For Quick Alerts
  ALLOW NOTIFICATIONS  
  For Daily Alerts

  ಆರಂಭಿಕ ಹಂತದಲ್ಲಿಯೇ ರೆಕಾರ್ಡ್ ಬ್ರೇಕ್ ಮಾಡಿದ 'ಕಲಿ'

  By Suneetha
  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮೊಟ್ಟ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಳ್ಳುತ್ತಿರುವ 'ಕಲಿ' ಚಿತ್ರದ ಶೂಟಿಂಗ್ ಕೆಲಸಗಳು ಆರಂಭಗೊಂಡಿದೆ.

  ಇದೀಗ ಸ್ಟಾರ್ ನಟರ 'ಕಲಿ' ಸಿನಿಮಾ ಆರಂಭಿಕ ಹಂತದಲ್ಲಿಯೇ ರೆಕಾರ್ಡ್ ಬ್ರೇಕ್ ಮಾಡಲು ಹೊರಟಿದೆ. ನಿರ್ದೇಶಕ 'ಜೋಗಿ' ಪ್ರೇಮ್ ಅವರು ಆಕ್ಷನ್-ಕಟ್ ಹೇಳಲಿರುವ 'ಕಲಿ' ಚಿತ್ರಕ್ಕೆ ಬರೋಬ್ಬರಿ 6 ಸಂಗೀತ ನಿರ್ದೇಶಕರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರಂತೆ.['ಕಲಿ'ಗೆ ಪೂಜೆ ಆಯ್ತು ಇನ್ನು ಶೂಟಿಂಗ್ ಹಬ್ಬ ಶುರು ಕಣ್ರೀ]

  ಮೊನ್ನೆ ಮೊನ್ನೆ ನಿರ್ಮಾಪಕ ಕಮ್ ನಟ ದ್ವಾರಕೀಶ್ ಅವರ ಬಹು ತಾರಾಗಣ ಇರುವ 'ಚೌಕ' ಚಿತ್ರಕ್ಕೆ 5 ಜನ ಸಿನಿಮಾಟೊಗ್ರಾಫರ್ ಗಳು ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿಯಾದ ಬೆನ್ನಲ್ಲೇ ಇದೀಗ 'ಜೋಗಿ' ಪ್ರೇಮ್ ಅವರು ಕೂಡ ತಮ್ಮ ಬಿಗ್ ಬಜೆಟ್ ನ ಚಿತ್ರಕ್ಕೆ 6 ಜನ ಸಂಗೀತ ನಿರ್ದೇಶಕರಿಂದ ಮ್ಯೂಸಿಕ್ ಕಂಪೋಸ್ ಮಾಡಿಸಲಿದ್ದಾರೆ.

  ಇಂದು (ಮಾರ್ಚ್ 7) ಶಿವರಾತ್ರಿ ಹಬ್ಬದ ಪ್ರಯುಕ್ತ ಶಿವ ದೇವರಿಗೆ ಪೂಜೆ ಸಲ್ಲಿಸಿ, ಚಿತ್ರದ ಮೊದಲ ಹಾಡಿನ ರೆಕಾರ್ಡಿಂಗ್ ಕೆಲಸ ಶುರು ಮಾಡಲಾಯಿತು. 6 ಸಂಗೀತ ನಿರ್ದೇಶಕರು ಒಂದೊಂದು ಹಾಡನ್ನು ಕಂಪೋಸ್ ಮಾಡಲಿದ್ದಾರೆ.[ಸುದೀಪ್-ಶಿವಣ್ಣಗೆ ಜೋಡಿಯಾಗ್ತಾರ, ಅನುಷ್ಕಾ-ನಯನತಾರಾ]

  'ನಾದಬ್ರಹ್ಮ' ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ ಚಿತ್ರದ ಮೊದಲ ಹಾಡಿನ ರೆಕಾರ್ಡಿಂಗ್ ಶುರು ಮಾಡಲಾಗಿದೆ. ಇನ್ನುಳಿದಂತೆ ಸಂಗೀತ ನಿರ್ದೇಶಕ ಗುರುಕಿರಣ್, ವಿ ಹರಿಕೃಷ್ಣ, ಸಾಧು ಕೋಕಿಲ, ಅರ್ಜುನ್ ಜನ್ಯಾ ಮತ್ತು ಅನೂಪ್ ಸೀಳಿನ್ ಮುಂತಾದವರು ತಲಾ ಒಂದೊಂದು ಹಾಡಿಗೆ ರಾಗ ಸಂಯೋಜನೆ ಮಾಡಲಿದ್ದಾರೆ.

  ಸುಮಾರು 100 ಕೋಟಿ ವೆಚ್ಚದ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಸುದೀಪ್ ಮತ್ತು ಶಿವಣ್ಣ ಅವರ 'ಕಲಿ' ಚಿತ್ರಕ್ಕೆ ನಿರ್ಮಾಪಕ ಸಿ.ಆರ್ ಮನೋಹರ್ ಅವರು ಬಂಡವಾಳ ಹೂಡುತ್ತಿದ್ದಾರೆ. ನಾಯಕಿಯರು ಸೇರಿದಂತೆ ಇನ್ನುಳಿದ ತಾರಾಗಣದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

  English summary
  Shivarajkumar and Sudeep's upcoming multi-starrer 'Kali' breaks records, even before the release. Kannada Movie 'Kali' will include 6 music directors and one among them in 'Nada Brahma' Hamsalekha. Through, Kali, Hamsalekha is making a comeback to KFI.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X