ಬಹುನಿರೀಕ್ಷಿತ '45' ಸಿನಿಮಾ ಬಜೆಟ್ ಎಷ್ಟು? ಹೈದರಾಬಾದ್‌ನಲ್ಲಿ ಹೇಗಿದೆ ಗೊತ್ತಾ ಹವಾ?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್‌. ಬಿ ಶೆಟ್ಟಿ ನಟನೆಯ ಸಿನಿಮಾ '45' ಸಖತ್ ಕ್ರೇಜ್ ಹುಟ್ಟಾಕ್ಕಿದೆ. ಸಿನಿಮಾ ಬಿಡುಗಡೆಗೆ 20 ದಿನ ಬಾಕಿಯಿದೆ. ಈಗಾಗಲೇ ಚಿತ್ರದ 'ಆಫ್ರೋ ತಪಾಂಗ್' ಸಾಂಗ್ ಹಿಟ್ ಆಗಿ ಸಖತ್ ಸದ್ದು ಮಾಡ್ತಿದೆ. ಸಿನಿಮಾ ನೋಡಲೇಬೇಕು ಎಂದು ಸಿನಿರಸಿಕರು ಕಾಯುವಂತಾಗಿದೆ.

ಬುಕ್‌ಮೈಶೋನಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸಿನಿಮಾ ನೋಡಬೇಕು ಎಂದು ಆಸಕ್ತಿ ತೋರಿಸಿ ವೋಟ್ ಮಾಡಿದ್ದಾರೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಡಿಸೆಂಬರ್ 25ಕ್ಕೆ '45' ಸಿನಿಮಾ ಬಿಡುಗಡೆ ಆಗ್ತಿದೆ. ಬಹುಕೋಟಿ ವೆಚ್ಚದಲ್ಲಿ ರಮೇಶ್ ರೆಡ್ಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಸಿನಿಮಾ ಇದು. ಈಗಾಗಲೇ ಟೀಸರ್, ಪೋಸ್ಟರ್ ಹಾಗೂ ಪ್ರಮೋಷನ್ ಸಾಂಗ್ ಮೂಲಕ ಸಿನಿಮಾ ಗಮನ ಸೆಳೆದಿದೆ.

Shivarajkumar Upendra s Pan-India Film 45 Sets Massive Craze Ahead of December 25 Release

ಸ್ವತಃ ಅರ್ಜುನ್ ಜನ್ಯಾ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿತ್ರದ ಕಥೆ ಏನು ಎನ್ನುವ ಸುಳಿವು ಬಿಟ್ಟುಕೊಡದೇ ಚಿತ್ರತಂಡ ಕುತೂಹಲ ಮೂಡಿಸಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಡಿಸೆಂಬರ್ 25ಕ್ಕೆ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ತೆರೆಗೆ ಬರ್ತಿದೆ. ಶಿವಣ್ಣ, ಉಪ್ಪಿ ಹಾಗೂ ರಾಜ್ ಜೊತೆಗೆ ಕೌಸ್ತುಭ ಮಣಿ, ಜಿಶು ಸೆಂಗುಪ್ತ ಚಿತ್ರದ ತಾರಾಗಣದಲ್ಲಿದ್ದಾರೆ.

ಬರೋಬ್ಬರಿ 100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದೆ ಎನ್ನಲಾಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ '45' ಸಿನಿಮಾ ತೆರೆಗಪ್ಪಳಿಸಲಿದೆ. ಸತ್ಯಾ ಹೆಗ್ಡೆ ಛಾಯಾಗ್ರಹಣ, ಅನಿಲ್ ಕುಮಾರ್ ಸಂಭಾಷಣೆ ಚಿತ್ರಕ್ಕಿದೆ. ರವಿವರ್ಮ, ಜಾಲಿ ಬಾಸ್ಟಿಯನ್, ಡಿಫರೆಂಟ್ ಡ್ಯಾನಿ, ಮತ್ತು ಚೇತನ್ ಡಿ'ಸೋಜಾ ಚಿತ್ರದ ಆಕ್ಷನ್ ಸನ್ನಿವೇಶಗಳನ್ನು ಕಂಪೋಸ್ ಮಾಡಿದ್ದಾರೆ. ಹಾಡುಗಳಿಗೆ ಚಿನ್ನಿ ಪ್ರಕಾಶ್ ಮತ್ತು ಬಿ. ಧನಂಜಯ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ.

Shivarajkumar Upendra s Pan-India Film 45 Sets Massive Craze Ahead of December 25 Release

ಅರ್ಜುನ್ ಜನ್ಯಾ ತಮ್ಮ ಮೊದಲ ಪ್ರಯತ್ನದಲ್ಲೇ ವಿಭಿನ್ನ ಕಥೆ ಹೇಳಲು ಹೊರಟ್ಟಿದ್ದಾರೆ. ಅವರಿಗೆ ಶಿವಣ್ಣ, ಉಪೇಂದ್ರ ಹಾಗೂ ಶೆಟ್ರ ಸಾಥ್ ಸಿಕ್ಕಿದೆ. ಭರ್ಜರಿ ಚಿತ್ರೀಕರಣ ನಡೆಸಿ ಪೋಸ್ಟ್ ಪ್ರೊಡಕ್ಷನ್‌ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. 'ಆಫ್ರೋ ತಪಾಂಗ್' ಸಾಂಗ್ ಸಖತ್ ಸೌಂಡ್ ಮಾಡ್ತಿದೆ. ಬಿಡುಗಡೆಯಾದ ದಿನದಿಂದಲೂ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ. ಇತ್ತೀಚೆಗೆ ಬಂದ ಸಾಂಗ್ ಮೇಕಿಂಗ್ ವೀಡಿಯೋ ಕೂಡ ವೈರಲ್ ಆಗ್ತಿದೆ. ಇದೊಂದು ಹಾಡಿಗೆ ಸಿಕ್ಕಾಪಟ್ಟೆ ಹಣ ಸುರಿಯಲಾಗಿದೆ. ಸೋಶಿಯಲ್ ಮೀಡಿಯದಲ್ಲಿ ರೀಲ್ಸ್ ಆಗಿ ಸಾಂಗ್ ಹವಾ ಎಬ್ಬಿಸಿದೆ.

ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ '45' ಕೂಡ ಒಂದಾಗಿದೆ. ಬಹಳ ವರ್ಷಗಳ ಬಳಿಕ ಶಿವಣ್ಣ ಹಾಗೂ ಉಪೇಂದ್ರ ಎದಿರುಬದಿರಾಗಿದ್ದಾರೆ. ಇವರಿಬ್ಬರ ಪೈಪೋಟಿಯೇ ಬಹಳ ಕುತೂಹಲ ಮೂಡಿಸಿದೆ. ಇಬ್ಬರ ಪಾತ್ರ ಏನು? ಕಥೆ ಏನು? ಎಂದು ಪ್ರೇಕ್ಷಕರು ಊಹಿಸುವ ಪ್ರಯತ್ನ ಮಾಡುತ್ತಿದ್ದಾರೆ. ಟ್ರೈಲರ್ ಬಂದ ಬಳಿಕ ಒಂದು ಅಂದಾಜು ಸಿಗಬಹುದು. ಕಳೆದೊಂದು ವರ್ಷದಿಂದ ಉಪೇಂದ್ರ ಹಾಗೂ ಶಿವಣ್ಣ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಹಾಗಾಗಿ ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುವಂತಾಗಿದೆ.

ದೊಡ್ಡಮಟ್ಟದಲ್ಲಿ '45' ಸಿನಿಮಾ ಬಿಡುಗಡೆ ಪ್ಲ್ಯಾನ್ ನಡೀತಿದೆ. ಪರಭಾಷೆಗಳಲ್ಲಿ ಕೂಡ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಬೇರೆ ಭಾಷೆಗಳಲ್ಲಿ ಕೂಡ ಟೀಸರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಹೈದರಾಬಾದ್‌ ಮಾಲ್‌ಗಳಲ್ಲಿ ಬ್ಯಾನರ್‌ಗಳನ್ನು ಹಾಕಿ ಪ್ರಚಾರ ಆರಂಭಿಸಲಾಗಿದೆ. 'ಜೈಲರ್' ಚಿತ್ರದ ನರಸಿಂಹ ಪಾತ್ರದಿಂದ ಶಿವಣ್ಣನ ಕ್ರೇಜ್ ಬೇರೆ ಭಾಷೆಗಳಲ್ಲಿ ಶುರುವಾಗಿದೆ. ಉಪ್ಪಿ ಮ್ಯಾಜಿಕ್ ಹೇಳುವುದು ಬೇಕಿಲ್ಲ. ಇದೀಗ ಇಬ್ಬರೂ ಒಂದಾಗಿರುವುದು ಹೊರ ರಾಜ್ಯಗಳಲ್ಲಿ ಕೂಡ ಸಿನಿಮಾ ಮೇಲೆ ನಿರೀಕ್ಷೆ ಹುಟ್ಟಾಕ್ಕಿದೆ.

More from Filmibeat

Read more about: shivarajkumar upendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X