»   » ವಾವ್.! ಶಿವಣ್ಣ-ದೀಪಣ್ಣ ಸಿನಿಮಾಕ್ಕೆ ಟೈಟಲ್ ಫಿಕ್ಸ್ ಆಯ್ತಾ?

ವಾವ್.! ಶಿವಣ್ಣ-ದೀಪಣ್ಣ ಸಿನಿಮಾಕ್ಕೆ ಟೈಟಲ್ ಫಿಕ್ಸ್ ಆಯ್ತಾ?

Posted By:
Subscribe to Filmibeat Kannada

ಹ್ಯಾಟ್ರಿಕ್ ನಿರ್ದೇಶಕ 'ಜೋಗಿ' ಪ್ರೇಮ್ ಅವರು ಸ್ಯಾಂಡಲ್ ವುಡ್ ನ ದಿಗ್ಗಜರಿಬ್ಬರನ್ನು ಸೇರಿಸಿ ಸಿನಿಮಾ ಮಾಡಲು ಹೊರಟಿರುವ ವಿಷಯ ನಿಮಗೆ ತಿಳಿದೇ ಇದೆ ಅಲ್ವಾ?. ಇದೀಗ ಆ ಹೊಸ ಪ್ರಾಜೆಕ್ಟ್ ಗೆ ಟೈಟಲ್ ಕೂಡ ಫಿಕ್ಸ್ ಆಗಿದೆ.

ಹೌದು ಇಂದು ಬೆಂಗಳೂರಿನ ಲಲಿತ್ ಅಶೋಕದಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಕರ್ನಾಟಕದ ಸಿ.ಎಂ ಸಿದ್ಧರಾಮಯ್ಯ ಅವರು ಸ್ಯಾಂಡಲ್ ವುಡ್ ನಟ ಸ್ಟಾರ್ ನಟರ ಬಹುನಿರೀಕ್ಷಿತ ಚಿತ್ರದ ಟೈಟಲ್ ಲಾಂಚ್ ಮಾಡಲಿದ್ದಾರೆ. ಚಿತ್ರಕ್ಕೆ 'ಕಲಿ' ಎಂದು ಟೈಟಲ್ ನೀಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.[ಶಿವಣ್ಣ-ಸುದೀಪ್ ಸಿನಿಮಾ ಟೈಟಲ್ ಲಾಂಚ್ ಮಾಡೋದು ಇವರೇ!]

Shivarajkumar-Sudeep Multi-Starrer Titled 'Kali'

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದೇ ಮೊದಲ ಬಾರಿಗೆ ಹೈ ಬಜೆಟ್ ನ ಸಿನಿಮಾವೊಂದು ಸೆಟ್ಟೇರುತ್ತಿದ್ದು, ಬರೋಬ್ಬರಿ 110 ಕೋಟಿ ರೂಪಾಯಿಗಳ ಬಜೆಟ್ ನಲ್ಲಿ ಸಿನಿಮಾ ಮೂಡಿಬರಲಿದೆ. ನಿರ್ಮಾಪಕ ಸಿ.ಆರ್ ಮನೋಹರ್ ಅವರು ಈ ಸ್ಟಾರ್ ನಟರ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವಣ್ಣ ಅವರಿಗೆ 'ಜೋಗಿ' ಮತ್ತು 'ಜೋಗಯ್ಯ' ಸಿನಿಮಾ ಮಾಡಿದ ನಿರ್ದೇಶಕ ಕಮ್ ನಟ ಪ್ರೇಮ್ ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಇದೇ ಮೊದಲ ಬಾರಿಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.[ಪ್ರೇಮ್ ಬಾಯಿಗೆ ಲಡ್ಡು ತುರುಕಿದ ಶಿವಣ್ಣ-ದೀಪಣ್ಣ]

Shivarajkumar-Sudeep Multi-Starrer Titled 'Kali'

ಅದೇನೇ ಇರಲಿ ಹೊಸ ವರ್ಷಕ್ಕೆ ಈ ಹೊಸ ಪ್ರಾಜೆಕ್ಟ್ 'ಕಲಿ' ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, ನಾವು ಈ ತಂಡಕ್ಕೆ ಶುಭ ಹಾರೈಸೋಣ ನೀವೇನಂತೀರಾ?.

English summary
The multi-starrer has been titled 'Kali' and Karnataka CM Siddaramaiah will launch the movie. It is for the first-time two Superstars of Kannada film industry will be sharing on-screen space for the movie and this has already created huge ripples in the cinelovers.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada