ರಿಯಲ್‌ಸ್ಟಾರ್‌ಗೆ ಸರ್ಪ್ರೈಸ್ ಕೊಟ್ಟ ಶಿವಣ್ಣ, ಗೀತಕ್ಕ!
ನಟ ಉಪೇಂದ್ರ ಮತ್ತೆ ನಿರ್ದೇಶಕನ ಟೋಪಿ ಧರಿಸಿದ್ದಾರೆ. ಹಲವು ವರ್ಷಗಳಿಂದ ನಿರ್ದೇಶನದಿಂದ ದೂರ ಉಳಿದಿದ್ದ ನಟ ಉಪೇಂದ್ರ ಈಗ ಮತ್ತೆ ನಿರ್ದೇಶಕನಾಗಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಉಪ್ಪಿ ಏನೇ ಮಾಡಿದರು ಅದು ಡಿಫ್ರೆಂಟ್. ಅವರ ಹೊಸ ಸಿನಿಮಾದ ಟೈಟಲ್ ರಿಲೀಸ್ ಆದಾಗಿನಿಂದಲೂ ಎಲ್ಲರನ್ನೂ ಹತ್ತಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದವು.
ಈ ಚಿತ್ರದ ಬಗ್ಗೆ ನಟ ಉಪೇಂದ್ರ ಆಗಲಿ, ಸಿನಿಮಾ ತಂಡ ಆಗಲಿ ಹೆಚ್ಚಿನದಾಗಿ ಏನನ್ನೂ ಹೇಳಿರಲಿಲ್ಲ. ಆದರೆ, ಸಿನಿಮಾದ ಪೋಸ್ಟರ್ ಮೂಲಕ ಉಪ್ಪಿ ಸಾಕಷ್ಟು ಕುತೂಹಲ ಹುಟ್ಟು ಹಾಕಿದ್ದರು. ಕೊನೆಗೂ ಈ ಚಿತ್ರದ ಟೈಟಲ್ 'ಯುಐ' ಎನ್ನುವುದು ಖಚಿತವಾಗಿದೆ.
ಕೆಲವು ದಿನಗಳ ಹಿಂದಷ್ಟೇ ಸಿನಿಮಾದ ಮುಹೂರ್ತ ನೆರವೇರಿದೆ. ಸಿನಿಮಾದ ಚಿತ್ರೀಕರಣ ಕೂಡ ಶುರುವಾಗಿದೆ. ಭರ್ಜರಿಯಾಗಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಇದೀಗ ಈ ಚಿತ್ರದ ಬಗ್ಗೆ ಹೊಸ ಸುದ್ದಿ ಹರಿದಾಡಲು ಕಾರಣ ನಟ ಶಿವರಾಜ್ ಕುಮರ್. ಅದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ....

'UI' ಭರ್ಜರಿ ಚಿತ್ರೀಕರಣ!
ನಟ ಉಪೇಂದ್ರ ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಕೈ ಹಾಕಿರುವ ಸಿನಿಮಾ 'ಯುಐ'. ಸದ್ಯ ಸಿನಿಮಾ ಒಂದಷ್ಟು ಕುತೂಹಲದ ಜೊತೆಗೆ ಚಿತ್ರೀಕರಣ ಶುರು ಮಾಡಿದೆ. ಈ ಹಿಂದೆಯೂ ಚಿತ್ರೀಕರಣ ಶುರುವಾದ ಬಗ್ಗೆ ಸಿನಿಮಾತಂಡ ಹೇಳಿಕೊಂಡಿತ್ತು. ಸದ್ಯ ಬ್ರೇಕ್ ತೆಗೆದುಕೊಳ್ಳದೆ ಸಿನಿಮಾದ ನಿರಂತರ ಚಿತ್ರೀಕರಣ ನಡೆಯುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಬೆಂಗಳೂರಿನ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರತಂಡಕ್ಕೆ ನಟ ಶಿವರಾಜ್ ಕುಮಾರ್ ಸರ್ಪ್ರೈಸ್ ಕೊಟ್ಟಿದ್ದಾರೆ.
ಉಪ್ಪಿಗೆ ಶಿವಣ್ಣ ಸರ್ಪ್ರೈಸ್!
'ಯು ಐ ' ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರೀಕರಣದ ಸ್ಥಳಕ್ಕೆ ಭೇಟಿ ಕೊಡುವ ಮೂಲಕ ನಟ ಶಿವರಾಜ್ ಕುಮಾರ್ ಇಡೀ ತಂಡಕ್ಕೆ ಸರ್ಪ್ರೈಸ್ ಕೊಟ್ಟಿದ್ದಾರೆ. ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾ ಜೊತೆಗೆ ಉಪೇಂದ್ರ ಶೂಟಿಂಗ್ ಸೆಟ್‌ಗೆ ಭೇಟಿ ಕೊಟ್ಟಿದ್ದಾರೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ 'ಯುಐ' ಸಿನಿಮಾಗಾಗಿ ದುಬಾರಿ ಸೆಟ್ ಹಾಕಲಾಗಿದೆ. ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ಕಾಂಬಿನೇಷನ್‌ನಲ್ಲಿ 'ಯುಐ' ಚಿತ್ರದ ವಿಶೇಷ ಎಪಿಸೋಡ್ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಸೆಟ್‌ಗೆ ಭೇಟಿ ಕೊಟ್ಟ ಶಿವಣ್ಣ, ಗೀತಕ್ಕ ಕೆಲ ಕಾಲ ಅಲ್ಲೇ ಸಮಯ ಕಳೆದು ಹೋಗಿದ್ದಾರೆ.

15 ವರ್ಷದ ಹಿಂದ ಮಾಡಿದ ಕಥೆ!
ಈ ಚಿತ್ರದ ಬಗ್ಗೆ ನಟ ಉಪೇಂದ್ರ ಮುಹೂರ್ತದ ಸಮಯದಲ್ಲಿ ಮಾತನಾಡಿದ್ದರು. ಈ ಸಿನಿಮಾದ ಕಥೆ 15 ವರ್ಷದ ಹಿಂದೆಯೇ ಉಪೇಂದ್ರ ಬರೆದಿದ್ದಾರೆ. ಆದರೆ ಹಾಗಂತ ಇದು ಯಾವುದೋ ಕಾಲಘಟ್ಟದ ಕಥೆಯಲ್ಲ. ಈ ಸಿನಿಮಾ ಪ್ರಸ್ತುತ ಕಾಲಘಟ್ಟಕ್ಕೆ ಹೊಂದಾಣಿಕೆ ಆಗುವ ಕಥೆ ಎಂದಿದ್ದಾರೆ ನಟ, ನಿರ್ದೇಶಕ ಉಪೇಂದ್ರ. ಇದನ್ನು ಬಿಟ್ಟರೆ ಚಿತ್ರದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಉಪೇಂದ್ರ ಟೈಟಲ್‌ನಲ್ಲಿ ನಾಮ ಯಾಕೆ?
ನಟ ಉಪೇಂದ್ರ ಅವರ ಮುಂದಿನ ಸಿನಿಮಾ ಬಗ್ಗೆ ಇದ್ದ ಕುತೂಹಲಗಳಿಗೆ, ಮುಹೂರ್ತದಲ್ಲಿ ಸಂಪೂರ್ಣವಾಗಿ ತೆರೆ ಬಿದ್ದಿಲ್ಲ. ಬದಲಿಗೆ ಇದ್ದ ಕುತೂಹಲಗಳು ಮತ್ತಷ್ಟು ಹೆಚ್ಚಾಗಿವೆ. ಆ ರೀತಿಯಾಗಿ ಮತ್ತಷ್ಟು ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ ನಟ ಉಪೇಂದ್ರ. ಉಪೇಂದ್ರ ಎಲ್ಲವನ್ನೂ ಪ್ರೇಕ್ಷಕರಿಗೆ ಬಿಟ್ಟು ಬಿಟ್ಟಿದ್ದಾರೆ. ಜನ ಏನು ಹೇಳುತ್ತಾರೋ ಅದೇ ಸಿನಿಮಾ. ಅದೇ ಕಥೆ ಎಂದು ಮಾತ್ರ ಹೇಳಿದ್ದಾರೆ.


Click it and Unblock the Notifications











