For Quick Alerts
  ALLOW NOTIFICATIONS  
  For Daily Alerts

  'ಜೋಗಿ' ಸಂಭ್ರಮಕ್ಕೆ 15 ವರ್ಷ: ಶಿವರಾಜ್ ಕುಮಾರ್ ಕಾಮನ್ ಡಿಪಿ ವೈರಲ್

  |

  ತಾಯಿ ಸೆಂಟಿಮೆಂಟ್, ಅದ್ಭುತ ಸಂಗೀತ, ಶಿವರಾಜ್ ಕುಮಾರ್ ಅಭಿನಯ, ಪ್ರೇಮ್ ನಿರ್ದೇಶನ ಕನ್ನಡಿಗರನ್ನು ಮೋಡಿ ಮಾಡಿದ್ದ ಸಿನಿಮಾ ಜೋಗಿ. ಒಂದು ಕಾಲದಲ್ಲಿ ಕನ್ನಡ ಚಿತ್ರಪ್ರಿಯರನ್ನು ನಿದ್ದೆ ಗೆಡಿಸಿದ್ದ ಸಿನಿಮಾ ಜೋಗಿ. ಎಲ್ಲಿ ನೋಡಿದ್ರು ಜೋಗಿ ಚಿತ್ರದ್ದೆ ಮಾತು, ಯಾವ ಚಿತ್ರಮಂದಿರಗಳಲ್ಲಿ ನೋಡಿದ್ರು ಜೋಗಿ ಸಿನಿಮಾದೆ ಪೋಸ್ಟರ್ಸ್, ಬ್ಯಾನರ್ಸ್. ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಜೋಗಿ ಸಿನಿಮಾಕ್ಕೆ ಈಗ 15 ವರ್ಷದ ಸಂಭ್ರಮ.

  ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿತ್ತು ಜೋಗಿ ಸಿನಿಮಾ. ಶಿವರಾಜ್ ಕುಮಾರ್ ಮತ್ತು ಪ್ರೇಮ್ ಕಾಂಬಿನೇಶನ್ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನೆ ಸೃಷ್ಟಿಸಿತ್ತು. ಇದೆಲ್ಲ ಈಗ ಇತಿಹಾಸ. 15 ವರ್ಷದ ಖುಷಿಯನ್ನು ಅಭಿಮಾನಿಗಳನ್ನು ಸಂಭ್ರಮಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಕಾಮನ್ ಡಿಪಿ ರಿಲೀಸ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಓದಿ..

  ಸಾವೇ ಬಂದರೂ ಮಣ್ಣೇ ಆದರೂ ನಿಮ್ಮ ಪ್ರೀತಿ ಅಭಿಮಾನಕ್ಕೆಂದೆಂದೂ ಕೊನೆಯಿಲ್ಲ

  15 ವರ್ಷದ ಸಂಭ್ರಮದಲ್ಲಿ ಜೋಗಿ

  15 ವರ್ಷದ ಸಂಭ್ರಮದಲ್ಲಿ ಜೋಗಿ

  ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರೇಮ್ ಮತ್ತು ಶಿವಣ್ಣ ಕಾಂಬಿನೇಶನ್ ನ ಜೋಗಿ ಸಿನಿಮಾಗೆ 15 ವರ್ಷ. ಇದೇ ತಿಂಗಳು, ಇದೇ ದಿನ ಆಗಸ್ಟ್ 19 ಜೋಗಿ ಸಿನಿಮಾ ತೆರೆಗೆ ಬಂದಿತ್ತು. ಸುಮಾರು 60ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಜೋಗಿ ಶತದಿನೋತ್ಸವನ್ನು ಆಚರಿಸಿಕೊಂಡಿತ್ತು. ಶತಕದ ಸಂಭ್ರಮವನ್ನು ಅದ್ದೂರಿಯಾಗಿ ಸೆಲೆಬ್ರೆಟ್ ಮಾಡಲಾಗಿತ್ತು.

  ಜಾತ್ರೆ ಸಂಭ್ರಮಿಸೋಣ

  ಜಾತ್ರೆ ಸಂಭ್ರಮಿಸೋಣ

  15 ವರ್ಷದ ತುಂಬಿದ ಖುಷಿಯಲ್ಲಿ ಈ ಜಾತ್ರೆ ಸಂಭ್ರಮಿಸೋಣ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. ಇದೇ ಖುಷಿಗೆ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವುದಾಗಿ ಹೇಳಿದ್ದಾರೆ. ಸಂಜೆ 5 ಗಂಟೆಗೆ ಪ್ರೇಮ್ ಅಭಿಮಾನಿಗಳ ಜೊತೆ ಮಾತನಾಡಲಿದ್ದಾರೆ. ಇನ್ನು ರಕ್ಷಿತಾ ಕೂಡ ಸೂಪರ್ ಹಿಟ್ ಸಿನಿಮಾದ ಸಕ್ಸಸ್ ನ ಖುಷಿಯನ್ನಿ ಹಂಚಿಕೊಂಡಿದ್ದಾರೆ.

  ಡಾ.ರಾಜ್ ದಂಪತಿಯಿಂದ ಪ್ರಾರಂಭವಾದ ಸಿನಿಮಾ

  ಡಾ.ರಾಜ್ ದಂಪತಿಯಿಂದ ಪ್ರಾರಂಭವಾದ ಸಿನಿಮಾ

  ಚಿತ್ರದ ಮೊದಲ ಶಾಟ್ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ದಂಪತಿ ಜೋಳಿಗೆ ತುಂಬವ ದೃಶ್ಯದೊಂದಿಗೆ ಪ್ರಾರಂಭವಾಗುತ್ತೆ. ಅವರು ತುಂಬಿದ ಜೋಳಿಗೆಯಂತೆ ಈ ಸಿನಿಮಾ ಬಿಡುಗಡೆಯ ನಂತರ ನಿರ್ಮಾಪರ ಜೋಳಿಗೆಯೂ ಭರ್ತಿಯಾಗಿತ್ತು. ಈ ದೃಶ್ಯದ ಬಳಿಕ ರಾಜ್ ಕುಮಾರ್ ತುಂಬ ಎಮೋಷನಲ್ ಆಗಿದ್ರಂತೆ. ಅದೆ ಎಮೋಷನಲ್ ಇಡೀ ಸಿನಿಮಾದಲ್ಲಿ ಇದೆ.

  ಸೆಂಟಿಮೆಂಟ್, ಸಂಗೀತ

  ಸೆಂಟಿಮೆಂಟ್, ಸಂಗೀತ

  ಚಿತ್ರದ ಹೈಲೆಟ್ ಅಂದ್ರೆ ತಾಯಿ ಮಗನ ಸೆಂಟಿಮೆಂಟ್ ಮತ್ತು ಸಂಗೀತ. ಶಿವರಾಜ್ ಕುಮಾರ್ ಮತ್ತು ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅರುದಂತಿ ನಾಗ್ ಕಾಂಬಿನೇಶನ್ ಗೆ ಅಭಿಮಾನಿಗಳು ಬೆರಗಾಗಿದ್ರು. ತಾಯಿ ಮಗನ ಕುಣಿತ, ಇಬ್ಬರ ಪ್ರೀತಿ ನೋಡಿ ನೋಡುಗರು ಭಾವುಕರಾಗಿದ್ದರು. ಜೊತೆಗೆ ಗುರುಕಿರಣ್ ಸಂಗೀತ ಕೂಡ ಚಿತ್ರಕ್ಕೆ ಹೊಸ ರಂಗನ್ನು ತಂದು ಕೊಟ್ಟಿತ್ತು.

  ಭಾವುಕರಾಗಿದ್ದ ಡಾ.ರಾಜ್

  ಭಾವುಕರಾಗಿದ್ದ ಡಾ.ರಾಜ್

  ಜೋಗಿ ಸಿನಿಮಾದ ಸ್ಪೆಷಲ್ ಶೋ ಏರ್ಪಡಿಸಲಾಗಿತ್ತು. ಆಗ ರಾಜ್ ಕುಮಾರ್, ಶಿವರಾಜ್ ಕುಮಾರ್, ರಜನಿಕಾಂತ್ ಸೇರಿದಂತೆ ಅನೇಕ ಕಲಾವಿದರು ಸಿನಿಮಾ ವೀಕ್ಷಿಸಿದ್ದರು. ಸಿನಿಮಾ ಮುಗಿದ ಮೇಲೆ ಡಾ. ರಾಜ್ ಮೌನವಾಗಿಬಿಟ್ಟಿದ್ದರಂತೆ. ಶಿವಣ್ಣ ಅಂತು ಚಿಕ್ಕ ಮಗುವಿನ ಹಾಗೆ ಕಣ್ಣೀರು ಹಾಕಿದ್ರಂತೆ.

  English summary
  Shivarajkumar starrer Jogi movie completed 15 years. Prem directed this film released on 2005 in August 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X