»   » ಮಗಳ ಮದುವೆಗೆ ಶಿವಣ್ಣ ಭರ್ಜರಿ ಶಾಪಿಂಗ್.!

ಮಗಳ ಮದುವೆಗೆ ಶಿವಣ್ಣ ಭರ್ಜರಿ ಶಾಪಿಂಗ್.!

Posted By:
Subscribe to Filmibeat Kannada

ದೊಡ್ಮನೆ ಕುಟುಂಬದಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ. ಡಾ.ರಾಜ್ ಕುಮಾರ್ ಮೊಮ್ಮಗಳು, ಶಿವರಾಜ್ ಕುಮಾರ್ ಹಿರಿಯ ಪುತ್ರಿ ಡಾ.ನಿರುಪಮ ವಿವಾಹ ಮಹೋತ್ಸವಕ್ಕೆ ಅದ್ದೂರಿ ತಯಾರಿ ನಡೆಯುತ್ತಿದೆ.

ಕಳೆದ ಒಂದು ತಿಂಗಳಿನಿಂದ ಭಾರತೀಯ ಚಿತ್ರರಂಗದ ಎಲ್ಲಾ ದೊಡ್ಡ ಕಲಾವಿದರನ್ನ ಮಗಳ ಮದುವೆಗೆ ಆಹ್ವಾನಿಸುವುದರಲ್ಲಿ ಬಿಜಿಯಾಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ತಮಗಾಗಿ ಮತ್ತು ತಮ್ಮ ಪತ್ನಿಗಾಗಿ ಶಾಪಿಂಗ್ ಮಾಡಿರಲಿಲ್ಲ. [ಶಿವಣ್ಣ ಮಗಳ ಮದುವೆಗೆ ವಿಶೇಷ ವೆಬ್ ಸೈಟ್ ಆರಂಭ]

shivarajkumar

ಹೀಗಾಗಿ, ಮೊನ್ನೆಯಷ್ಟೇ ಪತ್ನಿ ಗೀತಾ ಜೊತೆ ಬೆಂಗಳೂರಿನ ಪ್ರತಿಷ್ಠಿತ ಯು.ಬಿ.ಸಿಟಿಗೆ ಆಗಮಿಸಿದ ಶಿವಣ್ಣ ಭರ್ಜರಿ ಶಾಪಿಂಗ್ ಮಾಡಿದ್ದಾರೆ. ಉಡುಗೆ-ತೊಡುಗೆಯಲ್ಲಿ ಶಿವಣ್ಣ ಯಾವಾಗಲೂ ಕ್ಲಾಸ್. ಹೀಗಿರುವಾಗ, ಮಗಳ ಮದುವೆಯಲ್ಲಿ ಶಿವಣ್ಣ ಮತ್ತು ಗೀತಾ ಎಕ್ಸ್ ಟ್ರಾ ಸ್ಪೆಷಲ್ ಆಗಿರಲೇಬೇಕಲ್ವಾ? [ದೊಡ್ಮನೆ ಮೊಮ್ಮಗಳ ಮದುವೆಯ ಸಂಭ್ರಮದ ಝಲಕ್]

ಅದಕ್ಕಾಗಿ ಶಿವಣ್ಣ ದಂಪತಿ ಬರೋಬ್ಬರಿ 47 ಲಕ್ಷ ರೂಪಾಯಿ ಮೊತ್ತದ ಉಡುಗೆ ಖರೀದಿಸಿದ್ದಾರೆ. ಹಾಗಂತ ಶಿವಣ್ಣ ಆಪ್ತ ವಲಯ ತಿಳಿಸಿದೆ. 47 ಲಕ್ಷ ರೂಪಾಯಿ ಬೆಲೆ ಬಾಳುವ ಉಡುಗೆ ಎಂತದ್ದು? ಅದರಲ್ಲಿ ಶಿವಣ್ಣ ದಂಪತಿ ಹೇಗೆ ಕಾಣ್ತಾರೆ ಅಂತ ಕಣ್ಣಾರೆ ನೋಡುವುದಕ್ಕೆ ಇನ್ನೊಂದೇ ದಿನ ಬಾಕಿ. ['ಅಭಿಮಾನಿ ದೇವರು'ಗಳಿಗೆ ಶಿವಣ್ಣನ ಆದರದ ಆಮಂತ್ರಣ]

ನಾಳೆ (ಆಗಸ್ಟ್ 31) ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಾ.ನಿರುಪಮ ಶಿವರಾಜ್ ಕುಮಾರ್, ಡಾ.ದಿಲೀಪ್ ಅವರ ಕೈಹಿಡಿಯಲಿದ್ದಾರೆ.

    English summary
    According to the sources, Kannada Actor Shivarajkumar has shopped clothes worth 47 lakhs for his daughter's marriage.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada