'ಹರಿಹರ' ಟೈಟಲ್ ನಲ್ಲಿ ಹೊಸ ಸಿನಿಮಾ ಮಾಡಲಿದ್ದಾರೆ ಶಿವರಾಜ್ ಕುಮಾರ್
Recommended Video

Shivarajkumar Next Movie Name Announced | Filmibeat Kannada
ನಟ ಶಿವರಾಜ್ ಕುಮಾರ್ ಮುಂದಿನ ಸಿನಿಮಾಗಳ ಸಂಖ್ಯೆ ಹನುಮಂತನ ಬಾಲದ ಹಾಗೆ ಬೆಳೆಯುತ್ತಲೇ ಇದೆ. ಈಗಾಗಲೇ ಹತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಶಿವಣ್ಣ ಇದೀಗ ಮತ್ತೊಂದು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
'ಹರಿಹರ' ಎಂಬ ಹೆಸರಿನಲ್ಲಿ ಶಿವರಾಜ್ ಕುಮಾರ್ ಸಿನಿಮಾವೊಂದನ್ನು ಮಾಡಲಿದ್ದಾರೆ. ಪ್ರಮೋದ್ ಚಕ್ರವರ್ತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಮಹದೇವ್.ಬಿ, ಶೇಷು ಚಕ್ರವರ್ತಿ ಮತ್ತು ಸಂಗಪ್ಪ.ಬಿ ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರಂತೆ.

'ಹರಿಹರ' ಚಿತ್ರದಲ್ಲಿ ಎರಡು ಶೇಡ್ ನಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಫ್ಯಾಮಿಲಿ ಓರಿಯೆಂಟೆಡ್ ಕಥೆ ಇರುವ ಈ ಚಿತ್ರ ಪಕ್ಕಾ ಕಮರ್ಶಿಯಲ್ ಆಗಿದೆಯಂತೆ. ಚಿತ್ರದಲ್ಲಿ ಎರಡೇ ಎರಡು ಹಾಡು ಇದ್ದು, ಶಿವಣ್ಣ ಅವರಿಗೆ ಒಂದು ಚೇಂಜ್ ಓವರ್ ನೀಡುವ ಪಾತ್ರ ಸಿನಿಮಾ ಹೊಂದಿದೆಯಂತೆ.
English summary
Kannada Actor Shivarajkumar's next movie titled as Harihara.


Click it and Unblock the Notifications