ಸೆನ್ಸಾರ್ ಮುಗಿಸಿದ '45' ಸಿನಿಮಾ; ರನ್ ಟೈಮ್ ವಿಚಾರದಲ್ಲಿ ಅರ್ಜುನ್ ಜನ್ಯಾ ಜಾಣ್ಮೆ

ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್‌.ಬಿ ಶೆಟ್ಟಿ ನಟನೆಯ '45' ಸಿನಿಮಾ ಡಿಸೆಂಬರ್ 25ಕ್ಕೆ ತೆರೆಗೆ ಬರ್ತಿದೆ. ಇನ್ನೆರೆಡು ದಿನಗಳಲ್ಲಿ ಟ್ರೈಲರ್ ಲಾಂಚ್ ಆಗಲಿದೆ. 8 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಈವೆಂಟ್ ಪ್ಲ್ಯಾನ್ ಮಾಡಲಾಗುತ್ತಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ರಮೇಶ್ ರೆಡ್ಡಿ ನಿರ್ಮಾಣದ '45' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸದ್ದಿಲ್ಲದೇ ಸೆನ್ಸಾರ್ ಮುಗಿಸಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, 13 ದಿನ ಮುನ್ನ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ. ಜೊತೆಗೆ ಚಿತ್ರದ ಕಾಲಾವಧಿ ಎಷ್ಟು ಎನ್ನುವುದು ರಿವೀಲ್ ಆಗಿದೆ. ಸಿಂಪಲ್ ಕಥೆ ಇಷ್ಟುಕೊಂಡು ತೆರೆಮೇಲೆ ಅದ್ಭುತ ಸೃಷ್ಟಿಸಲು ಜನ್ಯಾ ಅಂಡ್ ಟೀಮ್ ಮುಂದಾಗಿದೆ.

Shivarajkumar Upendra Raj B Shetty s film 45 Censor Certificate Theatrical Runtime and Plot Details

ಈಗಾಗಲೇ '45' ಚಿತ್ರದ ಟೀಸರ್ ಹಾಗೂ ಪ್ರಮೋಷನಲ್ ಸಾಂಗ್ ಹಿಟ್ ಆಗಿದೆ. ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಎದುರು ಈ ಮಲ್ಟಿಸ್ಟಾರರ್ ಸಿನಿಮಾ ಕೂಡ ಬರ್ತಿದೆ. ಬಹಳ ವರ್ಷಗಳ ಬಳಿಕ ಮತ್ತೆ ಶಿವಣ್ಣ, ಉಪೇಂದ್ರ ಒಟ್ಟಿಗೆ ನಟಿಸಿದ್ದಾರೆ. 'ಪ್ರೀತ್ಸೆ' ಚಿತ್ರದಲ್ಲಿ ಮೊದಲ ಬಾರಿಗೆ ಇಬ್ಬರು ತೆರೆ ಹಂಚಿಕೊಂಡಿದ್ದರು. ಬಳಿಕ 'ಲವ-ಕುಶ' ಚಿತ್ರದಲ್ಲಿ ಮಿಂಚಿದ್ದರು. ಇದೀಗ ಇವರಿಬ್ಬರ ಹ್ಯಾಟ್ರಿಕ್ ಕಾಂಬಿನೇಷನ್ ತೆರೆಮೇಲೆ ಜಾದೂ ಮಾಡಲು ಬರ್ತಿದೆ.

ಸೆನ್ಸಾರ್ ವಿಚಾರಕ್ಕೆ ಬಂದರೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. '45' ಚಿತ್ರದ ಕಾಲಾವಧಿ 2 ಗಂಟೆ 30 ನಿಮಿಷ ಎನ್ನುವುದು ಬಯಲಾಗಿದೆ. ಈ ವಿಚಾರದಲ್ಲಿ ಅರ್ಜುನ್ ಜನ್ಯಾ ಜಾಣ್ಮೆಯನ್ನು ಮೆಚ್ಚಲೇಬೇಕು. ಇತ್ತೀಚೆಗೆ ಎರಡೂವರೆ ಗಂಟೆಗಿಂತ ಹೆಚ್ಚು ಹೊತ್ತು ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಹಿಡಿದಿಟ್ಟುಕೊಳ್ಳುವುದು ಕಷ್ಟ. ಸುದೀರ್ಘ ಕಾಲಾವಧಿ ಕಾರಣಕ್ಕೆ ಸಿನಿಮಾಗಳು ಸೋತಿರುವ ಉದಾಹರಣೆಯಿದೆ. ಮಲ್ಟಿಸ್ಟಾರರ್ ಸಿನಿಮಾ ಅಂದಾಗ ಎಲ್ಲಾ ಪಾತ್ರಗಳಿಗೆ ನ್ಯಾಯ ಒದಗಿಸಲು ಕೆಲವೊಮ್ಮೆ ಕಾಲಾವಧಿ ಹೆಚ್ಚಿಸಿಬಿಡುವ ತಪ್ಪನ್ನು ಕೆಲವರು ಮಾಡ್ತಾರೆ. ಆದರೆ ಕೊಂಚ ಸ್ಲೋ ಅನ್ನಿಸಿದ್ರು ಪ್ರೇಕ್ಷಕರು ಸಿನಿಮಾ ಲ್ಯಾಗ್ ಎಂದುಬಿಡುತ್ತಾರೆ. ಆದರೆ ಅರ್ಜುನ್ ಜನ್ಯಾ ಈ ವಿಚಾರದಲ್ಲಿ ರಿಸ್ಕ್ ತೆಗೆದುಕೊಂಡಿಲ್ಲ.

Shivarajkumar Upendra Raj B Shetty s film 45 Censor Certificate Theatrical Runtime and Plot Details

ಚಿಕ್ಕದಾಗಿ ಅಷ್ಟೇ ಪರಿಣಾಮಕಾರಿಯಾಗಿ '45' ಸಿನಿಮಾ ಕಥೆ ಹೇಳಿ ಮುಗಿಸಲು ತೀರ್ಮಾನಿಸಿದಂತಿದೆ. ಚಿತ್ರದ ಟೀಸರ್ ನೋಡಿದಾಗಲೇ '45' ಚಿತ್ರದ ಕಥೆ ಏನು ಎನ್ನುವ ಸುಳಿವು ಸಿಕ್ಕಿತ್ತು. ಕೊಲ್ಲಲು ನಿಂತ ರಾಯಪ್ಪ(ಉಪೇಂದ್ರ) ಹಾಗೂ ಕಾಯಲು ನಿಂತ ಶಿವಪ್ಪ(ಶಿವರಾಜ್‌ಕುಮಾರ್) ನಡುವಿನ ಪೈಪೋಟಿಯ ಕಥೆ ಚಿತ್ರದಲ್ಲಿದೆ. ಇಬ್ಬರ ನಡುವೆ ರಾಜ್. ಬಿ ಶೆಟ್ಟಿ ಪಾತ್ರ ನಿರ್ಣಾಯಕವಾಗಿ ಕಥೆಗೆ ತಿರುವು ಕೊಡಲಿದೆ.

ಕೌಸ್ತುಭ ಮಣಿ ಹಾಗೂ ಜಿಶು ಸೆಂಗುಪ್ತ ಚಿತ್ರದ ತಾರಾಗಣದಲ್ಲಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಕೆ. ಪ್ರಕಾಶ್ ಸಂಕಲನ '45' ಚಿತ್ರಕ್ಕಿದೆ. ಸ್ವತಃ ಅರ್ಜುನ್ ಜನ್ಯಾ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಅನಿಲ್‌ ಕುಮಾರ್ ಸಂಭಾಷಣೆ ಬರೆದಿದ್ದಾರೆ. 3 ವರ್ಷಗಳ ಹಿಂದೆ ಸಿನಿಮಾ ಆರಂಭವಾಗಿತ್ತು. ಕೊನೆಗೂ ಬಿಡುಗಡೆಗೆ ಸಜ್ಜಾಗಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.

5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ '45' ಸಿನಿಮಾ ಬಿಡುಗಡೆ ಆಗಲಿದೆ. ಶಿವಣ್ಣ ಹಾಗೂ ಉಪ್ಪಿ ಇಬ್ಬರಿಗೂ ಹೊರ ರಾಜ್ಯಗಳಲ್ಲಿ ಅಭಿಮಾನಿ ಬಳಗವಿದೆ. ಹಾಗಾಗಿ ಪರಭಾಷೆಗಳಲ್ಲಿ ಕೂಡ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗಲಿದೆ. ಈಗಾಗಲೇ ಹೈದರಾಬಾದ್ ಸೇರಿ ಹಲವು ಕಡೆಗಳಲ್ಲಿ ಸಿನಿಮಾ ಪ್ರಚಾರ ಆರಂಭಿಸಲಾಗಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಕೆಲಸಗಳು ನಡೀತಿದೆ.

More from Filmibeat

Read more about: upendra shivarajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X