For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಹುಟ್ಟುಹಬ್ಬಕ್ಕೆ 'ಟಗರು' ಚಿತ್ರತಂಡ ಕೊಟ್ಟ ಗಿಫ್ಟ್ ನೋಡಿ!

  By Bharath Kumar
  |

  ಕರ್ನಾಟಕ ರತ್ನ, ರಸಿಕರ ರಾಜ, ವರನಟ ಡಾ.ರಾಜ್ ಕುಮಾರ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಅಣ್ಣಾವ್ರ ಹುಟ್ಟುಹಬ್ಬವನ್ನ ನಾಡಿನೆಲ್ಲೆಡೆ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದರೇ, ಮತ್ತೊಂದೆಡೆ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರತಂಡ ವರನಟನ ಬರ್ತ್ ಡೇ ವಿಶೇಷವಾಗಿ ಭರ್ಜರಿ ಗಿಫ್ಟ್ ಕೊಟ್ಟಿದೆ.[ಚಿತ್ರಗಳು: 'ಟಗರು' ಶೂಟಿಂಗ್ ನಲ್ಲಿ ಶಿವಣ್ಣ, ಮಾನ್ವಿತಾ ಸ್ಟೈಲಿಶ್ ಲುಕ್!]

  ಹೌದು, 'ಬಂಗಾರದ ಮನುಷ್ಯ'ನ ಜನುಮದಿನದ ವಿಶೇಷವಾಗಿ, 'ಟಗರು' ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಶಿವರಾಜ್ ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನ ದುನಿಯಾ ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಜಾಕಿ ಭಾವನಾ, ಮಾನ್ವಿತ ಹರೀಶ್, ಧನಂಜಯ್, ವಸಿಷ್ಠ ಸಿಂಹ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.[ಟ್ರಕ್ ಡ್ರೈವರ್ ಆದ ಸೆಂಚುರಿ ಸ್ಟಾರ್ ಶಿವಣ್ಣ]

  ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದು, ಧನಂಜಯ್ ಮತ್ತು ವಸಿಷ್ಠ ಸಿಂಹ ಖಳನಾಯಕರಾಗಿದ್ದಾರೆ. ಹಾಗಾದ್ರೆ, 'ಟಗರು' ಚಿತ್ರದ ಥ್ರಿಲ್ಲಿಂಗ್ ಆಗಿರುವ ಮೇಕಿಂಗ್ ವಿಡಿಯೋ ಹೇಗಿದೆ ಅಂತ ಇಲ್ಲಿದೆ ನೋಡಿ....

  English summary
  Kannada Actor Dr Rajkumar Birthday Shivarajkumar Starrer Tagaru Movie Making video Released. the Movie Directed By Duniya suri and also Featured by Bhavana, Manvitha harish, Dhananjaya, Vasista simha and others

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X