twitter
    For Quick Alerts
    ALLOW NOTIFICATIONS  
    For Daily Alerts

    'ಅಪ್ಪುನ ದೂರ ತಳ್ಳಬೇಡಿ ನಿಮ್ಮ ಮನಸ್ಸಿನಲ್ಲೇ ಇಟ್ಕೊಳ್ಳಿ': ಪುನೀತ್ ನೆನೆದು ಶಿವಣ್ಣ ಭಾವುಕ

    |

    ತಮ್ಮನ ಅಗಲಿಕೆಯ ನೋವಿನಿಂದ ಶಿವರಾಜ್‌ಕುಮಾರ್ ಇನ್ನೂ ಹೊರಬಂದಿಲ್ಲ. ಪುನೀತ್ ರಾಜ್‌ಕುಮಾರ್ ನೆನೆದು ಶಿವಣ್ಣ ಸಮಾರಂಭವೊಂದರಲ್ಲಿ ಕಣ್ಣೀರು ಹಾಕಿದ್ದಾರೆ. ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಪುನೀತ್ ರಾಜ್‍ಕುಮಾರ್ ಸ್ಮರಣಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ವೇಳೆ ಶಿವಣ್ಣ ಅಪ್ಪು ನೆನೆದು ಭಾವುಕರಾಗಿದ್ದಾರೆ.

    ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಆವರಣದಲ್ಲಿ ಕಾರ್ಯಕ್ರಮ ಆರಂಭ ಆಗಿತ್ತು. ಈ ಸಮಾರಂಭದಲ್ಲಿ ಪವರ್‌ಸ್ಟಾರ್ ಪುನೀತ್ ಚಿತ್ರದ ಹಾಡನ್ನು ಹಾಡುವಾಗ ಶಿವಣ್ಣ ಕಣ್ಣುಗಳು ಒದ್ದೆಯಾಗಿದ್ದರು. ತಮ್ಮ ಪುನೀತ್ ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ರು. ಇದೇ ವೇಳೆ ವೇದಿಕೆ ಮೇಲೆ ಮಾತಾಡುತ್ತಾ, ಅಪ್ಪುನಾ ದೂರ ತಳ್ಳಬೇಡಿ ಅಂತ ನಿಮ್ಮ ಮನಸ್ಸಿನಲ್ಲೇ ಇಟ್ಟುಕೊಳ್ಳಿ ಅಂತ ಭಾವುಕರಾಗಿದ್ದಾರೆ.

    ಅಪ್ಪು ಪರ್ಫೆಕ್ಟ್ ಎಗ್ಸಾಂಪಲ್- ಶಿವಣ್ಣ

    ಅಪ್ಪು ಪರ್ಫೆಕ್ಟ್ ಎಗ್ಸಾಂಪಲ್- ಶಿವಣ್ಣ

    ಶಿವಣ್ಣ ಈಡಿಗರ ಸಂಘ ಆಯೋಜಿಸಿದ ಕಾರ್ಯಕ್ರಮದ ವೇದಿಕೆ ಮೇಲೆ ತಮ್ಮ ಪುನೀತ್ ಕಾರ್ಯಗಳನ್ನು ನೆನಪಿಸಿಕೊಂಡರು. " ಸಮಾಜ ಏನ್ ಮಾಡ್ತು.. ಸಮಾಜ ಏನ್ ಮಾಡ್ತು ಅಂತ ಎಲ್ಲರೂ ಕೇಳಿಕೊಳ್ತಿವಿ. ಆದರೆ ನಾವು ಏನ್ ಮಾಡ್ತೀವಿ ಸಮಾಜಕ್ಕೆ ಅನ್ನುವುದು ಮುಖ್ಯ ಆಗುತ್ತೆ. ಅದಕ್ಕೆ ಅಪ್ಪು ಪರ್ಫೆಕ್ಟ್ ಎಗ್ಸಾಂಪಲ್ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಇವತ್ತು ಹೇಗಿರಬೇಕು ಅನ್ನುವುದನ್ನು ತೋರಿಸಿಕೊಟ್ಟು ಹೋಗ್ಬಿಟ್ಟ ಅವನು." ಎಂದು ಶಿವಣ್ಣ ಹೇಳಿದ್ದಾರೆ.

    ಅಪ್ಪು ಮುಂದೆನೂ ರಾಯಲ್ ಆಗಿ ಇರ್ತಾನೆ ಅಂತ ಹೇಳಿದ್ದೆ

    ಅಪ್ಪು ಮುಂದೆನೂ ರಾಯಲ್ ಆಗಿ ಇರ್ತಾನೆ ಅಂತ ಹೇಳಿದ್ದೆ

    " ಸಮಾರಂಭವೊಂದರಲ್ಲಿ ಹೇಳಿದ್ದೆ. ಅಪ್ಪು ಬೆಳೆದಿದ್ದೇ ರಾಯಲ್, ಇವತ್ತು ರಾಯಲ್ ಆಗಿ ಇರ್ತಾನೆ. ಮುಂದೆನೂ ರಾಯಲ್ ಆಗಿ ಇರ್ತಾನೆ ಅಂತ ಹೇಳಿದ್ದೆ. ಆದಷ್ಟು ಬೇಗ ಆ ರಾಯಲ್ಟಿನಾ ಕಿತ್ಕೊಂಡು ಬಿಟ್ಟ ಆ ದೇವರು. ಆದರೂ, ಅವನು ಹೋಗದ್ದೂ ರಾಯಲ್ ಆಗಿ ಹೋದ. ಯಾಕಂದ್ರೆ, ನಿಮ್ಮಂಥ ರಾಯಲ್ ಜನರ ಜೊತೆ ಬೆಳೆದಿದ್ದ ಅವನು. ಅಷ್ಟು ಪ್ರೀತಿ ಗಳಿಸಿದ್ದ. ಎಲ್ಲರೂ ಹೇಳ್ತಾರೆ, ನಿಮಗೊಬ್ಬ ಅಣ್ಣ ಹಿಂಗಿದ್ದ, ನಮ್ಮ ಅಪ್ಪ ಹಿಂಗಿದ್ರು, ನಮ್ಮ ಅಮ್ಮ ಹಿಂಗಿದ್ರು ಅಂತ. ನನಗೆ ನನ್ನ ತಮ್ಮ ಹಿಂದಿದ್ದ ಕಣಯ್ಯ ಅಂತ. ಅಂತಹ ವ್ಯಕ್ತಿ ಹೋಗ್ಬಿಟ್ನಲ್ಲ ನಮ್ಮನ್ನು ಬಿಟ್ಟು. ಈ ನೋವನ್ನು ನಾನು ಸಾಯುವವರೆಗೂ ಮರೆಯೋಕೆ ಆಗಲ್ಲ." ಅಪ್ಪು ನೆನೆದು ಶಿವಣ್ಣ ನೋವಿನಿಂದಲೇ ಮಾತಾಡಿದ್ದಾರೆ.

    ಲಾಂಗ್ ಹಿಡಿದರೂ ಮನಸ್ಸು ಅನ್ನೋದಿರುತ್ತೆ

    ಲಾಂಗ್ ಹಿಡಿದರೂ ಮನಸ್ಸು ಅನ್ನೋದಿರುತ್ತೆ

    "ಎಲ್ಲರೂ ನೀವು ದೊಡ್ಡವರು. ನೀವು ತಡೆದುಕೊಳ್ಳಬೇಕು ಅಂತಾರೆ. ನಾನು ತಡೆದುಕೊಳ್ಳುವುದು ಬಹಳ ಕಷ್ಟ. ನಾನು ನೋಡೋಕೆ ಹೀಗಿದ್ದೀನಿ ಅಷ್ಟೇ. ಹೇಳ್ಬಹುದು ಇವರು ಲಾಂಗ್ ಹಿಡಿದು ಬಿಡ್ತಾರೆ ಅಂತ. ಲಾಂಗ್ ಹಿಡಿದರೂ ಮನಸ್ಸು ಅನ್ನುವುದೊಂದು ಇದ್ದೇ ಇರುತ್ತೆ. ಆ ಮನಸ್ಸನ್ನು ಯಾರೂ ಬ್ರೇಕ್ ಮಾಡಲು ಆಗಲ್ಲ. ಆ ನೋವು ಯಾವಾಗಲೂ ಕಾಡುತ್ತಲೇ ಇರುತ್ತೆ. ಕಾಡಬೇಕು ಅದು. ಕಾಡಿದರನೇ ಅವನ ನೆನಪು ಯಾವಾಗಲೂ ಜೊತೆಯಲ್ಲಿ ಇರುತ್ತೆ." ಎಂದು ಶಿವಣ್ಣ ಅಪ್ಪು ಬಗ್ಗೆ ಮಾತಾಡಿದ್ದಾರೆ.

    ಅಪ್ಪುನಾ ದೂರ ತಳ್ಳಬೇಡಿ: ಶಿವಣ್ಣ ಮನವಿ

    ಅಪ್ಪುನಾ ದೂರ ತಳ್ಳಬೇಡಿ: ಶಿವಣ್ಣ ಮನವಿ

    "ಅಪ್ಪುನಾ ದೂರ ತಳ್ಭೇಡಿ, ಅದಷ್ಟು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಯಾವತ್ತೋ ಅಪ್ಪು ಬರಬಹುದೇನೋ. ಎಲ್ಲೋ ಫಾರಿನ್ ಶೂಟಿಂಗ್ ಹೋಗಿರಬೇಕು. ಇಲ್ಲಾ ಚಂದ್ರ ಮಂಡಲಕ್ಕೆ ಹೋಗಿದ್ದಾನೆ. ಬರ್ತಾನೆ ಅವನು. ಆ ಬರ್ತಾನೆ ಅನ್ನೋ ನಂಬಿಕೆಯಲ್ಲೇ ಕಾಯೋಣ. ಅದರಲ್ಲೇ ಜೀವನ ನಡೆಯುತ್ತೆ. ಆತ್ಮಹತ್ಯೆ ಮಾಡಿಕೊಳ್ತಾರಲ್ಲಾ ಅದನ್ನೇ ಕೇಳಿಕೊಳ್ಳುವುದು. ನಿಮ್ಮ ಕುಟುಂಬದ ಬಗ್ಗೆ ಯೋಚನೆ ಮಾಡಿ. ಅಪ್ಪು ಇದ್ದಿದ್ದರೆ, ಇದನ್ನು ಆಸೆ ಪಡುತ್ತಿರಲಿಲ್ಲ. ಅಪ್ಪ ನೆನಪು ಇಟ್ಕೊಂಡು ನೀವು ಹೋಗಬಾರದು. ಅಪ್ಪು ನೆನಪು ಇಟ್ಕೊಂಡು ನೀವು ಬದುಕಬೇಕು." ಎಂದು ವೇದಿಕೆ ಮೇಲೆ ಭಾವುಕರಾಗಿದ್ದಾರೆ.

    English summary
    Shivarajkumar cried in the Puneeth Rajkumar condolence program organized byidiga community. Where he requested fans not to forget Puneeth Rajkumar.
    Monday, December 6, 2021, 9:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X