ಶಿವ ಮೂರನೇ ಕಣ್ಣು ತೆರೆಯುತ್ತಾನೆ: ಶಿವರಾಜ್ ಕುಮಾರ್

<ul id="pagination-digg"><li class="previous"><a href="/news/hat-trick-hero-shivarajkumar-toogudeepa-srinivas-066483.html">« Previous</a>

ಕಳೆದ 25 ವರ್ಷಗಳಿಂದ ಚಿತ್ರರಂಗದಲ್ಲಿರುವ ಶಿವಣ್ಣ ಯಾವುದೇ ವಾದ ವಿವಾದಗಳಿಗೆ ಗುರಿಯಾದವರಲ್ಲ. ಅಷ್ಟೇ ಅಲ್ಲದೇ ನಿರ್ಮಾಪಕರ ಪಾಲಿಗೆ ಹಾಟ್ ಕೇಕ್ ಆಗಿದ್ದವರು. ಈಗ ಏಕಾಏಕಿ ದೂರು ನೀಡುವುದು ಸೂರಪ್ಪ ಬಾಬು, ಸಹಜವಾಗಿಯೇ ಶಿವಣ್ಣ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶಿವಣ್ಣನ ಅಭಿಮಾನಿಗಳು ತಮಗೆ ಬೆದರಿಕೆ ಕರೆ ಮಾಡುತ್ತಿದ್ದಾರೆಂದು ಸ್ವತಃ ಸೂರಪ್ಪ ಬಾಬು ಹೇಳಿಕೊಂಡಿದ್ದರು.

ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕರಲ್ಲಿ ಒಬ್ಬರಾದ ಸೂರಪ್ಪ ಬಾಬು, ಬಹಳಷ್ಟು ಚಿತ್ರಗಳನ್ನು ನಿರ್ಮಿಸಿದ್ದಾರೆ. ಪ್ರಮುಖವಾಗಿ ಸಾಹಸಸಿಂಹ ಡಾ ವಿಷ್ಣುವರ್ಧನ್ ಚಿತ್ರವನ್ನು ನಿರ್ಮಿಸಿದ್ದ ಸೂರಪ್ಪ ಬಾಬು, ಈ ಮೊದಲು ಶಿವರಾಜ್ ಕುಮಾರ್ ಅಭಿನಯದ 'ಬಂಧು ಬಳಗ' ಎಂಬ ಚಿತ್ರ ಕೂಡ ನಿರ್ಮಿಸಿದವರು. ಈಗ ದೂರು ದಾಖಲಿಸಲು ಕಾರಣವಾಗಿರುವುದು ಅವರು ಕೊಟ್ಟಿದ್ದರೆನ್ನಲಾದ ರು. 20 ಲಕ್ಷ ಮುಂಗಡ ಹಣ.

ದಿವಂಗತ ತೂಗುದೀಪ ಶ್ರೀನಿವಾಸ್ ಅವರಿಗೆ ಸೂರಪ್ಪ ಬಾಬು ಮಾಡಿರುವ ಅಪಮಾನದಿಂದ ಕೋಪಗೊಂಡು ಕುದಿಯುತ್ತಿರುವ ಅಖಿಲ ಕರ್ನಾಟಕ ದರ್ಶನ್ ಅಭಿಮಾನಿಗಳ ಸಂಘ, ಶ್ರೀಮತಿ ಮೀನಾ ತೂಗುದೀಪ ಶ್ರೀನಿವಾಸ್ ಅವರ ಕಾಲಿಗೆ ಬಿದ್ದು ಸೂರಪ್ಪ ಬಾಬು ಕ್ಷಮೆಯಾಚಿಸಬೇಕು ಎಂದು ಭಾನುವಾರ (ಜು.8) ಸಂಜೆ ಆಗ್ರಹಿಸಿದೆ. (ಯೂಟ್ಯೂಬ್ ವಿಡಿಯೋ)

ಗ್ರೀನ್ ಹೌಸ್ ರಾಜ್ ಮಿಲನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯಕರ್ತರು ಮಾತನಾಡುತ್ತಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ದರ್ಶನ್ ಅಭಿಮಾನಿಗಳು ಹಾಗೂ ಮಾಧ್ಯಮದವರ ಮುಂದೆ ಮೀನಾ ಅವರ ಕಾಲಿಗೆ ಬಿದ್ದು ಸೂರಪ್ಪ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ದರ್ಶನ್ ಅಭಿಮಾನಿಗಳು ಎಚ್ಚರಿಸಿದ್ದಾರೆ.

ಕ್ಷಮೆ ಕೋರಲು ಸೂರಪ್ಪ ಬಾಬುಗೆ ಮಂಗಳವಾರದ (ಜು.10)ತನಕ ಗಡುವು ನೀಡಲಾಗಿದೆ. ಇದೇ ವೇಳೆ ಈ ಘಟನೆಗೆ ಸಂಬಂಧಿಸಿದಂತೆ ನಟ ಶಿವರಾಜ್ ಕುಮಾರ್ ಆಡಿದ ಮಾತು ಎಲ್ಲರ ಗಮನಸೆಳೆಯಲಿರುವುದು ಖಂಡಿತ. ಸೂರಪ್ಪ ಬಾಬುರ ಮುಂದಿನ ನಡೆ ಹಾಗೂ ದರ್ಶನ್ ಅಭಿಮಾನಿಗಳು ಇಡಬಹುದಾದ ಮುಂದಿನ ಹೆಜ್ಜೆ ಏನಿರಬಹುದೆಂಬುದು ಈಗ ಸ್ಯಾಂಡಲ್ ವುಡ್ ನಲ್ಲಿ ಎಲ್ಲರಿಂದಲೂ ಚರ್ಚಿಸಲ್ಪಡುತ್ತಿರುವ ವಿಷಯ. (ಏಜೆನ್ಸೀಸ್)

<ul id="pagination-digg"><li class="previous"><a href="/news/hat-trick-hero-shivarajkumar-toogudeepa-srinivas-066483.html">« Previous</a>

More from Filmibeat

English summary
Hat Trick Hero Shivarajkumar told that this is not correct to speak using bad words on late actor Toogudeepa Srinivas in drunken state. Before this, producer Surappa Babu filed a case on Shivarajkumar in Karnataka Film Chamber of Commerce (KFCC) to get the Hat-trick Hero to return the advance paid to him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X