»   » ಹ್ಯಾಟ್ರಿಕ್ ಹೀರೋ ಅಭಿನಯದ ರೀಮೇಕ್ ಸಿನಿಮಾ 'ಕವಚ'ಗೆ ಸಿಕ್ತು ಚಾಲನೆ.!

ಹ್ಯಾಟ್ರಿಕ್ ಹೀರೋ ಅಭಿನಯದ ರೀಮೇಕ್ ಸಿನಿಮಾ 'ಕವಚ'ಗೆ ಸಿಕ್ತು ಚಾಲನೆ.!

Posted By:
Subscribe to Filmibeat Kannada

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ 'ಕವಚ' ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಮಲಯಾಳಂನಲ್ಲಿ ಸಖತ್ ಫೇಮಸ್ ಆಗಿದ್ದ 'ಒಪ್ಪಂ' ಸಿನಿಮಾದ ರೀಮೇಕ್ ಇದಾಗಿದ್ದು ಸಾಕಷ್ಟು ವರ್ಷಗಳ ನಂತ್ರ ಶಿವರಾಜ್ ಕುಮಾರ್ ರೀಮೇಕ್ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಒಪ್ಪಿಗೆ ನೀಡಿದ್ದಾರೆ. ನ್ಯಾಷನಲ್ ಕಾಲೇಜ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ಮಹೂರ್ತ ಸಮಾರಂಭ ನಡೆದಿದೆ.

'ಕವಚ' ಚಿತ್ರದ ಫೋಟೋಶೂಟ್ ಈಗಾಗಲೇ ಮುಗಿದಿದ್ದು, ಚಿತ್ರದಂಡ ಕುತೂಹಲ ಮೂಡಿಸುವ ಫಸ್ಟ್ ಲುಕ್ ಅನ್ನ ರಿಲೀಸ್ ಮಾಡಿದೆ. ಸಿನಿಮಾದಲ್ಲಿ ಶಿವಣ್ಣನ ಜೊತೆಯಾಗಿ ಇಶಾ ಕೊಪ್ಪಿಕರ್ ಹಾಗೂ 'ಒಪ್ಪಂ' ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಬಾಲ ನಟಿ ಮೀನಾಕ್ಷಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಮತ್ತೋರ್ವ ನಾಯಕಿಗಾಗಿ ತಲಾಶ್ ನಡೆದಿದ್ದು, 'ಒಂದು ಮೊಟ್ಟೆಯ ಕಥೆ' ಸಿನಿಮಾದಲ್ಲಿ ಟೀಚರ್ ಪಾತ್ರ ನಿರ್ವಹಿಸಿದ್ದ ಅಮೃತಾ ನಾಯಕ್ ಕೂಡ ಕಾಣಿಸಿಕೊಳ್ಳಲಿದ್ದಾರೆ

 shivarajkumar's kavacha movie first look reveal

'ಕವಚ' ಸಿನಿಮಾವನ್ನ ಜಿ.ವಿ.ಆರ್‌.ವಾಸು ನಿರ್ದೇಶನ ಮಾಡುತ್ತಿದ್ದಾರೆ. ರವಿ ಕಾಳೆ, ತಬಲಾ ನಾಣಿ, ವಸಿಷ್ಠ ಸಿಂಹ, ಸುಧಾ ಬೆಳವಾಡಿ, ಜಯಪ್ರಕಾಶ್‌, ಲಯೇಂದ್ರ ಮುಂತಾದವರು ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದು 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ನಿರ್ಮಾಣ ಮಾಡಿದ್ದ ಸುಧಿ 'ಕವಚ' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಹದಿನಾರು ವರ್ಷದ ನಂತ್ರ ಸಿನಿಮಾಕತೆಗೆ ಮನಸೋತು ಶಿವರಾಜ್ ಕುಮಾರ್ ರಿಮೇಕ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

English summary
Revealed: Shiva Rajkumar starrer 'Kavacha' first look ಹದಿನಾರು ವರ್ಷದ ನಂತರ ರಿಮೇಕ್ ಸಿನಿಮಾದಲ್ಲಿ ಕಾಣಿಸಿಕೊಂಡ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada