ ಪ್ರಥಮ್

ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್, 'ದೇವ್ರಂಥ ಮನುಷ್ಯ' ಚಿತ್ರತಂಡದ ಪರವಾಗಿ ಶಿವರಾಜ್ ಕುಮಾರ್ ಅವರಿಗೆ ಶುಭ ಕೋರಿದ್ದಾರೆ.

ಅಪ್ಪು ಫ್ಯಾನ್ಸ್ ಸಂಭ್ರಮ

ಶಿವಣ್ಣನ ಹುಟ್ಟುಹಬ್ಬವನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಅದ್ಧೂರಿಯಾಗಿ ಕೊಂಡಾಡುತ್ತಿದ್ದಾರೆ.

'ಬಾಸ್' ಬರ್ತ್ ಡೇ ಗೆ ಶ್ರೀಮುರಳಿ ಕೊಟ್ಟ ಭರ್ಜರಿ ಗಿಫ್ಟ್

ಚಿತ್ರಕೃಪೆ: ರಮ್ಯಾ, ಅಮೂಲ್ಯ, ಗಣೇಶ್ ಫ್ಯಾನ್ಸ್ ಕ್ಲಬ್

English summary
Kannada Actor and Actress Fans are Wishing to Hatric Hero Shivarajkumar's 55th Birthday on Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada