ಶೂಟಿಂಗ್ ಸೆಟ್‌ನಲ್ಲಿ ಫ್ಯಾನ್ಸ್ ಮೇಲೆ ಶಿವಣ್ಣ ಕೆಂಡಾಮಂಡಲ; ವೀಡಿಯೋ ವೈರಲ್
ನಟ ಶಿವರಾಜ್‌ಕುಮಾರ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಡುವಿಲ್ಲದೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ಕ್ಯಾನ್ಸರ್ ಸಮಸ್ಯೆಯಿಂದ ಬಳಲಿದ್ದ ಶಿವಣ್ಣ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದು ಬಂದಿದ್ದರು. ಬಳಿಕ ವಿಶ್ರಾಂತಿ ಪಡೆದು ಇದೀಗ ಎಂದಿನಂತೆ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸಭೆ, ಸಮಾರಂಭಗಳಲ್ಲಿ ಕೂಡ ಶಿವಣ್ಣ ಭಾಗಿ ಆಗುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುವುದು, ಕೈ ಕುಲುಕುವುದು, ಫೋಟೊ ಕ್ಲಿಕ್ಕಿಸಿಕೊಳ್ಳುವುದು ಮಾಡುತ್ತಾರೆ. ಕೆಲವೊಮ್ಮೆ ಅಭಿಮಾನಿಗಳ ಕಿರಿಕಿರಿ ಹೆಚ್ಚಾದಾಗ ಪ್ರೀತಿಯಿಂದ ಅವರ ಮೇಲೆ ಕೂಗಾಡುವುದು ಇದೆ. ಈ ಹಿಂದೆ ಕೂಡ ಕೆಲವೊಮ್ಮೆ ಶಿವಣ್ಣ ತಾಳ್ಮೆ ಕಳೆದುಕೊಂಡು ಗರಂ ಆಗಿ ಬಳಿಕ ಸೈಲೆಂಟ್ ಆಗಿರುವುದನ್ನು ನೋಡಿದ್ದೇವೆ.

ಇತ್ತೀಚೆಗೆ ಸಿನಿಮಾ ಸೆಟ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಶಿವಣ್ಣ ಕಾರ್ ಇಳಿಯುತ್ತಿದ್ದಂತೆ ಅಭಿಮಾನಿಗಳು ಫೋಟೊಗಾಗಿ ಪಟ್ಟು ಹಿಡಿದಿದ್ದಾರೆ. ಪ್ರೀತಿಯಿಂದಲೇ ಗದರುತ್ತಾ ಕಾರ್ ಇಳಿದ ಅವರು ಹೋಗಿ ಫೋಟೊಗೆ ಪೋಸ್ ಕೊಟ್ಟು ಬಂದಿದ್ದಾರೆ. ಆ ವೀಡಿಯೋ ವೈರಲ್ ಆಗುತ್ತಿದೆ. ಕೆಲವರು ಈ ಬಗ್ಗೆ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಆದರೆ ಅಭಿಮಾನಿಗಳು ಶಿವಣ್ಣನನ್ನ ಬೆಂಬಲಿಸುತ್ತಿದ್ದಾರೆ.
'ಭೈರತಿ ರಣಗಲ್' ಬಳಿಕ ಶಿವಣ್ಣ ಹೀರೊ ಆಗಿ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ವೀರಚಂದ್ರಹಾಸ ಹಾಗೂ 'ಫೈರ್‌ಪ್ಲೈ' ಚಿತ್ರಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆ ನಟಿಸಿರುವ '45' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸದ್ಯ 'ಉತ್ತರಕಾಂಡ', 'ಪೆದ್ದಿ', 'ಜೈಲರ್-2', '666 ಆಪರೇಷನ್ ಡ್ರೀಮ್ ಥಿಯೇಟರ್', 'ಡ್ಯಾಡ್', 'A ಫಾರ್ ಆನಂದ್' ಸಿನಿಮಾಗಳಲ್ಲಿ ಶಿವಣ್ಣ ನಟಿಸುತ್ತಿದ್ದಾರೆ.
ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಶಿವರಾಜ್‌ಕುಮಾರ್ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ನಿರ್ಮಾಪಕ, ನಿರ್ದೇಶಕರ ಡಾರ್ಲಿಂಗ್ ಎನಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ಇತ್ತೀಚೆಗೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 'ವೇದ' ಹಾಗೂ 'ಭೈರತಿ ರಣಗಲ್' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಈಗಾಗಲೇ 125ಕ್ಕೂ ಅಧಿಕ ಸಿನಿಮಾಗಳಲ್ಲಿ ಶಿವಣ್ಣ ನಟಿಸಿ ಗೆದ್ದಿದ್ದಾರೆ.
ಇವತ್ತಿಗೂ ಬಹುಬೇಡಿಕೆಯ ನಟನಾಗಿ ಶಿವರಾಜ್‌ಕುಮಾರ್ ಗುರ್ತಿಸಿಕೊಂಡಿದ್ದಾರೆ. ವಯ್ಸು 60 ದಾಟಿದ್ರು ಅವರ ಎನರ್ಜಿ ಸಿಂಪ್ಲಿ ಸೂಪರ್. ಪರಭಾಷೆ ಫಿಲ್ಮ್ ಮೇಕರ್ಸ್ ಕೂಡ ಬಂದು ಕಥೆ ಹೇಳುತ್ತಿದ್ದಾರೆ. ಈಗಾಗಲೇ ತಮಿಳಿನ 'ಜೈಲರ್' ಹಾಗೂ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾಗಳಲ್ಲಿ ಶಿವಣ್ಣ ನಟಿಸಿ ಗೆದ್ದಿದ್ದಾರೆ. ಇದೀಗ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಈ ಹಿಂದೆ ತೆಲುಗಿನ 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಹಾಡೊಂದರಲ್ಲಿ ಶಿವಣ್ಣ ಹೆಜ್ಜೆ ಹಾಕಿದ್ದರು. ಇದೀಗ ರಾಮ್‌ಚರಣ್ ಜೊತೆ 'ಪೆದ್ದಿ' ಚಿತ್ರ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮುಂದಿನ ವರ್ಷ ಮಾರ್ಚ್ 28ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ಬುಚ್ಚಿಬಾಬು ನಿರ್ದೇಶನದ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ.
ಪವನ್ ಒಡೆಯರ್ ನಿರ್ದೇಶನದ 'ಬೇಲ್' ಎಂಬ ಚಿತ್ರದಲ್ಲಿ ಕೂಡ ಶಿವಣ್ಣ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ಸಮಾರಂಭ ನಡೀತು. ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟ ಹರೀಶ್ ರಾಯ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರಿಗೆ ಶಿವಣ್ಣ ಸಹಾಯ ಮಾಡಿರುವುದಾಗಿ ಹೇಳಲಾಗ್ತಿದೆ.


Click it and Unblock the Notifications











