"ನಾನು ತಪ್ಪು ಮಾಡಿದ್ರೆ ದೇವ್ರು ನೋಡ್ಕೊತ್ತಾನೆ ಬಿಡಿ"; ಮಾಧ್ಯಮಗಳ ವಿರುದ್ಧ ಶಿವಣ್ಣ ಅಸಮಾಧಾನ
ನಟ ಶಿವರಾಜ್‌ಕುಮಾರ್ ಮಾಧ್ಯಮಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಆದರೂ ನಮ್ಮನ್ನು ಯಾಕೆ ಕೇಳ್ತೀರಾ? ಎಲ್ಲದಕ್ಕೂ ನನ್ನ ಯಾಕೆ ಟಾರ್ಗೆಟ್ ಮಾಡ್ತೀರಾ? ನಾನು ತಪ್ಪು ಮಾಡಿದ್ರೆ ದೇವ್ರೇ ನೋಡಿಕೊಳ್ತಾನೆ ಎಂದು ಶಿವಣ್ಣ ಹೇಳಿದ್ಧಾರೆ.
ತೆಲುಗಿನ 'ಪೆದ್ದಿ' ಚಿತ್ರದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದಾರೆ. ಸಿನಿಮಾ ತೆರೆಕಂಡು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಶಿವಣ್ಣನ ಪಾತ್ರದ ಬಗ್ಗೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಪ್ರಚಾರ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಅವರು ಮಾತನಾಡಿದ್ದಾರೆ. Cinema Express ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸುದ್ದಿವಾಹಿನಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ ಇದು. ಎಲ್ಲಾ ಭಾಷೆಯ ಸಿನಿಮಾಗಳು ಎಲ್ಲಾ ರಾಜ್ಯಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುವಂತಾಗಿದೆ. ಇದೇ ವಿಚಾರದ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ಎಲ್ಲಾ ಭಾಷೆಗಳನ್ನು ಗೌರವಿಸಬೇಕು, ಎಲ್ಲಾ ಸಿನಿಮಾಗಳನ್ನು ಸ್ವಾಗತಿಸಬೇಕು. ಪವನ್ ಕಲ್ಯಾಣ್ ಸರ್ ಒಂದೊಳ್ಳೆ ಮಾತು ಹೇಳಿದ್ರು. ನಾವು ಕನ್ನಡ ಸಿನಿಮಾಗಳನ್ನು ಆದರಿಸುತ್ತೇವೆ ಎಂದಿದ್ರು. ಅದೇ ರೀತಿ ನಾವು ಕೂಡ ಬೆಂಬಲಿಸಬೇಕು. ಥಿಯೇಟರ್ ಸಮಸ್ಯೆ ಅದು, ಇದು ಅಂತಾರೆ. ಅದೆಲ್ಲಾ ನಮ್ಮ ಕೈಯಲ್ಲಿ ಇಲ್ಲ. ಫಿಲ್ಮ್ ಚೇಂಬರ್‌ಗಳಿವೆ, ಅವ್ರು ಮಾತನಾಡಬೇಕು. ಎಲ್ಲದ್ದಕ್ಕೂ ಮಾಧ್ಯಮದವರು ನನ್ನ ಪ್ರತಿಕ್ರಿಯೆ ಕೇಳುವುದು ಸರಿಯಲ್ಲ ಎಂದಿದ್ದಾರೆ.
ನಮ್ಮ ಕೈಯಲ್ಲಿ ಏನು ಇಲ್ಲ. ನಾವು ಬೆಂಬಲಿಸಿದ್ರು, ಮಾತಾಡ್ತೀರಾ.. ವಿರುದ್ಧವಾಗಿ ಮಾತನಾಡಿದ್ರು ಕೇಳ್ತೀರಾ.. ಯಾಕೆ ನೀವು ಟಾರ್ಗೆಟ್ ಮಾಡ್ತೀರಾ? ಎಲ್ಲಾ ವಿಚಾರಕ್ಕೂ ಟಾರ್ಗೆಟ್ ಮಾಡ್ತೀರಾ ಎಂದು ಶಿವರಾಜ್‌ಕುಮಾರ್ ಪ್ರಶ್ನಿಸಿದ್ದಾರೆ. "ನಾನು ಪ್ರಿಂಟ್ ಮೀಡಿಯಾ ಬಗ್ಗೆ ಮಾತನಾಡ್ತಿಲ್ಲ, ಸ್ಯಾಟಲೈಟ್ ಮೀಡಿಯಾ ಬಗ್ಗೆ ಹೇಳ್ತಿದ್ದೀನಿ. ಸ್ವಾರಿ.. ನಾನು ಯಾವುದಕ್ಕೂ ಹೆದರಲ್ಲ. ಸತ್ಯ ಮಾತಾಡ್ತೀನಿ. ನಾನು ಪ್ರಾಮಾಣಿವಾಗಿದ್ದೀನಿ. ನಾನು ತಪ್ಪು ಮಾಡಿದ್ರೆ ದೇವ್ರು ನೋಡ್ಕೊತ್ತಾನೆ ಬಿಡಿ" ಎಂದಿದ್ದಾರೆ.
ಇತ್ತೀಚೆಗೆ ಎಷ್ಟೂ ವಿವಾದಗಳು ಬಂತು.. ದೇವರು ನೋಡ್ಕೊಬೇಕಿತ್ತಲ್ಲ. ದೇವ್ರು ಇನ್ನು ಬೇರೆ ತರ ನೋಡ್ಕೊತ್ತಿದ್ದಾನೆ. ಇವತ್ತು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಪೋಸ್ಟ್ ಮಾಡ್ತಾರೆ. ಅದು ಅವ್ರ ಸಂಪಾದನೆ ಮಾಡ್ತಾರೆ.. ಮಾಡ್ಕೊಳ್ಳಿ.. ಬೇರೆ ವಿಚಾರದಲ್ಲಿ ಫಿಲ್ಮ್ ಚೇಂಬರ್‌ಗಳಿವೆ. ಅವ್ರು ಮಾತನಾಡಬೇಕು ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ನಟಿಸುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ಈಗ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕ್ಯಾನ್ಸರ್ ಸಮಸ್ಯೆಯಿಂದ ಬಳಲಿದ್ದ ಶಿವಣ್ಣ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದು ಬಂದಿದ್ದರು. ಎರಡ್ಮೂರು ತಿಂಗಳು ವಿಶ್ರಾಂತಿ ಪಡೆದ ಬಳಿಕ ಮತ್ತೆ ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗಿದ್ದರು. ಕನ್ನಡದ 'ಡ್ಯಾಡ್', 'ಬೇಲ್', '666 ಆಪರೇಷನ್ ಡ್ರೀಮ್ ಥಿಯೇಟರ್' ಹೀಗೆ ಒಂದರ ಹಿಂದೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನ 'ಪೆದ್ದಿ' ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. 'ಗುಮ್ಮಡಿ ನರಸಯ್ಯ' ಎಂಬ ತೆಲುಗು ಬಯೋಪಿಕ್ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ.
ಶಿವರಾಜ್‌ಕುಮಾರ್ ಈಗಾಗಲೇ ತಮಿಳಿನ 'ಜೈಲರ್'-2 ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಇತ್ತೀಚೆಗೆ ಪ್ರೊಡಕ್ಷನ್ ನಂ.1(ಇನ್ನು ಹೆಸರಿಡದ ಸಿನಿಮಾ) ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮತ್ತೊಂದು ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications