ಬರ್ತ್‌ಡೇಗೂ ಮುನ್ನ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಜುಲೈ 12ಕ್ಕೆ ಶಿವಣ್ಣ 6ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಸಾಕಷ್ಟು ಸರ್‌ಪ್ರೈಸ್‌ಗಳು ಕಾದಿದೆ.

ಸಾಕಷ್ಟು ಸಿನಿಮಾಗಳಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಆ ಸಿನಿಮಾಗಳ ಅಪ್‌ಡೇಟ್, ಟೀಸರ್, ಪೋಸ್ಟರ್‌ಗಳು ಉಡುಗೊರೆಯಾಗಿ ರಿವೀಲ್ ಆಗಲಿದೆ. ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಸಿನಿಮಾ ಕೂಡ ಭಾರೀ ಕುತೂಹಲ ಮೂಡಿಸಿದೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಕೊಂಚ ತಡವಾಗುತ್ತಿದೆ. ಅಕ್ಟೋಬರ್ ವೇಳೆಗೆ ರಣಗಲ್ ದರ್ಬಾರ್ ಗ್ಯಾರೆಂಟಿ ಎನ್ನಲಾಗುತ್ತಿದೆ.

Shivarajkumar starrer Bhairathi Ranagal Shooting Completed

ಸೂಪರ್ ಹಿಟ್ 'ಮಫ್ತಿ' ಪ್ರೀಕ್ವೆಲ್ ಇದು. ಚಿತ್ರದಲ್ಲಿ ರುಕ್ಮಿಣಿ ವಸಂತ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈಗಾಗಲೇ ಮಾಫಿಯಾ ಡಾನ್ ಭೈರತಿ ರಣಗಲ್ ಆರ್ಭಟ ನೋಡಿದ್ದೇವೆ. ಆದರೆ ಆತನ ಹಿನ್ನೆಲೆ ಏನು? ಆತ ಡಾನ್ ಆಗಿದ್ದು ಯಾಕೆ? ಎನ್ನುವ ಪ್ರಶ್ನೆಗೆ ಈ ಚಿತ್ರಕ್ಕೆ ಉತ್ತರ ಸಿಗಲಿದೆ. ಈಗಾಗಲೇ ಆ ಬಗ್ಗೆ ಸಣ್ಣ ಸುಳಿವು ಸಿಕ್ಕಿದೆ. ರಣಗಲ್ ವಕೀಲನಾಗಿದ್ದ ಎನ್ನುವುದನ್ನು ಚಿತ್ರತಂಡ ರಿವೀಲ್ ಮಾಡಿದೆ. ಕಾನೂನು ರಕ್ಷಿಸುವ ವಕೀಲನೇ ಕಾನೂನು ಕೈಗೆ ತಗೊಂಡಿದ್ದು ಯಾಕೆ? ಎನ್ನುವುದನ್ನು ತೆರೆಮೇಲೆ ನೋಡಬೇಕಿದೆ.

ಸದ್ಯ 'ಭೈರತಿ ರಣಗಲ್' ಚಿತ್ರೀಕರಣ ಮುಗಿಸಿ ಚಿತ್ರತಂಡ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ ಕೊಟ್ಟಿದೆ. ಶಿವಣ್ಣ ಮೂರ್ನಾಲ್ಕು ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ನಟಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪತ್ನಿ ಪರ ಶಿವಮೊಗ್ಗದಲ್ಲಿ ಪ್ರಚಾರಕ್ಕೆ ಹೋಗಿದ್ದರು. ಹಾಗಾಗಿ 2 ತಿಂಗಳು ಚಿತ್ರೀಕರಣದಿಂದ ಬ್ರೇಕ್ ಪಡೆದಿದ್ದರು. ಹಾಗಾಗಿ 'ಭೈರತಿ ರಣಗಲ್' ಕೊಂಚ ತಡವಾಗಿತ್ತು. ಇದೀಗ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯಲಾಗಿದೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತಿದೆ.

Shivarajkumar starrer Bhairathi Ranagal Shooting Completed

ಇಡೀ ಚಿತ್ರತಂಡ ಪೂಜೆ ಸಲ್ಲಿಸಿ ಕುಂಬಳಕಾಯಿ ಒಡೆದು ಚಿತ್ರೀಕರಣ ಮುಗಿಸಿದೆ. ಶಿವಣ್ಣ- ಶ್ರೀಮುರಳಿ ನಟಿಸಿದ್ದ 'ಮಫ್ತಿ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಅದರ ಬೆನ್ನಲ್ಲೇ ಪ್ರೀಕ್ವೆಲ್ ಬಗ್ಗೆ ಚರ್ಚೆ ನಡೆದಿತ್ತು. ನರ್ತನ್ ಬೇರೆ ಸಿನಿಮಾಗಳ ಕಡೆ ಮುಖ ಮಾಡಿದ್ದರು. ಬಳಿಕ ಕೋವಿಡ್ ಕಾರಣದಿಂದ ತಡವಾಗಿತ್ತು. ಇಲ್ಲದಿದ್ದರೆ ಶಿವಣ್ಣ 125ನೇ ಚಿತ್ರ 'ಭೈರತಿ ರಣಗಲ್' ಆಗಬೇಕಿತ್ತು. ಅಂತೂ ಇಂತೂ ಚಿತ್ರೀಕರಣ ಮುಗಿದಿದೆ.

ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲೇ 'ಭೈರತಿ ರಣಗಲ್' ಸಿನಿಮಾ ನಿರ್ಮಾಣವಾಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ಬರ್ತಿದ್ದು ಬೇರೆ ಭಾಷೆಗಳಿಗೂ ಡಬ್ ಆಗಲಿದೆ. ರಾಹುಲ್ ಬೋಸ್, ದೇವರಾಜ್, ಛಾಯಾ ಸಿಂಗ್, ಮಧು ಗುರುಸ್ವಾಮಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರೀಕರಣ ಮುಗಿದಿದ್ದು ಜುಲೈ 12ಕ್ಕೆ ಶಿವಣ್ಣನ ಬರ್ತ್‌ಡೇ ಸಂಭ್ರಮದಲ್ಲಿ ಟೀಸರ್ ಬಿಡುಗಡೆ ಪ್ಲ್ಯಾನ್ ನಡೀತಿದೆ.

More from Filmibeat

English summary
It's a Wrap for Bhairathi Ranagal Shoot, Team is eyeing for Oct Release
Read more about: shivarajkumar narthan sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X