'ಭೈರತಿ ರಣಗಲ್' ತೆಲುಗು, ತಮಿಳು ಕಥೆ ಏನಾಯ್ತು? ಹೇಗಿದೆ ರೆಸ್ಪಾನ್ಸ್?
ಕನ್ನಡದಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿರುವ 'ಭೈರತಿ ರಣಗಲ್' ಸಿನಿಮಾ ಇದೀಗ ತೆಲುಗು, ತಮಿಳಿಗೂ ಡಬ್ ಆಗಿ ರಿಲೀಸ್ ಆಗಿದೆ. ಶಿವರಾಜ್‌ಕುಮಾರ್ ಆರ್ಭಟಕ್ಕೆ ತೆಲುಗು, ತಮಿಳು ಪ್ರೇಕ್ಷಕರು ಮನಸೋತಿದ್ದಾರೆ. ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.
'ಜೈಲರ್' ಚಿತ್ರದ ನರಸಿಂಹ ಪಾತ್ರದಿಂದ ಟಾಲಿವುಡ್, ಕಾಲಿವುಡ್ ಪ್ರೇಕ್ಷಕರಿಗೆ ಶಿವಣ್ಣ ಪರಿಚಿತರಾಗಿದ್ದರು. ಅದಕ್ಕೂ ಮುನ್ನ ಅವರ ಕೆಲ ಕಲ್ಟ್ ಸಿನಿಮಾಗಳು ತೆಲುಗು, ತಮಿಳು ಪ್ರೇಕ್ಷಕರ ನೋಡಿ ಇಷ್ಟಪಟ್ಟಿದ್ದರು. 'ವೇದ' ಸಿನಿಮಾ ಕೂಡ ಡಬ್ ಆಗಿ ರಿಲೀಸ್ ಆಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ 'ಮಫ್ತಿ' ಚಿತ್ರವನ್ನು ಕನ್ನಡದಲ್ಲೇ ನೋಡಿ ಮೆಚ್ಚಿಕೊಂಡಿದ್ದರು.

ಕನ್ನಡದ 'ಮಫ್ತಿ' ಸಿನಿಮಾ ತಮಿಳಿಗೆ ರೀಮೆಕ್ ಆಗಿತ್ತು. ರಣಗಲ್ ಪಾತ್ರವನ್ನು ಸಿಂಬು ಮಾಡಿದ್ದರು. ಆದರೆ ಅಷ್ಟಾಗಿ ಸದ್ದು ಮಾಡಲಿಲ್ಲ. ತಮಿಳಿಗಿಂತ ಕನ್ನಡದ 'ಮಫ್ತಿ' ಚೆನ್ನಾಗಿದೆ ಎಂದು ತಮಿಳು ಪ್ರೇಕ್ಷಕರು ಮೆಚ್ಚಿದ್ದರು. ಇದೀಗ 'ಮಫ್ತಿ' ಪ್ರೀಕ್ವೆಲ್ 'ಭೈರತಿ ರಣಗಲ್' ಸಿನಿಮಾ ಅಲ್ಲಿ ಪ್ರದರ್ಶನವಾಗುತ್ತಿದೆ.
ಈಗಾಗಲೇ ತೆಲುಗು, ತಮಿಳಿನಲ್ಲಿ 'ಭೈರತಿ ರಣಗಲ್' ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾ ನೋಡಿ ಹೊರ ಬಂದವರು ಯೂಟ್ಯೂಬ್ ಚಾನಲ್‌ಗಳ ಮುಂದೆ ಮಾತನಾಡುತ್ತಿದ್ದಾರೆ. ಸಿನಿಮಾ ಚೆನ್ನಾಗಿದೆ, ಶಿವಣ್ಣನ ನಟನೆ ಸೂಪರ್ ಎಂದು ಕೊಂಡಾಡುತ್ತಿದ್ದಾರೆ.
ಪರ್ಫೆಕ್ಟ್ ಮಾಸ್ ಸಿನಿಮಾ
'ಭೈರತಿ ರಣಗಲ್' ರೆಗ್ಯುಲರ್ ಸಿನಿಮಾ. ಆದರೆ ಪರ್ಫೆಕ್ಟ್ ಮಾಸ್ ಸಿನಿಮಾ. ಫಸ್ಟ್ ಹಾಫ್ ಕೊಂಚ ಡಲ್ ಎನಿಸುತ್ತದೆ. ಆದರೆ ಇಂಟರ್‌ವಲ್‌ನಿಂದ ಕ್ಲೈಮ್ಯಾಕ್ಸ್‌ವರೆಗೆ ಎಲಿವೇಷನ್ಸ್ ಹಾಗೂ ಡ್ರಾಮಾ ವರ್ಕ್ ಆಗಿದೆ. ಶಿವಣ್ಣ ತೆಲುಗಿನಲ್ಲಿ ಸ್ವತಃ ಡಬ್ ಮಾಡಿರುವುದು ಚೆನ್ನಾಗಿದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
'ಭೈರತಿ ರಣಗಲ್' ಬೆಂಕಿ
ಇಡೀ ಸಿನಿಮಾ ತನ್ನ ಸ್ಕ್ರೀನ್ ಪ್ರಸೆನ್ಸ್‌ನಿಂದ ಶಿವಣ್ಣ ಹುಚ್ಚು ಹಿಡಿಸಿದ್ದಾರೆ. ಕನ್ನಡದ ಕೆಲ ಸಿನಿಮಾಗಳನ್ನು ನೋಡಿ ಬೇಸತ್ತವರಿಗೆ ಒಂದೊಳ್ಳೆ ಮಾಸ್ ರಿಲೀಫ್ ಇದು. ಭೈರತಿ ರಣಗಲ್ ಬೆಂಕಿ. ಕ್ರೌರ್ಯ, ಬಿಜಿಎಂ, ಬರವಣಿಗೆ ಎಲ್ಲವೂ ಸರಿಯಾಗಿದೆ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.
ಶಿವಣ್ಣನಿಗೆ ಮಾತ್ರ ಸಾಧ್ಯ
ಶಿವಣ್ಣ ಅಭಿನಯ ಅಂತೂ ಸೂಪರ್. ಪ್ರತಿ ಸನ್ನಿವೇಶ ಗೂಸ್‌ಬಂಪ್ಸ್ ತರುವಂತಿದೆ. ಕ್ಲೈಮ್ಯಾಕ್ಸ್, ಸಾಂಗ್ಸ್ ಬೇರೆ ಲೆವೆಲ್. ಸ್ಟೋರಿ ಚೆನ್ನಾಗಿದೆ. ಶಿವಣ್ಣನ ಸ್ಕ್ರೀನ್ ಪ್ರಸೆನ್ಸ್ ಚೆನ್ನಾಗಿದೆ. ಈ ವಯಸ್ಸಿನಲ್ಲಿ ಆ ಎಲಿವೇಷನ್ಸ್ ಮಾಡಬೇಕು ಅಂದ್ರೆ ಅದು ರಜನಿಕಾಂತ್, ಶಿವಣ್ಣನಿಗೆ ಮಾತ್ರ ಸಾಧ್ಯ, ಸಿನಿಮಾ ಹೋಗಿ ನೋಡಿ ಅದ್ಭುತ ಎಂದು ತೆಲುಗು ಪ್ರೇಕ್ಷಕರು ಹೇಳಿರುವುದನ್ನು ಗೀತಾ ಪಿಕ್ಚರ್ಸ್ ಸಂಸ್ತೆ ಹಂಚಿಕೊಂಡಿದೆ.
ಕ್ರಿಕೆಟಿಗ ಅಶ್ವಿನ್ ಖದರ್
ಸೋಶಿಯಲ್ ಮೀಡಿಯಾದಲ್ಲಿ 'ಭೈರತಿ ರಣಗಲ್' ಟ್ರೆಂಡ್ ಜೋರಾಗಿದೆ. ಅದರಲ್ಲೂ ಶಿವಣ್ಣ ಬ್ಲ್ಯಾಕ್ ಅಂಡ್ ಬ್ಲ್ಯಾಕ್‌ನಲ್ಲಿ ಚೇರ್ ಮೇಲೆ ಕುಳಿತ ಪೋಸ್ಟರ್‌ಗಳು ವೈರಲ್ ಆಗುತ್ತಿದೆ. ಕ್ರಿಕೆಟಿಗ ಆರ್. ಅಶ್ವಿನ್ ಕೂಡ ರಣಗಲ್ ಕ್ರೇಜ್‌ನಲ್ಲಿ ಕಳೆದು ಹೋಗಿದ್ದಾರೆ. ತಮ್ಮ ಯೂಟ್ಯೂಬ್ ಚಾನಲ್ ವೀಡಿಯೋ ಥಂಬ್‌ನೇಲ್‌ನಲ್ಲಿ ರಣಗಲ್ ದರ್ಶನ ಮಾಡಿಸಿದ್ದಾರೆ. ಶಿವಣ್ಣನ ಪೋಸ್ಟರ್‌ಗೆ ತಮ್ಮ ಮುಖ ಅಂಟಿಸಿ ಬಳಸಿದ್ದಾರೆ.
'ಭೈರತಿ ರಣಗಲ್' ಕಲೆಕ್ಷನ್
ಕರ್ನಾಟಕದಲ್ಲಿ 'ಭೈರತಿ ರಣಗಲ್' ಸಿನಿಮಾ 3ನೇ ವಾರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಾರದ ದಿನಗಳಲ್ಲಿ ಕೂಡ ಕ್ರೇಜ್ ಕಮ್ಮಿ ಆಗಿದೆ. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಜೋರಾಗಿಯೇ ಇದೆ. ವೀಕೆಂಡ್‌ನಲ್ಲಿ ರೆಸ್ಪಾನ್ಸ್ ಹೆಚ್ಚಾಗುತ್ತಿದೆ. ಇನ್ನು ಶಿವಣ್ಣ ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು ಸಿನಿರಸಿಕರ ಪ್ರತಿಕ್ರಿಯೆ ಧನ್ಯವಾದ ತಿಳಿಸುತ್ತಿದ್ದಾರೆ. ಸಿನಿಮಾ ಈಗಾಗಲೇ 20 ಕೋಟಿ ರೂ. ಕಲೆಕ್ಷನ್ ಮಾಡಿರುವ ಅಂದಾಜಿದೆ.


Click it and Unblock the Notifications











