'45' ಪ್ರೀಮಿಯರ್ ಶೋ ಟಿಕೆಟ್ ಬುಕ್ಕಿಂಗ್‌ಗೆ ಅದ್ಭುತ ರೆಸ್ಪಾನ್ಸ್; 10 ಸಾವಿರಕ್ಕೂ ಅಧಿಕ ಟಿಕೆಟ್ ಸೋಲ್ಡೌಟ್

ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್‌. ಬಿ ಶೆಟ್ಟಿ ನಟನೆಯ '45' ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಬಾಕಿಯಿದೆ. ವಿದೇಶಗಳಲ್ಲಿ 2 ದಿನ ಮುನ್ನ ಸಿನಿಮಾ ತೆರೆಗೆ ಬರ್ತಿದೆ. ಕರ್ನಾಟದಲ್ಲಿ ಡಿಸೆಂಬರ್ 24ರಂದು ಪ್ರೀಮಿಯರ್ ಶೋಗಳು ಆರಂಭವಾಗಲಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

ಕ್ರಿಸ್‌ಮಸ್ ಸಂಭ್ರಮದಲ್ಲಿ ಇದೇ ಗುರುವಾರ(ಡಿಸೆಂಬರ್ 25) ಬಹುನಿರೀಕ್ಷಿತ '45' ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಟ್ರೈಲರ್, ಸಾಂಗ್ಸ್ ಹಿಟ್ ಆಗಿ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ. ಅರ್ಜುನ್ ಜನ್ಯಾ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಸಿನಿಮಾ ಇದು. ಈಗಾಗಲೇ ಸೆನ್ಸಾರ್ ಕೆಲಸ ಮುಗಿಸಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಲಿದೆ.

Shivarajkumar Upendra Raj B Shetty s 45 Gears Up for Grand Release with Record Advance Bookings

ಕನ್ನಡದಲ್ಲಿ ಈ ವಾರ ಸಿನಿಮಾ ಬಿಡುಗಡೆ ಆಗಲಿದ್ದು ಬೇರೆ ಭಾಷೆಗಳಲ್ಲಿ ಮುಂದಿನ ವಾರ ತೆರೆಗಪ್ಪಳಿಸಲಿದೆ. ಶಿವಣ್ಣ, ಉಪ್ಪಿ, ರಾಜ್ ಒಟ್ಟಿಗೆ ನಟಿಸಿರುವುದೇ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ನಿರ್ಮಾಪಕ ರಮೇಶ್ ರೆಡ್ಡಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಗ್ರಾಫಿಕ್ಸ್ ಬಳಸಿ ಅದ್ಭುತವಾಗಿ ಕೆಲ ಸನ್ನಿವೇಶಗಳನ್ನು ಕಟ್ಟಿಕೊಡಲಾಗಿದೆ. ಟ್ರೈಲರ್ ನೋಡುತ್ತಿದ್ದರೆ ಸಿನಿಮಾ ಪ್ರೇಕ್ಷಕರನ್ನು ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುವಂತಿದೆ.

ಬುಧವಾರ ನಡೆಯುವ ಪ್ರೀಮಿಯರ್ ಶೋ ಟಿಕೆಟ್ ಬುಕ್ಕಿಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಸಾಕಷ್ಟು ಶೋಗಳು ಶೋಗಳು ಹೌಸ್‌ಫುಲ್ ಆಗ್ತಿದೆ. ಕೆಲ ಶೋಗಳ ಟಿಕೆಟ್ ಸೋಲ್ಡೌಟ್ ಆಗೋಗಿದೆ. ಬುಕ್ಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ '45' ಸಿನಿಮಾ ಟಿಕೆಟ್ ಹಾಟ್ ಕೇಕ್ ರೀತಿ ಸೇಲ್ ಆಗಿದೆ. ಬೆಂಗಳೂರಿನಲ್ಲೇ 20ಕ್ಕೂ ಹೆಚ್ಚು ಪ್ರೀಮಿಯರ್ ಶೋಗಳು ಹೌಸ್ ಫುಲ್ ಆಗುವ ಸುಳಿವು ಸಿಕ್ಕಿದೆ. ವೀಕೆಂಡ್ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಲೆಕ್ಕಾಚಾರ ನಡೀತಿದೆ.

ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ 25 ಲಕ್ಷಕ್ಕೂ ಹೆಚ್ಚು ಕಲೆಕ್ಷನ್ ಆಗಿದೆ. 10 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ. ಸಿನಿಮಾ ಬಿಡುಗಡೆಗೆ ಇನ್ನು 2 ದಿನ ಬಾಕಿಯಿದ್ದು ಮತ್ತಷ್ಟು ಜನ ಟಿಕೆಟ್ ಬುಕ್ ಮಾಡಲು ಮುಗಿಬೀಳುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲ ಮೈಸೂರು, ಬಳ್ಳಾರಿ ಸೇರಿ ಹಲವು ಭಾಗಗಳಲ್ಲಿ ಪ್ರೀಮಿಯರ್ ಶೋಗಳ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಮೈಸೂರಿನ 3 ಶೋಗಳ ಟಿಕೆಟ್ ಬುಕ್ಕಿಂಗ್ ಜೋರಾಗಿದೆ.

ಕಥೆಯ ಬಗ್ಗೆ ಸುಳಿವು ಬಿಟ್ಟುಕೊಡದೇ '45' ಚಿತ್ರತಂಡ ಎಚ್ಚರ ವಹಿಸಿದೆ. ಶಿವಣ್ಣ, ಉಪ್ಪಿ ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ದರ್ಶನ ಕೊಟ್ಟಿದ್ದಾರೆ. 40 ದಿನಗಳ ಕಾಲ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿದ್ದಾರೆ. ಹಾಗಾಗಿ ಕೊನೆ 20 ನಿಮಿಷ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಖ್ಯಾತ ವಿತರಣೆ ಸಂಸ್ಥೆಗಳು ಬೇರೆ ಭಾಷೆಗಳ ರೈಟ್ಸ್ ಕೊಂಡುಕೊಂಡಿವೆ. ಡಿಜಿಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿದೆ.

ಸ್ವತಃ ಅರ್ಜುನ್ ಜನ್ಯಾ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ವಿದೇಶಗಳಲ್ಲಿ ರೆಕಾರ್ಡಿಂಗ್, ಗ್ರಾಫಿಕ್ಸ್ ಮಾಡಲಾಗಿದೆ. ಸತ್ಯಾ ಹೆಗಡೆ ಛಾಯಾಗ್ರಹಣ, ಅನಿಲ್ ಕುಮಾರ್ ಸಂಭಾಷಣೆ '45' ಚಿತ್ರಕ್ಕಿದೆ. ರಾಜೇಂದ್ರನ್, ಕೌಸ್ತುಭ ಮಣಿ, ಜಿಶು ಸೆಂಗುಪ್ತ, ಪೂಜಾ ರಾಮಚಂದ್ರನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಪುರಾಣಗಳಿಗೆ ಲಿಂಕ್ ಮಾಡಿ ಒಂದು ಫ್ಯಾಂಟಸಿ ಕತೆಯನ್ನು ಚಿತ್ರದಲ್ಲಿ ಹೇಳುತ್ತಿರುವಂತೆ ಕಾಣುತ್ತಿದೆ. ಸಿನಿಮಾ ತೆರೆಮೇಲೆ ಅದ್ಭುತ ಅನುಭವ ನೀಡುವ ನಿರೀಕ್ಷೆಯಿದೆ. ಇನ್ನು ಶಿವಣ್ಣ ಹೆಣ್ಣಿನ ವೇಷ ಹಾಕಿರುವುದು ಕೂಡ ಗಮನ ಸೆಳೆದಿದೆ.

More from Filmibeat

Read more about: shivarajkumar upendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X