For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಹುಟ್ಟುಹಬ್ಬಕ್ಕೆ ತೆರೆಗೆ ಬರಲಿದೆ 'ಸಿಂಹದ ಮರಿ'

  By Pavithra
  |

  ಸಿಂಹದ ಮರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಚಿತ್ರ. 21 ವರ್ಷಗಳ ಹಿಂದೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದ್ದ 'ಸಿಂಹದ ಮರಿ' ಸಿನಿಮಾವನ್ನ ಮತ್ತೆ ತೆರೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ.

  ಜುಲೈ 12ರಂದು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ವಿತರಕ ಚಂದನ್ ಕುಮಾರ್ 'ಸಿಂಹದಮರಿ' ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.

  'ಭರತ ಚಕ್ರವರ್ತಿ' ಶಿವಣ್ಣನ ಸಿನಿಮಾ ಗೆಲ್ಲೋದು ಇದೇ ಕಾರಣಕ್ಕೆ ಇರ್ಬೋದು! 'ಭರತ ಚಕ್ರವರ್ತಿ' ಶಿವಣ್ಣನ ಸಿನಿಮಾ ಗೆಲ್ಲೋದು ಇದೇ ಕಾರಣಕ್ಕೆ ಇರ್ಬೋದು!

  1997 ರಲ್ಲಿ ನಿರ್ಮಾಪಕ ಕೋಟಿ ರಾಮು 'ಸಿಂಹದ ಮರಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಓಂ ಪ್ರಕಾಶ್ ರಾವ್ ಚಿತ್ರವನ್ನು ಡೈರೆಕ್ಟರ್ ಮಾಡಿದ್ದರು. ಸಿಮ್ರನ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು.

  'ಸಿಂಹದ ಮರಿ' ಸಿನಿಮಾದ ಪ್ರತಿ ಹಾಡುಗಳು ಸೂಪರ್ ಹಿಟ್ ಆಗಿದ್ದು ಇಂದಿಗೂ ಕೂಡ ಹಾಡುಗಳು ಕನ್ನಡ ಅಭಿಮಾನಿಗಳ ಮನಸ್ಸಿನಲ್ಲೇ ಉಳಿದುಕೊಂಡಿವೆ. ಈಗಿನ ಟೆಕ್ನಾಲಜಿಗೆ ತಕ್ಕಂತೆ ಸಿನಿಮಾ ಕ್ವಾಲಿಟಿ ಬದಲಾವಣೆ ಮಾಡಿ ಶಿವಣ್ಣ ಬರ್ತಡೇ ದಿನ ರಿಲೀಸ್ ಮಾಡಲು ಸಿದ್ದತೆ ಮಾಡಲಾಗುತ್ತಿದೆ.

  ರಾಜ್ಯದಲ್ಲಿ ನೂರು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡುವ ಉದ್ದೇಶ ವಿತರಕರಿಗಿದ್ದು ಸಾಕಷ್ಟು ವರ್ಷಗಳ ಹಿಂದೆ ನೋಡಿದ ಚಿತ್ರವನ್ನು ಮತ್ತೆ ಬೆಳ್ಳಿತೆರೆಯಲ್ಲಿ ನೋಡುವ ಅವಕಾಶ ಮತ್ತೆ ಸಿಗುತ್ತಿದೆ.

  English summary
  kannada actor Shivarajkumar starring Simhada Mari film is being re released . The film is being re released to the birthday of Shivaraj Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X