ವೀರಪ್ಪನ್ ಬೇಟೆಗೆ ಹೊರಟ ಆರ್.ಜಿ.ವಿ-ಶಿವಣ್ಣ..!
ಇಡೀ ಕರ್ನಾಟಕದ ಕುತೂಹಲ ಕೆರಳಿಸಿರುವ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.
ಇತ್ತೀಚೆಗಷ್ಟೇ ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಕಿಕ್ ಸ್ಟಾರ್ಟ್ ನೀಡಲಾಯ್ತು. ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಹಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು. [ಶಿವಣ್ಣ-ಆರ್.ಜಿ.ವಿ 'ಕಿಲ್ಲಿಂಗ್ ವೀರಪ್ಪನ್' ಫಸ್ಟ್ ಲುಕ್ ಔಟ್]

ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ರೆಡಿಯಾಗುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ತಮಿಳು ಮತ್ತು ತೆಲುಗಿಗೆ ಡಬ್ ಆಗಲಿದೆ. ಅಲ್ಲಿಗೆ, ನಾಲ್ಕು ಭಾಷೆಗಳಲ್ಲಿ ಅಣ್ಣಾವ್ರ ಮಗ ಮಿಂಚಲಿದ್ದಾರೆ. [ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಶಿವಣ್ಣ]

ನರಹಂತಕ ವೀರಪ್ಪನ್ ನ ಹತ್ಯೆ ಮಾಡುವ ಪ್ರಮುಖ ಪಾತ್ರಧಾರಿ ಆಗಿ ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ. ದಂತಚೋರನಾಗಿ ಸಂದೀಪ್ ಕಾಣಿಸಿಕೊಂಡರೆ, ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಆಗಿ ಯಜ್ಞಾ ಶೆಟ್ಟಿ ಮಿಂಚಲಿದ್ದಾರೆ. ವಿಶೇಷ ಪಾತ್ರದಲ್ಲಿ ಪಾರುಲ್ ಯಾದವ್ ಇರಲಿದ್ದಾರೆ. ['ಕಿಲ್ಲಿಂಗ್ ವೀರಪ್ಪನ್' ಶಿವಣ್ಣನ ಮಹತ್ವಾಕಾಂಕ್ಷಿ ಚಿತ್ರ]

ವರ್ಷಗಳ ಕಾಲ ರಿಸರ್ಚ್ ಮಾಡಿದ ನಂತ್ರ ರಾಮ್ ಗೋಪಾಲ್ ವರ್ಮಾ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಶೂಟಿಂಗ್ ಶುರುವಾಗಿದೆ. ವೀರಪ್ಪನ್ ಬೇಟೆಯಾಡೋದೊಂದೇ ಈಗ ಬಾಕಿ. [ಶಿವಣ್ಣನ ಕೈಲಿ ವೀರಪ್ಪನ್ ಹತ್ಯೆ ಮಾಡಿಸ್ತಾರೆ ವರ್ಮಾ.!]


Click it and Unblock the Notifications











