ದಂತಚೋರ ವೀರಪ್ಪನ್ ನ ಕೊಂದವರು ಯಾರು?

By Harshitha

ವೀರಪ್ಪನ್....ದುಡ್ಡಿನ ದಾಹಕ್ಕಾಗಿ ಗಂಧದ ಮರಗಳನ್ನ ಕಳ್ಳಸಾಗಣೆ ಮಾಡ್ತಿದ್ದ ಖದೀಮ. ಲೆಕ್ಕವಿಲ್ಲದಷ್ಟು ಆನೆಗಳನ್ನು ಕೊಂದು ದಂತ ಸಾಗಾಣಿಕೆ ಮಾಡ್ತಿದ್ದ ದಂತಚೋರ. ಅಮಾಯಕ ಜನರನ್ನ ಕೊಂದ ನರಹಂತಕ. ಹುಟ್ಟಿಬೆಳೆದದ್ದು ತಮಿಳುನಾಡಲ್ಲೇ ಆದರೂ, ಕರ್ನಾಟಕ ಮತ್ತು ಕೇರಳಾ ರಾಜ್ಯಗಳಿಗೂ ಮೋಸ್ಟ್ ವಾಂಟೆಡ್ ಆಗಿದ್ದ ಕ್ರಿಮಿನಲ್ ಈತ.

ಇಂತಿಪ್ಪ ವೀರಪ್ಪನ್ ನ ಕೊಂದಿದ್ದು ಪೊಲೀಸ್ ಅಧಿಕಾರಿ ಕೆ.ವಿಜಯ್ ಕುಮಾರ್ ನೇತೃತ್ವದ ಎಸ್.ಟಿ.ಎಫ್ ತಂಡ ಅಂತ ಎಲ್ಲರಿಗೂ ಗೊತ್ತು. ಡಾ.ರಾಜ್ ಕುಮಾರ್ ಅಪಹರಣ ಪ್ರಸಂಗದಿಂದ ಕರ್ನಾಟಕದಲ್ಲಿ ಕುಖ್ಯಾತಿ ಗಳಿಸಿದ ವೀರಪ್ಪನ್ ನ ಟ್ರ್ಯಾಪ್ ಮಾಡಿ ಕೊಲ್ಲುವ ಸುತ್ತ ರಾಮ್ ಗೋಪಾಲ್ ವರ್ಮಾ ಈಗ ಸಿನಿಮಾ ಮಾಡ್ತಿದ್ದಾರೆ. [ಶಿವಣ್ಣ-ಆರ್.ಜಿ.ವಿ 'ಕಿಲ್ಲಿಂಗ್ ವೀರಪ್ಪನ್' ಫಸ್ಟ್ ಲುಕ್ ಔಟ್]

Shivarajkumar to play a Gentleman in 'Killing Veerappan'

'ಕಿಲ್ಲಿಂಗ್ ವೀರಪ್ಪನ್' ಅನ್ನುವ ಹೆಸರಲ್ಲಿ ವೀರಪ್ಪನ್ ಸಾವಿನ ಸುತ್ತ ಇರುವ ಅನೇಕ ರಹಸ್ಯಗಳನ್ನ ಬೆಳ್ಳಿತೆರೆ ಮೇಲೆ ಬಹಿರಂಗ ಮಾಡಲಿದ್ದಾರೆ ವರ್ಮಾ ಸಾಹೇಬ್ರು. ವಿಶೇಷ ಅಂದ್ರೆ, ಶಿವರಾಜ್ ಕುಮಾರ್ ಇಲ್ಲಿ ಕಾಡುಗಳ್ಳನನ್ನ ಕೊಲ್ಲುವ ಪ್ರಮುಖ ಪಾತ್ರಧಾರಿ ಆಗಿ ಕಾಣಿಸಿಕೊಳ್ಳಲಿದ್ದಾರೆ. [ಶಿವಣ್ಣನ ಕೈಲಿ ವೀರಪ್ಪನ್ ಹತ್ಯೆ ಮಾಡಿಸ್ತಾರೆ ವರ್ಮಾ.!]

ಅಂದ್ಮೇಲೆ, ಎಸ್.ಟಿ.ಎಫ್ ಅಧಿಕಾರಿ ಕೆ.ವಿಜಯ್ ಕುಮಾರ್ ಆಗಿ ಶಿವಣ್ಣ ಕಾಣಿಸಿಕೊಳ್ತಾರೆ ಅಂತಲೇ ಇಲ್ಲಿಯವರೆಗೂ ಊಹಿಸಲಾಗಿತ್ತು. ಆದ್ರೆ, ಇದಕ್ಕೆ ರಾಮ್ ಗೋಪಾಲ್ ವರ್ಮಾ ಈಗ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಕೆ.ವಿಜಯ್ ಕುಮಾರ್ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿಲ್ಲ.!

Shivarajkumar to play a Gentleman in 'Killing Veerappan'

ಹಾಗಾದ್ರೆ, ಶಿವಣ್ಣನ ಪಾತ್ರವೇನು? ಅಂದ್ರೆ 'ಜೆಂಟಲ್ ಮ್ಯಾನ್' ಅನ್ನುವ ಉತ್ತರ ವರ್ಮಾ ಬಾಯಿಂದ ಬರುತ್ತದೆ. ಸೋ...ವೀರಪ್ಪನ್ ನ ಕೊಂದಿದ್ದು ಕೆ.ವಿಜಯ್ ಕುಮಾರ್ ಅಲ್ಲ ಅಂತರ್ಥ ಅಲ್ವಾ? ಅಂತ ಈಗೆಲ್ಲರೂ ತಲೆಯಲ್ಲಿ ಹುಳಬಿಟ್ಟುಕೊಂಡಿದ್ದಾರೆ. ['ಕಿಲ್ಲಿಂಗ್ ವೀರಪ್ಪನ್' ಶಿವಣ್ಣನ ಮಹತ್ವಾಕಾಂಕ್ಷಿ ಚಿತ್ರ]

ರಿಯಲಿಸ್ಟಿಕ್ ಸಿನಿಮಾಗಳಿಂದಲೇ ಹೆಸರುವಾಸಿ ಆಗಿರುವ ವರ್ಮಾ, ಯಾವುದೇ ಕಾಂಟ್ರವರ್ಸಿಗಳಿಗೆ ತಲೆಕೆಡಿಸಿಕೊಂಡವರಲ್ಲ. ಇದ್ದಿದ್ದನ್ನ ಇದ್ದ ಹಾಗೆ, ಫಿಲ್ಟರ್ ಇಲ್ಲದೇ ತೆರೆ ಮೇಲೆ ತರುವ ವರ್ಮಾ, 'ಕಿಲ್ಲಿಂಗ್ ವೀರಪನ್' ಚಿತ್ರಕ್ಕಾಗಿ ಸಾಕಷ್ಟು ರಿಸರ್ಚ್ ಮಾಡಿದ್ದಾರೆ. [ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಶಿವಣ್ಣ]

Shivarajkumar to play a Gentleman in 'Killing Veerappan'

ಪೊಲೀಸ್ ಅಧಿಕಾರಿ ಕೆ.ವಿಜಯ್ ಕುಮಾರ್ ಬಿಟ್ಟು ಬೇರೆ ಪಾತ್ರದಲ್ಲಿ ಶಿವಣ್ಣ ಮಿಂಚ್ತಿದ್ದಾರೆ ಅಂದ್ರೆ, ವೀರಪ್ಪನ್ ನ ಕೊಂದವರು ಯಾರು? ಅನ್ನುವ ಪ್ರಶ್ನೆಗೆ ಆರ್.ಜಿ.ವಿ ತೆರೆಮೇಲೆ ಹೊಸ ಉತ್ತರ ಕೊಡಬಹುದೇನೋ..!?

More from Filmibeat

English summary
Controversial Director Ram Gopal Varma directorial, Century Star Shivarajkumar starrer 'Killing Veerappan' is all about a Man who killed Forest Brigand Veerappan. Director RGV has revealed that Shivarajkumar is not playing STF Officer Vijaykumar in the film but plays a Gentleman. So who killed Veerappan is a question as of now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X