ಯುಗಾದಿ ಹಬ್ಬದಂದು ಶಿವಣ್ಣ ಸಂತ 'ಕಬೀರ' ಶುರು

By Harshitha

ಈ ಯುಗಾದಿ ಹಬ್ಬದಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ಇದೆ. ಸೆಂಚುರಿ ಸ್ಟಾರ್ ಅಭಿನಯಿಸುತ್ತಿರುವ ಹೊಚ್ಚ ಹೊಸ ಸಿನಿಮಾ 'ಕಬೀರ' ಇದೇ ಮಾರ್ಚ್ 21 ರಂದು ಸೆಟ್ಟೇರಲಿದೆ.

ದಶಕಗಳ ಹಿಂದೆ ನಟಸಾರ್ವಭೌಮ, ಪದ್ಮಭೂಷಣ ಡಾ.ರಾಜ್ ಕುಮಾರ್ ಮಹಾತ್ಮ ಕಬೀರನಾಗಿ ದೋಹಾಗಳನ್ನ ಹೇಳಿದ್ರು. ಇದೀಗ ಇದೇ ಹಾದಿಯಲ್ಲಿ ಅಣ್ಣಾವ್ರ ಮಗ ಕೂಡ ಸಾಗುವುದಕ್ಕೆ ಸಜ್ಜಾಗಿದ್ದಾರೆ.

ಹೌದು, ಗಾಂಧಿನಗರದಿಂದ ಬಂದಿರುವ ಖಾಸ್ ಖಬರ್ ಅಂದ್ರೆ ಇದೆ. 'ವಜ್ರಕಾಯ' ಸಿನಿಮಾದ ಶೂಟಿಂಗ್ ಮುಗಿಸಿಕೊಟ್ಟಿರುವ ಶಿವಣ್ಣ ಬಣ್ಣ ಹಚ್ಚುವ ಮುಂದಿನ ಚಿತ್ರವೇ 'ಕಬೀರ'.

Shivarajkumar starrer new movie Kabira muhoortha on Ugadi

'ಕಬೀರ'....ಹೆಸರೇ ಹೇಳುವ ಹಾಗೆ, ಇದು 'ಸಂತ ಕಬೀರ್ ದಾಸ್' ಜೀವನಗಾಥೆ ಸಾರುವ ಚಿತ್ರ. ವಾರಣಾಸಿ ಸಮೀಪದ ಕಬೀರ್ ಚೌರಾದಲ್ಲಿ ಸಾಮಾನ್ಯ ನೇಕಾರನಾಗಿ ಭಕ್ತಿ ಮಾರ್ಗವನ್ನ ಅನುಸರಿಸಿದ ಕಬೀರ್ ದಾಸ್ ನ ಜೀವನ ಚರಿತ್ರೆಯೇ 'ಕಬೀರ' ಚಿತ್ರದ ಹೂರಣ. ['ಗೀತಾ' ಖ್ಯಾತಿಯ ಅಕ್ಷತಾ ರಾವ್ ಸೆಕೆಂಡ್ ಇನ್ನಿಂಗ್ಸ್]

ಇಂತಹ ಕಬೀರ್ ದಾಸ್ ನ ಯಶೋಗಾಥೆಯನ್ನ ಕಲಾತ್ಮಕವಾಗಿ ಕಟ್ಟಿಕೊಡುವುದಕ್ಕೆ ತಯಾರಾಗಿರುವುದು ಈ ಹಿಂದೆ 'ಕಬ್ಬಡಿ' ಸಿನಿಮಾ ನಿರ್ದೇಶಿಸಿದ್ದ ನರೇಂದ್ರ ಬಾಬು. ಈಗಾಗಲೇ ಸ್ಕ್ರಿಪ್ಟ್ ವರ್ಕ್ ಎಲ್ಲಾ ಕಂಪ್ಲೀಟ್ ಆಗಿ ರೆಡಿಮಾಡಿರುವ ನರೇಂದ್ರ ಬಾಬು ಯುಗಾದಿ ಹಬ್ಬದ ಶುಭ ಸಂಭ್ರಮದಂದು ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ.

ಇಲ್ಲಿವರೆಗೂ ಕೈಲಿ ಲಾಂಗು ಹಿಡಿದು ವೈರಿಗಳ ರುಂಡ ಚೆಂಡಾಡುತ್ತಿದ್ದ ಶಿವಣ್ಣ, ಸಂತ 'ಕಬೀರ'ನಾಗಿ ಹೇಗೆ ಕಮಾಲ್ ಮಾಡ್ತಾರೆ ಅನ್ನೋದೇ ಸದ್ಯದ ಕುತೂಹಲ. (ಫಿಲ್ಮಿಬೀಟ್ ಕನ್ನಡ)

More from Filmibeat

English summary
Hat-Trick Hero Shivarajkumar starrer new movie 'Kabira' muhoortha is scheduled on Ugadi festival (March 21st). Narendra Babu of 'Kabbadi' fame is directing this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X