ಫ್ಯಾನ್ಸ್ ಮನವಿಗೆ ಒಪ್ಪಿದ ಚಿತ್ರತಂಡ; ಹೊಸ ವರ್ಷದಲ್ಲಿ '45' ಚಿತ್ರ ನೋಡುವವರಿಗೆ ಸರ್‌ಪ್ರೈಸ್

ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್‌. ಬಿ ಶೆಟ್ಟಿ ನಟನೆಯ '45' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಹೊಸ ವರ್ಷದ ಸಂಭ್ರಮದಲ್ಲಿ ಪರಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ. ರಾಜ್ಯದಲ್ಲಿ ಸಿನಿಮಾ ಗೆಲುವಿನ ಪಯಣ ಮುಂದುವರೆದಿದೆ. ನಾಳೆಯಿಂದ(ಜನವರಿ) ಸಿನಿಮಾ ನೋಡುವವರಿಗೆ ಭರ್ಜರಿ ಸರ್‌ಪ್ರೈಸ್ ಕಾದಿದೆ.

ಕ್ರಿಸ್‌ಮಸ್ ಸಂಭ್ರಮದಲ್ಲಿ '45' ಸಿನಿಮಾ ಬಿಡುಗಡೆಯಾಗಿತ್ತು. ಫ್ಯಾಮಿಲಿ ಆಡಿಯನ್ಸ್‌ನ ಸಿನಿಮಾ ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. 'ಧುರಂಧರ್', 'ಮಾರ್ಕ್' ಸಿನಿಮಾಗಳ ಆರ್ಭಟದ ನಡುವೆಯು ತ್ರಿಮೂರ್ತಿಗಳ ಆರ್ಭಟ ಜೋರಾಗಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ರಜೆ ಚಿತ್ರಕ್ಕೆ ಪ್ಲಸ್ ಆಗಿದೆ. ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ.

Shivarajkumar Upendra Raj B Shetty s 45 Gets New Year Boost as Afro Tapaang Song Added to Theatrical Version

'45' ಚಿತ್ರದಲ್ಲಿ ಯಾವುದೇ ಹಾಡು ಇರಲಿಲ್ಲ. ಎರಡೂವರೆ ಗಂಟೆಗೆ ಚಿತ್ರದ ಕಾಲಾವಧಿಯನ್ನು ಇಳಿಸಲಾಗಿತ್ತು. ಚಿತ್ರದ ಪ್ರಚಾರಕ್ಕಾಗಿಯೇ ಸ್ಪೆಷಲ್ ಸಾಂಗ್ ಶೂಟ್ ಮಾಡಿದ್ದರು. 'ಆಫ್ರೋ ಟಪಾಂಗ್' ಸಾಂಗ್ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಶಿವಣ್ಣ, ಉಪ್ಪಿ ಹಾಗೂ ರಾಜ್ ಡ್ಯಾನ್ಸ್ ಅಭಿಮಾನಿಗಳಿಗೆ ಕಿಕ್ ಕೊಡುವಂತಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಲಕ್ಷ ಲಕ್ಷ ವೀವ್ಸ್ ಸಾಧಿಸಿ ಸದ್ದು ಮಾಡ್ತಿದೆ. ಆದರೆ ತೆರೆಮೇಲೆ ಸಿನಿಮಾ ನೋಡುವವರಿಗೆ ನಿರಾಸೆ ಕಾದಿತ್ತು. ಬೆಳ್ಳಿ ಪರದೆಗಳಲ್ಲಿ ಹಾಡು ಪ್ರದರ್ಶನವಾಗಲಿಲ್ಲ. ಆದರೆ ಹೊಸವರ್ಷದಲ್ಲಿ ಈ ಹಾಡನ್ನು ಸೇರಿಸಿ ಸಿನಿಮಾ ಪ್ರದರ್ಶನ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ಹೌದು.. ಜನವರಿ 1ರಿಂದ ಚಿತ್ರಮಂದಿರಗಳಲ್ಲಿ '45' ಸಿನಿಮಾ ನೋಡುವವರು 'ಆಫ್ರೋ ಟಪಾಂಗ್' ಸಾಂಗ್ ಕೂಡ ನೋಡಿ ಎಂಜಾಯ್ ಮಾಡಬಹುದು. ಸಾಕಷ್ಟು ಅಭಿಮಾನಿಗಳು ಈ ಹಾಡನ್ನು ಸೇರಿಸುವಂತೆ ಮನವಿ ಮಾಡಿದ್ದರು. ಹಾಗಾಗಿ ಚಿತ್ರತಂಡ ಈ ಪ್ರಯತ್ನಕ್ಕೆ ಮುಂದಾಗಿದೆ. 'ಆಫ್ರೋ' ಸಾಂಗ್ ಸೇರ್ಪಡೆ ಮಾಡಿ ಸಿನಿಮಾ ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ.

Shivarajkumar Upendra Raj B Shetty s 45 Gets New Year Boost as Afro Tapaang Song Added to Theatrical Version

ಅರ್ಜುನ್ ಜನ್ಯಾ '45' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. 'ಆಫ್ರೋ ಟಪಾಂಗ್' ಸಾಂಗ್ ಜೊತೆಗೆ ಒಂದು ಡ್ಯುಯೆಟ್ ಸಾಂಗ್ ಕೂಡ ಸಿದ್ಧಪಡಿಸಿದ್ದರು. ರಾಜ್‌. ಬಿ ಶೆಟ್ಟಿ ಹಾಗೂ ಕೌಸ್ತುಬ ಮಣಿ ಕಾಣಿಸಿಕೊಂಡಿದ್ದ ಮೆಲೋಡಿ ಸಾಂಗ್ ಅದು. ಆದರೆ ಚಿತ್ರದ ವೇಗಕ್ಕೆ ಬ್ರೇಕ್ ಹಾಕುತ್ತದೆ ಎನ್ನುವ ಕಾರಣಕ್ಕೆ ಅದನ್ನು ತೆಗೆದು ಹಾಕಲಾಗಿದೆ. ಇದೀಗ ಚಿತ್ರದ ಪ್ರಮೋಷನ್‌ಗಾಗಿ ಮಾಡಿದ್ದ 'ಆಫ್ರೋ ಟಪಾಂಗ್' ಸಾಂಗ್ ಅನ್ನು ಸೇರಿಸಿ ಸಿನಿಮಾ ಪ್ರದರ್ಶನ ಮಾಡುತ್ತಿದ್ದಾರೆ.

ಎಂ ಸಿ ಬಿಜ್ಜು ಮತ್ತು ನಿಶಾನ್ ರೈ ಸೇರಿ 'ಆಫ್ರೋ ಟಪಾಂಗ್' ಸಾಂಗ್‌ಗೆ ಸಾಹಿತ್ಯ ಬರೆದು ಹಾಡಿದ್ದಾರೆ. ಜಾನಿ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿರೋದು ವಿಶೇಷ. ಉಂಗಾಡದ ಘೆಟ್ಟೋ ಕಿಡ್ಸ್ ಜೊತೆ ಶಿವಣ್ಣ, ಉಪ್ಪಿ, ರಾಜ್ ಬಿಂದಾಸ್ ಆಗಿ ಕುಣಿದು ರಂಗೇರಿಸಿದ್ದಾರೆ. ಒಟ್ಟಾರೆ ಈ ಸಾಂಗ್ ಚಿತ್ರಮಂದಿರಗಳಲ್ಲಿ ನೋಡಲು ಸಖತ್ ಮಜಾ ಕೊಡಲಿದೆ.

ಪರಭಾಷೆಗಳಲ್ಲಿ ರಿಲೀಸ್

ಹೊಸ ವರ್ಷದ ಸಂಭ್ರಮದಲ್ಲಿ ತೆಲುಗು, ತಮಿಳು ಸೇರಿ ಬೇರೆ ಭಾಷೆಗಳಲ್ಲಿ '45' ಸಿನಿಮಾ ಬಿಡುಗಡೆ ಆಗಲಿದೆ. ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ವಿತರಣೆ ಮಾಡಿತ್ತು. ಆಂಧ್ರ, ತೆಲಂಗಾಣ ರೈಟ್ಸ್ ಮೈತ್ರಿ ಮೂವಿ ಮೇಕರ್ಸ್, ತಮಿಳುನಾಡು ರೈಟ್ಸ್ ಎಜಿಎಸ್ ಎಂಟರ್‌ಟೈನ್‌ಮೆಂಟ್ಸ್, ಕೇರಳ ರೈಟ್ಸ್ ವೇಫೇರರ್ ಫಿಲ್ಸ್ ಹಾಗೂ ಉತ್ತರ ಭಾರತದ ರೈಟ್ಸ್ ಜೀ ಸ್ಟುಡಿಯೋ ಸಂಸ್ಥೆ ಕೊಂಡುಕೊಂಡಿರುವುದು ವಿಶೇಷ.

'45' ಬಾಕ್ಸಾಫೀಸ್ ಕಲೆಕ್ಷನ್

ಪೈರಸಿ, ಬೇರೆ ಸಿನಿಮಾಗಳ ಹಾವಳಿ ನಡುವೆಯೂ '45' ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. 12.90 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಬೇರೆ ಭಾಷೆಗಳಲ್ಲಿ ಕೂಡ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುವ ನಿರೀಕ್ಷೆಯಿದೆ.

More from Filmibeat

Read more about: shivarajkumar upendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X