ಶಿವಣ್ಣನ ಅಭಿಮಾನಿಗಳಿಗೆ ಈ ವರ್ಷ ಸಿಗಲಿದೆ ಭರ್ಜರಿ ಗಿಫ್ಟ್

Recommended Video

ಬ್ಯಾಕ್ ಟು ಬ್ಯಾಕ್ ಧಮಾಕಾ ಕೊಡ್ತಾರಂತೆ ಶಿವಣ್ಣ | FILMIBEAT KANNADA

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯುಸಿಯಸ್ಟ್ ನಟ. ಕರುನಾಡ ಚಕ್ರವರ್ತಿ ಸಾಲು ಸಾಲು ಸಿನಿಮಾಗಳನ್ನು ತನ್ನ ಬತ್ತಳಿಕೆಯಲ್ಲಿ ಇಟ್ಟು ಕೊಂಡಿದ್ದಾರೆ. ವಿಭಿನ್ನ ಸಿನಿಮಾಗಳನ್ನು ಆಯ್ದು ಕೊಳ್ಳುತ್ತ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಶಿವಣ್ಣ ಈ ವರ್ಷ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲು ಸಜ್ಜಾಗಿದ್ದಾರೆ.

ಟಗರು ಶಿವನ ಗುಂಗಿನಲ್ಲೆ ಇರುವ ಹ್ಯಾಟ್ರಿಕ್ ಹೀರೋ ಅಭಿಮಾನಿಗಳಿಗೆ ಈ ವರ್ಷ ಮತ್ತಷ್ಟು ಸರ್ಪೈಸ್ ಗಳು ಕಾದಿವೆ. ಶಿವಣ್ಣ ಅಭಿನಯದ ಸಾಲು ಸಾಲು ಸಿನಿಮಾಗಳು ರಿಲೀಸ್ ಗೆ ಭರದ ಸಿದ್ಧತೆ ನಡೆಸುತ್ತಿವೆ.

ಹೌದು, ಈ ಒಂದೆ ವರ್ಷದಲ್ಲಿ ಶಿವರಾಜ್ ಕುಮಾರ್ ಅಭಿನಯದ ನಾಲ್ಕು ಸಿನಿಮಾಗಳು ತೆರೆಗೆ ಬರುವ ಸಾಧ್ಯತೆ ಇದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡ್ತಾ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿರುವ ಕರುನಾಡ ಚಕ್ರವರ್ತಿ 2019ರಲ್ಲಿ ನಾಲ್ಕು ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಅಂದ್ಹಾಗೆ ಈ ವರ್ಷ ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿರುವ ಸಿನಿಮಾಗಳು ಯಾವುವು? ಮುಂದೆ ಓದಿ..

ಈ ವರ್ಷದ ಶಿವಣ್ಣನ ಮೊದಲ ಸಿನಿಮಾ 'ಕವಚ'

ಈ ವರ್ಷದ ಶಿವಣ್ಣನ ಮೊದಲ ಸಿನಿಮಾ 'ಕವಚ'

ಶಿವರಾಜ್ ಕುಮಾರ್ 'ಕವಚ' ಚಿತ್ರದ ಮೂಲಕ ಈ ವರ್ಷದ ಖಾತೆ ತೆರೆದಿದ್ದಾರೆ. ವಿಭಿನ್ನವಾದ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಹ್ಯಾಟ್ರಿಕ್ ಹೀರೋಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅನೇಕ ವರ್ಷಗಳ ಬಳಿಕ 'ಕವಚ' ಚಿತ್ರದ ಮೂಲಕ ರಿಮೇಕ್ ಸಿನಿಮಾಗೆ ಬಣ್ಣ ಹಚ್ಚಿದ್ರು. ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ ಮನಕಲಕುವ ಅಭಿನಯಕ್ಕೆ ಅಭಿಮಾನಿಗಳು ಭಾವುಕರಾಗಿದ್ರು. ಯಶಸ್ಸಿನ ಚಿತ್ರದೊಂದಿಗೆ ಈ ವರ್ಷ ಪ್ರಾರಂಭಿಸಿದ್ದಾರೆ ಶಿವರಾಜ್ ಕುಮಾರ್.

ತೆರೆಗೆ ಬರಲು ಸಜ್ಜಾಗಿದೆ 'ರುಸ್ತುಂ'

ತೆರೆಗೆ ಬರಲು ಸಜ್ಜಾಗಿದೆ 'ರುಸ್ತುಂ'

ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ 'ರುಸ್ತುಂ' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಟ್ರೈಲರ್ ಮೂಲಕ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿರುವ 'ರುಸ್ತುಂ' ಮುಂದಿನ ತಿಂಗಳು ಜೂನ್ 14ಕ್ಕೆ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಸಾಹಸ ನಿರ್ದೇಶಕ ರವಿ ವರ್ಮಾ ಸಾರಥ್ಯದಲ್ಲಿ ಮೂಡಿ ಬಂದ ಮೊದಲ ಸಿನಿಮಾ 'ರುಸ್ತುಂ'. ಈ ಚಿತ್ರದಲ್ಲಿ ಶಿವಣ್ಣ ಮತ್ತೊಮ್ಮೆ ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ.

ಚಿತ್ರೀಕರಣ ಮುಗಿಸಿದ 'ದ್ರೋಣ'

ಚಿತ್ರೀಕರಣ ಮುಗಿಸಿದ 'ದ್ರೋಣ'

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಬಹು ನಿರೀಕ್ಷೆಯ ಚಿತ್ರ 'ದ್ರೋಣ' ಈಗಾಗಲೆ ಚಿತ್ರೀಕರಣ ಮುಗಿಸಿದೆ. ಸದ್ಯ ಪೊಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ 'ದ್ರೋಣ' ಸಧ್ಯದಲ್ಲೇ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ದ್ರೋಣ' ಚಿತ್ರಕ್ಕೆ ಪ್ರಮೋದ್ ಚಕ್ರವರ್ತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವಣ್ಣನಿಗೆ ನಾಯಕಿಯಾಗಿ ಬಹುಭಾಷ ನಟಿ ಇನಿಯಾ ಕಾಣಿಸಿಕೊಳ್ಳುತ್ತಿದ್ದಾರೆ.

ಮುಕ್ತಾಯದ ಹಂತದಲ್ಲಿ 'ಆನಂದ್' ಸಿನಿಮಾ

ಮುಕ್ತಾಯದ ಹಂತದಲ್ಲಿ 'ಆನಂದ್' ಸಿನಿಮಾ

ಬ್ಯಾಕ್ ಟು ಬ್ಯಾಕ್ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಇರುವ ಶಿವರಾಜ್ ಕುಮಾರ್ 'ದ್ರೋಣ' ಮತ್ತು 'ರುಸ್ತುಂ' ಚಿತ್ರೀಕರಣ ಗ್ಯಾಪ್ ನಲ್ಲೆ 'ಆನಂದ್' ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಮೊದಲ ಸೂಪರ್ ಹಿಟ್ 'ಆನಂದ್' ಸಿನಿಮಾದ ಶೀರ್ಷಿಕೆಯನ್ನೆ ಮತ್ತೆ ಬಳಸಿಕೊಳ್ಳಲಾಗಿದೆ. ಶಿವಲಿಂಗ ಖ್ಯಾತಿಯ ಪಿ ವಾಸು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಆನಂದ್' ಸಿನಿಮಾ ಈ ವರ್ಷದಲ್ಲೆ ತೆರೆಗೆ ಬರುವ ಸಾಧ್ಯತೆ ಇದೆ.

'ಮೈ ನೇಮ್ ಇಸ್ ಅಂಜಿ' ಮತ್ತು 'ಎಸ್ ಆರ್ ಕೆ'

'ಮೈ ನೇಮ್ ಇಸ್ ಅಂಜಿ' ಮತ್ತು 'ಎಸ್ ಆರ್ ಕೆ'

ಸದ್ಯ ಅಧಿಕೃತವಾಗಿ ಗ್ರೀನ್ ಸಿಗ್ನಲ್ ನೀಡಿರುವ ಸಿನಿಮಾಗಳಲ್ಲಿ ಇನ್ನು ಎರಡು ಸಿನಿಮಾಗಳು ಇವೆ. 'ಎಸ್ ಆರ್ ಕೆ' ಮತ್ತು 'ಮೈ ನೇಮ್ ಇಸ್ ಅಂಜಿ'. 'ದ್ರೋಣ' ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆ 'ಮೈ ನೇಮ್ ಇಸ್ ಅಂಜಿ' ಪ್ರಾರಂಭಿಸುವ ಸಾಧ್ಯತೆ ಇದೆ. ಜೊತೆಗೆ 'ಎಸ್ ಆರ್ ಕೆ' ಸಿನಿಮಾ ಕೂಡ ಪ್ರಾರಂಭವಾಗಲಿದೆ. ಮೈ ನೇಮ್ ಇಸ್ ಅಂಜಿ' ನಿರ್ದೇಶಕ ಹರ್ಷ ಸಾರಥ್ಯದಲ್ಲೆ ಮೂಡಿ ಬರಲಿದೆ. ಹರ್ಷ ಮತ್ತು ಶಿವಣ್ಣನ ಕಾಂಬಿನೇಷನ್ ನಲ್ಲಿ ಎರಡು ಹಿಟ್ ಸಿನಿಮಾಗಳು ಬಂದಿವೆ. ಈಗ ಮೂರನೆ ಬಾರಿ ಒಂದಾಗುತ್ತಿದ್ದಾರೆ. ಇನ್ನು 'ಎಸ್ ಆರ್ ಕೆ' ಲಕ್ಕಿ ಗೋಪಾಲ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಸಿನಿಮಾ.

More from Filmibeat

English summary
Hatrick hero Shivaraj Kumar starrer 'Rustum', 'Drona' and 'Anand' movies are released for the same year on 2019. The Kavacha film has already been released for this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X