Don't Miss!
- News
Kamal Haasan: ಕಾಂಗ್ರೆಸ್ನಿಂದ ಕಣಕ್ಕಿಳಿಯಲಿದ್ದಾರಾ ಕಮಲ್ ಹಾಸನ್? ಅವರ ಮಾತು ಇಲ್ಲಿದೆ
- Sports
U-19 Women's World Cup 2023: ಸೆಮಿಫೈನಲ್ ಪ್ರವೇಶಿಸಿದ ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ
- Lifestyle
Horoscope Today 26 Jan 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮದುವೆಗೂ ಮುನ್ನ ಶಿವಣ್ಣನ ಈ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬಂದಿದ್ರು ಅಪ್ಪು - ಅಶ್ವಿನಿ
ನಟ ಪುನೀತ್ ರಾಜ್ಕುಮಾರ್ ತಮ್ಮ ಅಪಾರವಾದ ಅಭಿಮಾನಿ ಬಳಗ ಹಾಗೂ ಕುಟುಂಬಸ್ಥರನ್ನು ಅಗಲಿ ವರ್ಷ ಕಳೆದಿದ್ದರೂ ಸಹ ಇನ್ನೂ ಅವರ ನೆನಪು ಮಾತ್ರ ಮಾಸಿಲ್ಲ. ಪ್ರತಿದಿನ ಅಪ್ಪು ಅವರನ್ನು ಹಳೆಯ ಫೋಟೊ ಹಾಗೂ ವಿಡಿಯೊ ಮೂಲಕ ನೆನೆಯುವ ಕನ್ನಡ ಸಿನಿ ರಸಿಕರು ಹಾಗೂ ಅಪ್ಪು ಅಭಿಮಾನಿಗಳು ಇಂದು ( ಡಿಸೆಂಬರ್ 1 ) ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ವಿವಾಹ ವಾರ್ಷಿಕೋತ್ಸವದ ಪೋಸ್ಟ್ಗಳನ್ನು ಹಂಚಿಕೊಂಡು ಮತ್ತೊಮ್ಮೊ ಅಪ್ಪು ಅವರನ್ನು ನೆನೆದಿದ್ದಾರೆ ಹಾಗೂ ಇದೇ ವೇಳೆ ಅಪ್ಪು ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ನಡುವಿನ ಪ್ರೀತಿ ಕಥೆಯನ್ನು ಮೆಲುಕು ಹಾಕಿದ್ದಾರೆ.
ಹೌದು, ಪುನೀತ್ ರಾಜ್ಕುಮಾರ್ ಅಶ್ವಿನಿ ಅವರನ್ನು ಪ್ರೀತಿಸಿ ಇಬ್ಬರೂ ಮನೆಯವರು ಸಂಪೂರ್ಣವಾಗಿ ಒಪ್ಪಿದ ನಂತರವಷ್ಟೇ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದರು. ಪುನೀತ್ ರಾಜ್ಕುಮಾರ್ 'ಪವರ್ ಸ್ಟಾರ್' ಆಗುವ ಮುನ್ನವೇ ಅಶ್ವಿನಿ ರೇವನಾಥ್ ಅಶ್ವಿನಿ ಪುನೀತ್ ಅವರು ರಾಜ್ಕುಮಾರ್ ಆಗಿದ್ದರು.
ಹೀಗೆ ಅಪ್ಪು ನಾಯಕ ನಟನಾಗಿ ಯಶಸ್ಸಿನ ಉತ್ತುಂಗ ಏರುವ ಮುನ್ನವೇ ಪುನೀತ್ ಧರ್ಮಪತ್ನಿ ಆಗಿದ್ದ ಅಶ್ವಿನಿ ಪುನೀತ್ ಅವರಿಗೆ ಹೇಗೆ ಪರಿಚಯವಾದರು ಹಾಗೂ ಇಬ್ಬರಲ್ಲಿ ಯಾರು ಮೊದಲು ಪ್ರೇಮ ನಿವೇದನೆ ಮಾಡಿದ್ರು ಹಾಗೂ ಇಬ್ಬರ ಪ್ರೀತಿಯ ವಿಷಯವನ್ನು ಡಾ ರಾಜ್ಕುಮಾರ್ ಅವರ ಬಳಿ ಹೇಳಿ ಒಪ್ಪಿಸಿದ್ಯಾರು ಎಂಬ ವಿಷಯಗಳನ್ನು ಸ್ವತಃ ಪುನೀತ್ ಹಾಗೂ ಪುನೀತ್ ಆಪ್ತ ವಲಯ ಹಲವಾರು ಸಂದರ್ಶನಗಳಲ್ಲಿ ತಿಳಿಸಿತ್ತು.

ಸ್ನೇಹಿತನ ಮೂಲಕ ಅಶ್ವಿನಿ ಪರಿಚಯ
ಪುನೀತ್ ರಾಜ್ಕುಮಾರ್ ಅವರಿಗೆ ಅವರ ಸ್ನೇಹಿತರೋರ್ವರ ಮೂಲಕ ಅಶ್ವಿನಿ ಅವರ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಸರಿಸುಮಾರು ಎಂಟು ತಿಂಗಳುಗಳ ಕಾಲ ಪುನೀತ್ ಹಾಗೂ ಅಶ್ವಿನಿ ಪರಸ್ಪರ ಮಾತನಾಡುತ್ತಾ, ಆಗಾಗ ಭೇಟಿಯಾಗುತ್ತಾ ಇದ್ರು. ಈ ಸಮಯದಲ್ಲಿ ಈಕೆಯೇ ತನ್ನ ಬಾಳಸಂಗಾತಿಯಾಗಬೇಕೆಂದು ಬಯಸಿದ ಅಪ್ಪು ಅಶ್ವಿನಿ ಅವರಿಗೆ ನಿಮ್ಮನ್ನು ಪ್ರೀತಿಸುತ್ತಿದ್ದೇನೆ, ನಿಮಗೂ ನನ್ನ ಮೇಲೆ ಪ್ರೀತಿ ಇದ್ದರೆ ಮದುವೆಯಾಗೋಣ ಎಂದು ಹೇಳಿಕೊಂಡಿದ್ದರಂತೆ. ಅಪ್ಪು ಈ ರೀತಿ ಹೇಳಿದ ಮರುಕ್ಷಣವೇ ಅಶ್ವಿನಿ ಒಪ್ಪಿಕೊಂಡಿದ್ದರು ಎಂಬುದನ್ನು ಸ್ವತಃ ಪುನೀತ್ ಹಲವಾರು ಸಂದರ್ಶನಗಳಲ್ಲಿ ಬಿಚ್ಚಿಟ್ಟಿದ್ದರು.

ಅಪ್ಪು ಪ್ರೀತಿ ವಿಚಾರವನ್ನು ಅಣ್ಣಾವ್ರ ಬಳಿ ಹೇಳಿದ್ಯಾರು?
ಇನ್ನು ಪುನೀತ್ ರಾಜ್ಕುಮಾರ್ ಅಶ್ವಿನಿ ಅವರನ್ನು ಪ್ರೀತಿಸುತ್ತಿದ್ದ ವಿಚಾರವನ್ನು ಪಾರ್ವತಮ್ಮ ರಾಜ್ಕುಮಾರ್ ಅವರ ಬಳಿ ಹೇಳಿಕೊಂಡಿದ್ದರು ಹಾಗೂ ಈ ಶಿವಣ್ಣನ ಬಳಿ ಕೂಡ ತಿಳಿಸಿದ್ದರು. ಆದರೆ ತಂದೆ ರಾಜ್ಕುಮಾರ್ ಬಳಿ ಹೇಳುವ ಧೈರ್ಯವನ್ನು ಅಪ್ಪು ಮಾಡಿರಲಿಲ್ಲ. ಹೀಗಾಗಿ ಅಮ್ಮನ ಬಳಿ ಪ್ರೀತಿ ವಿಚಾರವನ್ನು ಅಪ್ಪನಿಗೆ ತಿಳಿಸುವಂತೆ ಅಪ್ಪು ಕೇಳಿಕೊಂಡಿದ್ದರು. ಆದರೆ ಕೊನೆಗೆ ಈ ವಿಚಾರವನ್ನು ಅಣ್ಣಾವ್ರಿಗೆ ತಿಳಿಸಿದ್ದು ಅಪ್ಪು ದೊಡ್ಡಣ್ಣ ಶಿವರಾಜ್ಕುಮಾರ್. "ಅಮ್ಮ ಈ ವಿಚಾರವನ್ನು ನಾನು ಹೇಳುವುದಿಲ್ಲ, ನೀನೇ ಹೇಳು ಎಂದು ಅಮ್ಮ ನನ್ನ ಬಳಿ ಹೇಳಿದ್ದರು, ನಾನೇ ಅಪ್ಪಾಜಿ ಬಳಿ ಈ ವಿಚಾರವನ್ನು ಪ್ರಸ್ತಾಪಿಸಿದೆ ಮತ್ತು ಇದಕ್ಕೆ ಅಪ್ಪಾಜಿ ಯಾವುದೇ ವಿರೋಧ ವ್ಯಕ್ತಪಡಿಸದೇ ಮುಗುಳ್ನಗೆಯಿಂದ ಒಪ್ಪಿಕೊಂಡರು. ನನ್ನ ಬಳಿಯೇ ನೇರವಾಗಿ ಹೇಳಬಹುದಿತ್ತಲ್ಲ ಅಪ್ಪು ಎಂದು ಇಬ್ಬರನ್ನೂ ಅಪ್ಪಿಕೊಂಡಿದ್ದರು" ಎಂದು ಶಿವರಾಜ್ಕುಮಾರ್ ತಿಳಿಸಿದ್ದರು.

ಕಾವೇರಿ ಥಿಯೇಟರ್ನಲ್ಲಿ ಶಿವಣ್ಣನ ಚಿತ್ರ ನೋಡಲು ಅಶ್ವಿನಿ ಜೊತೆ ಬಂದಿದ್ರು ಅಪ್ಪು
"ನನ್ನ 'ಎಕೆ 47' ಚಿತ್ರ ಬಿಡುಗಡೆಗೊಂಡಿದ್ದಾಗ ಅಪ್ಪು ಅಶ್ವಿನಿ ಅವರನ್ನು ಜತೆಗೇ ಕರೆದುಕೊಂಡು ಕಾವೇರಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದ್ದ. ಆ ಸಮಯದಲ್ಲೇ ನನ್ನ ತಮ್ಮ ಪ್ರೀತಿ ಮಾಡ್ತಿದ್ದಾನೆ ಎಂಬ ವಿಚಾರ ನನಗೆ ಗೊತ್ತಿತ್ತು" ಎಂದೂ ಸಹ ಶಿವಣ್ಣ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೇ ವಜ್ರೇಶ್ವರಿ ಕಂಬೈನ್ಸ್ ಕಛೇರಿಗೆ ಹಾಗೂ ಚಿತ್ರೀಕರಣದ ಸ್ಥಳಗಳಿಗೆ ಪುನೀತ್ ಅಶ್ವಿನಿ ಅವರನ್ನು ಮದುವೆಗೂ ಮುನ್ನ ಕರೆದುಕೊಂಡು ಹೋಗುತ್ತಿದ್ದರು ಹಾಗೂ ಈಕೆ ನಾನು ಮದುವೆಯಾಗುವ ಹುಡುಗಿ ಎಂದು ಹಲವರ ಬಳಿ ಹೇಳುತ್ತಿದ್ದರು ಎಂಬ ವಿಚಾರವನ್ನು ನಿರ್ದೇಶಕ ಭಗವಾನ್ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದರು.