For Quick Alerts
  ALLOW NOTIFICATIONS  
  For Daily Alerts

  'ರಾಜಕೀಯ' ಸುದ್ದಿಗೆ ಪೂರ್ಣ ವಿರಾಮವಿಟ್ಟ ಸೆಂಚುರಿಸ್ಟಾರ್

  By Bharath Kumar
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಮಾತು ಇತ್ತೀಚೆಗೆ ಗಾಂಧಿನಗರದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಶಿವಣ್ಣನ ಪಾಲಿಟಿಕ್ಸ್ ಬಗ್ಗೆ ಸುದ್ದಿಯಾಗುತ್ತಿತ್ತು. ಈ ಸುದ್ದಿ ಬಗ್ಗೆ ಮೌನ ಮುರಿದ ಸೆಂಚುರಿಸ್ಟಾರ್ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

  ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಸ್ಫರ್ಧಿಸಿದ್ದರು. ಈ ಬಾರಿ ಶಿವರಾಜ್ ಕುಮಾರ್ ರಾಜಕೀಯ ಅಖಾಡಕ್ಕೆ ಧುಮಕಲಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಹ್ಯಾಟ್ರಿಕ್ ಹೀರೋ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ.

  ರಾಜಕೀಯ ಪ್ರವೇಶದ ಬಗ್ಗೆ ಶಿವಣ್ಣ ಏನು ಹೇಳಿದರು ಎಂಬುದನ್ನ ಮುಂದೆ ಓದಿ.....

  ರಾಜಕೀಯ ನನಗೆ ಇಷ್ಟವಿಲ್ಲ

  ರಾಜಕೀಯ ನನಗೆ ಇಷ್ಟವಿಲ್ಲ

  ''ರಾಜಕೀಯ ನನಗೆ ಇಷ್ಟವಿಲ್ಲ. ಆದ್ದರಿಂದ ನಾನು ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡುವುದಿಲ್ಲ'' ಎಂದು ಹಾಸನದಲ್ಲಿ ನಟ ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ ಕನ್ನಡಪ್ರಭ ವರದಿ ಮಾಡಿದೆ. ಕಲ್ಯಾಣ್ ಜ್ಯುವೆಲರ್ಸ್ ಉದ್ಘಾಟನೆ ಸಮಾರಂಭದ ನಂತರ ಮಾತನಾಡಿದ ಶಿವಣ್ಣ, ಮಾಧ್ಯಮದವರು ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ರಾಜಕೀಯದ ಬಗ್ಗೆಯೂ ಮಾತನಾಡಿದರಂತೆ.

  ಪುನೀತ್ ರಾಜ್ ಕುಮಾರ್ ನಿವಾಸದಲ್ಲಿ ಕಾಂಗ್ರೆಸ್ 'ಯುವರಾಜ' ರಾಹುಲ್ ಗಾಂಧಿ

  ಶಿವಣ್ಣ ರಾಜಕೀಯ ಸೇರೋದು ಸುಳ್ಳು

  ಶಿವಣ್ಣ ರಾಜಕೀಯ ಸೇರೋದು ಸುಳ್ಳು

  ''ನಾನು ರಾಜಕೀಯ ಸೇರೋದು ಸುಳ್ಳು. ಒಂದು ವೇಳೆ ರಾಜಕೀಯಕ್ಕೆ ಬಂದ್ರೆ, ಜನರಿಗೆ ಮೊದಲು ತಿಳಿಸುತ್ತೇನೆ ಎಂದು ಹೇಳಿದರು.

  ಶಿವರಾಜ್ ಕುಮಾರ್ ಮನೆಗೆ ಭೇಟಿ ಕೊಟ್ಟ ತೆಲುಗು ನಟ ಬಾಲಕೃಷ್ಣ

  ರಾಹುಲ್ ಗಾಂಧಿ ಬಂದ ಉದ್ದೇಶ ಬೇರೆ

  ರಾಹುಲ್ ಗಾಂಧಿ ಬಂದ ಉದ್ದೇಶ ಬೇರೆ

  ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮನೆಗೆ ಭೇಟಿ ನೀಡಿದ್ದು, ಅಮ್ಮನ ಸಾವಿನ ಹಿನ್ನೆಲೆ ಸಾಂತ್ವನ ಹೇಳುವುದಕ್ಕೆ. ಅವರ ಮೇಲೆ ನಮಗೆ ಗೌರವವಿದೆ. ಹಾಗಾಗಿ, ರಾಜಕೀಯ ಬರುತ್ತೇವೆ ಎನ್ನುವುದು ಸುಳ್ಳು ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ.

  ಅಣ್ಣಾವ್ರ ಮನೆಯಲ್ಲಿ ರಾಹುಲ್ ಗಾಂಧಿ: ಗೀತಾ ಶಿವರಾಜ್ ಕುಮಾರ್ ಗೆ ಕಾಂಗ್ರೆಸ್ ಗಾಳ.?

  ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಾರಾ?

  ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಾರಾ?

  ಇನ್ನು ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಮತ್ತೆ ಚುನಾವಣೆಯಲ್ಲಿ ಸ್ಫರ್ಧಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ ಅದನ್ನ ಕೂಡ ಅಲ್ಲೆಗೆಳೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

  'ವಿಲನ್' ಜೊತೆ ಶಿವಣ್ಣನ ಲಂಡನ್ ಪ್ರಯಾಣ ಯಾವಾಗ?

  English summary
  Kannada Actor Shivarajkumar Talk About Rumors of his Political Entry, After Kalyan Jewellers Inauguration Function at Hassan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X