For Quick Alerts
  ALLOW NOTIFICATIONS  
  For Daily Alerts

  1000 ಸ್ಕ್ರೀನ್‌ಗಳಲ್ಲಿ ಭಜರಂಗಿ ಅಬ್ಬರ!

  |

  ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ2 ಕೂಡ ಒಂದು. ಭಜರಂಗಿ2 ಇದೆ ಅಕ್ಟೋಬರ್ 29ಕ್ಕೆ ತೆರೆಕಾಣಲಿದೆ. ಹಾಗಾಗಿ ಚಿತ್ರತಂಡ ಸದ್ಯ ರಿಲೀಸ್‌ ಕಾರ್ಯದಲ್ಲಿ ನಿರತವಾಗಿದೆ. ಸದ್ಯ ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಬೆಂಗಳೂರಿನಲ್ಲಿ ಪ್ರಿ-ರಿಲೀಸ್‌ ಈವೆಂಟ್ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ರಾಕಿಂಗ್‌ ಸ್ಟಾರ್ ಯಶ್ ಮತ್ತು ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ ಮುಖ್ಯ ಅತಿಥಿಗಳು.

  ಲಾಕ್‌ಡೌನ್‌ ಬಳಿಕ ಸಾವಿರ ಸ್ಕ್ರೀನ್‌ಗಳಲ್ಲಿ ತೆರೆಗೆ ಬರ್ತಿರೋ ಮೊದಲ ಚಿತ್ರ ಭಜರಂಗಿ2!

  ಭಜರಂಗಿ2 ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ. ಕನ್ನಡ ಮತ್ತು ತೆಲುಗಿನಲ್ಲಿ ಪ್ರತ್ಯೇಕವಾಗಿ 350 ರಿಂದ 400 ಚಿತ್ರಮಂದಿರಗಳಲ್ಲಿ ಭಜರಂಗಿ ಬಿಡುಗಡೆ ಆಗುತ್ತಿದೆ. ಇದರ ಹೊರತಾಗಿ ಕನ್ನಡ ಮತ್ತು ತೆಲುಗು ಅವತರಣಿಕೆಯಲ್ಲಿ ದೇಶಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್‌ ಆಗುತ್ತಿದೆ. ಹಾಗಾಗಿ ಸುಮಾರು 1000 ಸ್ಕ್ರೀನ್ ಗಳಲ್ಲಿ ಭಜಂಗಿ2 ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕ ಜಯಣ್ಣ ಸ್ಪಷ್ಟಪಡಿಸಿದ್ದಾರೆ. ಎರಡು ದಿನ ಮುಂಚಿತವಾಗಿಯೇ ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್ ಆಗಲಿದೆ.

  ಭಜರಂಗಿ2 ಟೀಸರ್, ಟ್ರೈಲರ್ ಮತ್ತು ಹಾಡುಗಳ ಮೂಲಕವೇ ದಾಖಲೆಯನ್ನು ನಿರ್ಮಿಸಿದೆ. ಜೊತೆಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿರುವ ಸಿನಿಮಾ ಭಜರಂಗಿ. ಭಜರಂಗಿ2 ಮೂಲಕ ಶಿವರಾಜ್ ಕುಮಾರ್ ಅವರನ್ನ ಕಣ್ಣು ತುಂಬಿ ಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಭಜರಂಗಿ, ವಜ್ರಕಾಯ, ಬಳಿಕ ಭಜರಂಗಿ2 ಮೂಲಕ ನಿರ್ದೇಶಕ ಎ.ಹರ್ಷ ಮತ್ತು ಶಿವರಾಜ್‌ಕುಮಾರ್‌ ಒಂದಾಗಿದ್ದಾರೆ. ಭಜರಂಗಿ ಒಂದರ ಸಕ್ಸಸ್ ಭಜರಂಗಿ 2 ಚಿತ್ರವನ್ನ ಮಾಡಲು ಸ್ಪೂರ್ತಿಯಾಗಿದೆ. ಭಜರಂಗಿಂತಲೂ ಹೆಚ್ಚಿನ ನಿರೀಕ್ಷೆ ಈ ಚಿತ್ರದ ಮೇಲಿದೆ. ಭಜರಂಗಿಗೆ ಅರ್ಜುನ್ ಜನ್ಯ ಸಂಗೀತ ಇದೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ನಟಿ ಭಾವನಾ ಮೆನನ್ ಶ್ರುತಿ ಮತ್ತು ಭಜರಂಗಿ ಲೋಕಿ ಪ್ರಮುಖ ಪಾತ್ರಗಳಲ್ಲಿ ಅಬ್ಬರಿಸಲಿದ್ದಾರೆ. ನಟಿ ಶೃತಿ ಇದೇ ಮೊದಲ ಬಾರಿಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಭಾವನ ಮೆನನ್ ಅವತಾರವನ್ನೂ ಈಗಾಗ್ಲೇ ಸಿನಿಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಭಜರಂಗಿ ಭಾಗ ಒಂದಕ್ಕಿಂದತೂ, ಖಳನಟನಾಗಿ ಹೆಚ್ಚು ಗಮನ ಸೆಳೆಯುತ್ತಾರೆ ಭಜರಂಗಿ ಲೋಕಿ.

  ಕೊರೊನಾ ಬಳಿಕ ಕೋಟಿಗೊಬ್ಬ ಸಲಗಾ ನಂತರ ರಿಲೀಸ್ ಆಗ್ತಾ ಇರುವ ಮೂರನೇ ಬಿಗ್ ಬಜೆಟ್ ಸಿನಿಮಾ ಭಜರಂಗಿ2. ಭಜರಂಗಿಯ ಮೇಲೆ ಎಲ್ಲಿಲ್ಲದ ನಿರೀಕ್ಷೆ ಮನೆ ಮಾಡಿದೆ. ಮನರಂಜನೆಗಾಗಿ ಕಾಯ್ತಾ ಇದ್ದಂತಹ ಸಿನಿರಸಿಕರಿಗೆ ಭಜರಂಗಿ2 ರಸದೌತಣ ಬಡಿಸುವುದಕ್ಕೆ ಇದೇ ವಾರ ತೆರೆಗೆ ಬರುತ್ತಿದೆ. ಭಾರತದಾದ್ಯಂತ ಒಂದು ಸಾವಿರ ಸ್ಕ್ರೀನ್ ಗಳಲ್ಲಿ ಭಜರಂಗಿ ಅಬ್ಬರಿಸಲಿದ್ದಾನೆ. ಕರೋನಾ ಲಾಕ್‌ ಡೌನ್ ತೆರವುಗೊಳಿಸಿದ ನಂತರ ದಾಖಲೆ ಮಟ್ಟದ ಚಿತ್ರಮಂದಿರಗಳಲ್ಲಿ ಭಜರಂಗಿ2 ತೆರೆಗೆ ಬರುತ್ತಿದೆ.

  ಭಜರಂಗಿ-2 ಸಿನಿಮಾ ಹೆಚ್ಚಿನ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗ್ತಿರೋದು ಕೂಡ ದಾಖಲೆಯೇ. ಆದ್ರೆ ಸಿನಿಮಾ ರಿಲೀಸ್ ಬಳಿಕ ಪ್ರೇಕ್ಷಕರು ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆ. ನಿರೀಕ್ಷೆಯ ಮಟ್ಟವನ್ನು ಭಜರಂಗಿ ತಲುಪುತ್ತದೆಯಾ ಅನ್ನೋದು ರಿಲೀಸ್‌ ಬಳಿಕ ಗೊತ್ತಾಗಲಿದೆ.

  English summary
  Kannada Movie Bhajarangi2 Will be Release In 1000 Theatre Across India,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X