»   » ಶಿವಣ್ಣರ ಶಿವ ಬಗ್ಗೆ ತಮಿಳು ಸ್ಟಾರ್ ವಿಜಯ್ ಹೇಳಿದ್ದೇನು?

ಶಿವಣ್ಣರ ಶಿವ ಬಗ್ಗೆ ತಮಿಳು ಸ್ಟಾರ್ ವಿಜಯ್ ಹೇಳಿದ್ದೇನು?

Posted By:
Subscribe to Filmibeat Kannada
Shivarajkumar
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಶಿವ' ಚಿತ್ರದ ಬಗ್ಗೆ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮನೆಮಾಡಿದೆ. ಅಷ್ಟೇ ಅಲ್ಲ, ನೆರೆಭಾಷೆಗಳ ಚಿತ್ರರಂಗಗಳಲ್ಲಿ ಕೂಡ ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಮೂಡಿದೆ. ಕಾರಣ, ಮೊದಲನೆಯದಾಗಿ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರು ಈ ಚಿತ್ರವನ್ನು ಶಿವಣ್ಣರ '101'ನೆಯ ಚಿತ್ರವೆಂಬ ಕಾರಣಕ್ಕೆ ಅತ್ಯಂತ ಅದ್ದೂರಿಯಾಗಿ ನಿರ್ಮಿಸಿದ್ದಾರೆ.

ಇನ್ನೊಂದು ವಿಶೇಷವೆಂದರೆ ಶಿವಣ್ಣ ಹಾಗೂ ನಿರ್ದೆಶಕ ಓಂ ಪ್ರಕಾಶ್ ರಾವ್ ಸಂಗಮದಲ್ಲಿ ಈ ಮೊದಲು ಮೂಡಿಬಂದಿದ್ದ 'ಎಕೆ 47' ಚಿತ್ರ ಸೂಪರ್ ಹಿಟ್ ದಾಖಲಿಸಿತ್ತು. ಅಷ್ಟೇ ಅಲ್ಲ, ಓಂ ಚಿತ್ರಗಳು ಇತ್ತೀಚಿಗೆ ನೆಲಕಚ್ಚಿದ್ದು ತೀರಾ ಕಡಿಮೆ. ಹೀಗಾಗಿ ಶಿವಣ್ಣರ ಅಭಿಮಾನಿಗಳು ಮಾತ್ರವಲ್ಲ, ಇಡೀ ಸ್ಯಾಂಡಲ್ ವುಡ್ ಚಿತ್ರರಂಗ ಈ ಚಿತ್ರದತ್ತ ದೃಷ್ಟಿ ನೆಟ್ಟಿದೆ.

ಈ ಮೊದಲೇ ಹೇಳಿದಂತೆ, ನೆರೆರಾಜ್ಯದವರೂ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ತಮಿಳು ಸ್ಟಾರ್ ವಿಜಯ್ ಶಿವಣ್ಣರ 'ಶಿವ' ಚಿತ್ರದ ಬಗ್ಗೆ "ನಮಸ್ಕಾರ ಕನ್ನಡ ಚಿತ್ರಪ್ರೇಮಿಗಳಿಗೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು 225 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅದು ನಮ್ಮ ನೆಚ್ಚಿನ ಶಿವಣ್ಣನ '101'ನೆ ಚಿತ್ರ ಎಂದು ತಿಳಿದಾಗ ತುಂಬಾ ಸಂತೋಷವಾಯ್ತು. ಈಗಾಗಲೇ ಕರ್ನಾಟಕ ಸೇರಿದಂತೆ ತಮಿಳುನಾಡಿನಲ್ಲೂ 'ಶಿವ' ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ಕರ್ನಾಟಕದಲ್ಲಿ 'ಶಿವ' ಚಿತ್ರದ ಬಿಡುಗಡೆ ಬಗ್ಗೆ ಬೆಟ್ಟಿಂಗ್ ನಡೆಯುತ್ತಿದೆ ಎಂದು ತಿಳಿದಾಗ ಆಶ್ಚರ್ಯವಾಯಿತು. ಏಕೆಂದರೆ ಚಿತ್ರ ಬಿಡುಗಡೆ ಮೇಲೂ ಸಹ ಬೆಟ್ ಅಂತ..! ಹೊಸ ದಾಖಲೆಗಳೊಂದಿಗೆ ಶುಕ್ರವಾರ (24.08.2012) ಬಿಡುಗಡೆಗೊಳ್ಳುತ್ತಿರುವ 'ಶಿವ' ಚಿತ್ರಕ್ಕೆ ನನ್ನ ಹೃದಯಪೂರ್ವಕ ಶುಭಾಶಯಗಳು" ಎಂದಿದ್ದಾರೆ ಇಳೆಯ ದಳಪತಿ ಖ್ಯಾತಿಯ ವಿಜಯ್.

ಅಂದಹಾಗೆ, ಕೆಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಎದುರು ನಾಯಕಿಯಾಗಿ ಮೊದಲ ಬಾರಿಗೆ 'ಗ್ಲಾಮರ್ ರಾಣಿ' ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ಸತ್ಯ ಹೆಗಡೆ ಕ್ಯಾಮರಾ ಕೆಲಸ ನಿರ್ವಹಿಸಿದ್ದು ಕರ್ನಾಟಕದಾದ್ಯಂತ 225 ದಾಖಲೆ ಚಿತ್ರಮಂದಿರಗಳೊಂದಿಗೆ ಇದೇ ಶುಕ್ರವಾರ ಅಂದರೆ 24 ಆಗಸ್ಟ್ 2012 ರಂದು 'ಶಿವ' ಬಿಡುಗಡೆಯಾಗಲಿದೆ. (ಒನ್ ಇಂಡಿಯಾ ಕನ್ನಡ)

English summary
Tamil Star Vijay Talked about Hat Trick Hero Shivarajkumar's Most Expected 101 fame movie Shiva. He wished for its Success and told that Its amazing to here a Kannada movie to release at 225 theaters in Karnataka for the first time. 
 
Please Wait while comments are loading...