ಆರ್‌ಸಿಬಿ vs ಸಿಎಸ್‌ಕೆ: ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಗೆ ಎನರ್ಜಿ ತುಂಬಲಿದ್ದಾರೆ ಶಿವಣ್ಣ

ಇಂದು ( ಏಪ್ರಿಲ್ 17 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡು ಬಿಗ್ಗೆಸ್ಟ್ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಜರುಗಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ಹೆಚ್ಚು ಕ್ರೇಜ್ ಹೊಂದಿರುವ ಪಂದ್ಯ ಇದಾಗಿದ್ದು, ಈ ಪಂದ್ಯವನ್ನು ಕ್ರೀಡಾಂಗಣಕ್ಕೆ ತೆರಳಿ ಕಣ್ತುಂಬಿಕೊಳ್ಳಬೇಕೆಂಬುದು ಎರಡೂ ತಂಡಗಳ ಪ್ರತಿಯೊಬ್ಬ ಅಭಿಮಾನಿಯ ಆಸೆ ಕೂಡ ಹೌದು. ಕೇವಲ ತಂಡಗಳ ಅಭಿಮಾನಿಗಳು ಮಾತ್ರವಲ್ಲದೇ ಚಲನಚಿತ್ರರಂಗದ ಕಲಾವಿದರೂ ಸಹ ಈ ಪಂದ್ಯ ವೀಕ್ಷಿಸಲು ಕ್ರೀಡಾಂಗಣದ ಅಂಗಳಕ್ಕೆ ಆಗಮಿಸುತ್ತಾರೆ.

Shivarajkumar to cheer for Royal Challegers Bangalore against CSK in Chinnswamy Stadium

ಹೌದು, ತಮ್ಮ ರಾಜ್ಯವನ್ನು ಟೂರ್ನಿಯಲ್ಲಿ ಪ್ರತಿನಿಧಿಸುತ್ತಿರುವ ತಂಡವನ್ನು ಪ್ರತಿನಿಧಿಸಲು ಸ್ಟಾರ್ ನಟರು ಹಾಗೂ ನಟಿಯರು ಆಗಮಿಸುವುದು ಸಾಮಾನ್ಯ. ಇನ್ನು ಈ ಬಾರಿಯ ಪಂದ್ಯ ಬೆಂಗಳೂರಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾರಣ ಕನ್ನಡದ ಕೆಲ ನಟ ಹಾಗೂ ನಟಿಯರು ಪಂದ್ಯ ವೀಕ್ಷಿಸಲು ಆಗಮಿಸಲಿದ್ದು, ಸ್ಯಾಂಡಲ್‌ವುಡ್‌ ಕಿಂಗ್ ಶಿವ ರಾಜ್‌ಕುಮಾರ್ ಈ ಪಂದ್ಯವನ್ನು ವೀಕ್ಷಿಸಲು ಚಿನ್ನಸ್ವಾಮಿಗೆ ತೆರಳಲಿದ್ದಾರೆ.

ಸೆಂಚುರಿ ಸ್ಟಾರ್ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದ ವಿವಿಐಪಿ ಎಂಟ್ರಿ ಪಾಸ್ ಅನ್ನು ಹಾಕಿಕೊಂಡು ಪೋಸ್ ನೀಡಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಿವ ರಾಜ್‌ಕುಮಾರ್ ಫ್ಯಾನ್ಸ್ ಪೇಜ್‌ಗಳು ಈ ಫೋಟೊವನ್ನು ಹಂಚಿಕೊಂಡು ತಮ್ಮ ನೆಚ್ಚಿನ ಹೀರೊ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೆಂಬಲ ನೀಡಿ ಎನರ್ಜಿ ತುಂಬಲು ಬರುತ್ತಿದ್ದಾರೆ ಎಂದು ಬರೆದುಕೊಂಡಿವೆ.

Shivarajkumar to cheer for Royal Challegers Bangalore against CSK in Chinnswamy Stadium

ಶಿವ ರಾಜ್‌ಕುಮಾರ್ ಮಾತ್ರವಲ್ಲದೇ ಕನ್ನಡ ಚಲನಚಿತ್ರರಂಗದ ಇನ್ನೂ ಮುಂತಾದ ಕೆಲ ಕಲಾವಿದರು ಕ್ರೀಡಾಂಗಣಕ್ಕೆ ತೆರಳಿ ಪಂದ್ಯ ವೀಕ್ಷಿಸುವ ಸಾಧ್ಯತೆಗಳಿವೆ. ಇನ್ನು ಏಪ್ರಿಲ್ 12ರಂದು ಚೆನ್ನೈನ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯ ನಡೆದಿದ್ದಾಗ ಆ ಪಂದ್ಯವನ್ನು ವೀಕ್ಷಿಸಲು ತಮಿಳಿನ ಸ್ಟಾರ್‌ಗಳು ಕ್ರೀಡಾಂಗಣಕ್ಕೆ ಆಗಮಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬೆಂಬಲ ನೀಡಿದ್ದರು.

ತಮಿಳಿನ ಸ್ಟಾರ್ ನಟಿ ತ್ರಿಶಾ ಕೃಷ್ಣನ್, ಬಿಂದು ಮಾಧವಿ ಹಾಗೂ ಮೇಘಾ ಆಕಾಶ್ ಆಗಮಿಸಿದ್ದರು. ಜತೆಗೆ ತಮಿಳಿನ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಸಹ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 3 ರನ್‌ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತ್ತು. ಪಂದ್ಯ ವೀಕ್ಷಿಸಲು ಬಂದಿದ್ದ ನಟಿಯರು ಬೇಸರದ ಮುಖ ಮಾಡಿಕೊಂಡು ಕುಳಿತಿದ್ದರು. ಈ ಪೈಕಿ ಮೇಘ ಆಕಾಶ್ ಕಣ್ಣಂಚಲ್ಲಿ ನೀರು ತುಂಬಿಕೊಂಡು ಕುಳಿತಿದ್ದ ಫೋಟೊ ಸಿಕ್ಕಾಪಟ್ಟೆ ವೈರಲ್ ಹಾಗೂ ಟ್ರೋಲ್ ಆಗಿತ್ತು.

More from Filmibeat

English summary
Shivarajkumar to cheer for Royal Challegers Bangalore against CSK in Chinnswamy Stadium. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X