»   » 'ದೊಡ್ಮನೆ ಮದುವೆ' : VVIP ಗಳಿಗೆ ಸ್ಪೆಷಲ್ ವ್ಯವಸ್ಥೆ

'ದೊಡ್ಮನೆ ಮದುವೆ' : VVIP ಗಳಿಗೆ ಸ್ಪೆಷಲ್ ವ್ಯವಸ್ಥೆ

Posted By:
Subscribe to Filmibeat Kannada

ಹಿಂದೆಂದೂ ಕಂಡಿಲ್ಲದ ವೈಭವೋಪೇತ ಮದುವೆಗೆ ನಮ್ಮ ಸ್ಯಾಂಡಲ್ ವುಡ್ ನಾಳೆ (ಆಗಸ್ಟ್ 31) ಸಾಕ್ಷಿಯಾಗಲಿದೆ. ಸ್ಯಾಂಡಲ್ ವುಡ್ ಕಿಂಗ್, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಿರಿಯ ಪುತ್ರಿ ಡಾ.ನಿರುಪಮ ವಿವಾಹ ಮಹೋತ್ಸವ ನಾಳೆ ನಡೆಯಲಿದೆ.

ಅಣ್ಣಾವ್ರ ಮೊಮ್ಮಗಳು ಡಾ.ನಿರುಪಮ ಮತ್ತು ಡಾ.ದಿಲೀಪ್ ಅವರನ್ನ ಆಶೀರ್ವದಿಸುವುದಕ್ಕೆ ದಕ್ಷಿಣ ಭಾರತ ಚಿತ್ರರಂಗ ಮತ್ತು ಬಾಲಿವುಡ್ ನ ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ.

ಮೂಲಗಳ ಪ್ರಕಾರ ಬಿಗ್ ಬಿ ಅಮಿತಾಬ್ ಬಚ್ಚನ್, ಸೂಪರ್ ಸ್ಟಾರ್ ರಜಿನಿಕಾಂತ್, ಕಮಲ್ ಹಾಸನ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಅರಮನೆ ಮೈದಾನಕ್ಕೆ ಭೇಟಿ ಕೊಟ್ಟು ವಧು-ವರರನ್ನ ಆಶೀರ್ವದಿಸಲಿದ್ದಾರೆ. [ದೊಡ್ಮನೆ ಮೊಮ್ಮಗಳ ಮದುವೆಯ ಸಂಭ್ರಮದ ಝಲಕ್]

shivannamagalamadhuve

ಜನಸಾಮಾನ್ಯರಿಗೂ ಪ್ರವೇಶ ಅವಕಾಶ ಇರುವ ಕಾರಣ, VVIP ಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. 'ಅಭಿಮಾನಿ ದೇವರುಗಳಿಗೆ' ಪ್ರತ್ಯೇಕ ಪ್ರವೇಶ ಅವಕಾಶ ಕಲ್ಪಿಸಲಾಗಿದ್ದು, ಗಣ್ಯಾತಿಗಣ್ಯರಿಗೆ ಸ್ಪೆಷಲ್ ಎಂಟ್ರಿ ಇದೆ.

ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನ ದೊಡ್ಡ ದೊಡ್ಡ ಕಲಾವಿದರು ಬರುತ್ತಿರುವ ಕಾರಣ, ಅವರೆಲ್ಲಾ ಉಳಿದು ಕೊಳ್ಳುವುದಕ್ಕೆ 10 ಕ್ಯಾರಾವ್ಯಾನ್ ಬುಕ್ ಮಾಡಲಾಗಿದೆ. [ಶಿವಣ್ಣ ಮಗಳ ಮದುವೆಗೆ ವಿಶೇಷ ವೆಬ್ ಸೈಟ್ ಆರಂಭ]

shivannamagalamadhuve

VVIP ಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನ ನಿರ್ಮಾಪಕ 'ಧೀರ' ರಾಕ್ ಲೈನ್ ವೆಂಕಟೇಶ್ ವಹಿಸಿಕೊಂಡಿದ್ದಾರೆ. ['ದೊಡ್ಮನೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನ್ಯೂ]

ಇನ್ನೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಮೊಮ್ಮಗಳ ಮದುವೆ ಇದಾಗಿರುವ ಕಾರಣ, ರಾಜಕಾರಣಿಗಳು ಕೂಡ ಆಗಮಿಸುತ್ತಿದ್ದು, ಅವರನ್ನೆಲ್ಲಾ ರಿಸೀವ್ ಮಾಡಿಕೊಳ್ಳುವ ಹೊಣೆ ಹೊತ್ತುಕೊಂಡಿದ್ದಾರೆ ಮಧು ಬಂಗಾರಪ್ಪ. [ಮಗಳ ಮದುವೆಗೆ ಶಿವಣ್ಣ ಭರ್ಜರಿ ಶಾಪಿಂಗ್.!]

ಸಮಾರಂಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನೂ ನಿಯೋಜಿಸಲಾಗಿದೆ. VVIP ಗಳು ಮದುವೆಗೆ ಹಾಜರಾಗುತ್ತಿರುವ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಮುಂಜಾಗ್ರತ ಕ್ರಮಗಳನ್ನ ಪೊಲೀಸರು ಕೈಗೊಂಡಿದ್ದಾರೆ.

    English summary
    Kannada Actor Shivarajkumar's Daughter Dr.Nirupama Wedding is scheduled for tomorrow (August 31st). Since, many Celebrities and VVIP's are attending the marriage, Special security measures are taken.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada