14 ವರ್ಷದ ನಂತರ ಹೊಸ ಅವತಾರದಲ್ಲಿ ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಸಿನಿಮಾರಂಗ ಹಾಗೂ ಕನ್ನಡ ಸಿನಿ ಪ್ರೇಮಿಗಳ ಹಾಟ್ ಫೇವರೆಟ್ ಹೀರೋ. ವಯಸ್ಸು 55 ಆದರೂ ಕೂಡ ಶಿವಣ್ಣನ ಎನರ್ಜಿ ಮಾತ್ರ ಇನ್ನು ಕಡಿಮೆ ಆಗಿಲ್ಲ. ಆದ್ದರಿಂದಲೇ ಯುವ ನಿರ್ದೇಶಕರಿಂದ ಹಿಡಿದು, ಹಿರಿಯ ಡೈರೆಕ್ಟರ್ ಗಳು ಕೂಡ ಶಿವರಾಜ್ ಕುಮಾರ್ ಅವರಿಗೆ ಚಿತ್ರ ನಿರ್ದೇಶನ ಮಾಡಲು ಕಾತುರರಾಗಿರುತ್ತಾರೆ.
ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಕಾಲಿವುಡ್, ಟಾಲಿವುಡ್, ಹಾಗೂ ಬಾಲಿವುಡ್ ಚಿತ್ರರಂಗದಲ್ಲಿಯೂ ಹೆಸರು ಮಾಡಿರು ಸಾಹಸ ನಿರ್ದೇಶಕ ರವಿವರ್ಮ ಶಿವರಾಜ್ ಕುಮಾರ್ ಅವರ ಸಿನಿಮಾ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರಕ್ಕೆ 'ರುಸ್ತುಂ' ಎಂದು ಟೈಟಲ್ ಫಿಕ್ಸ್ ಮಾಡಿದ್ದು ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹದಿನಾಲ್ಕು ವರ್ಷದ ನಂತರ ಶಿವರಾಜ್ ಕುಮಾರ್ ಮತ್ತೆ ಹಳೆ ಗೆಟಪ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹಾಗಾದರೆ ಶಿವಣ್ಣನ ಹೊಸ ಲುಕ್ ಯಾವುದು. 'ರುಸ್ತುಂ' ಅಡ್ಡದಲ್ಲಿ ಏನು ನಡೆಯುತ್ತಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಹೊಸ ಗೆಟಪ್ ನಲ್ಲಿ ಶಿವಣ್ಣ
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸಾಹಸ ನಿರ್ದೇಶಕ ರವಿವರ್ಮ ಆಕ್ಷನ್ ಕಟ್ ಹೇಳುತ್ತಿರುವ 'ರುಸ್ತುಂ' ಚಿತ್ರದಲ್ಲಿ ಶಿವಣ್ಣ ಪಾತ್ರಕ್ಕೆ ಮೀಸೆ ಇರಲಿದೆಯಂತೆ. 'ಸಾರ್ವಭೌಮ' ಚಿತ್ರದ ನಂತರ ಶಿವರಾಜ್ ಕುಮಾರ್ ಮತ್ತೆ ಮೀಸೆ ಹೊತ್ತು ನಟಿಸಲಿದ್ದಾರೆ.

ಖಡಕ್ ಅಧಿಕಾರಿಯಾಗಿ ಶಿವರಾಜ್ ಕುಮಾರ್
ಟಗರು ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದ ಶಿವರಾಜ್ ಕುಮಾರ್ 'ರುಸ್ತುಂ' ಚಿತ್ರದಲ್ಲಿಯೂ ಖಾಕಿ ಹಾಕಿ ಖದರ್ ತೋರಿಸಲಿದ್ದಾರಂತೆ. ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿರುವ ರವಿವರ್ಮಾ ಚಿತ್ರದ ಮೂಲಕ ಅಭಿಮಾನಿಗಳಿಗೆ ಸಾಕಷ್ಟು ವಿಶೇಷವನ್ನು ನೀಡಲಿದ್ದಾರಂತೆ.

ಫೋಟೋ ಶೂಟ್ ಮುಗಿಸಿದ ರುಸ್ತುಂ
'ರುಸ್ತುಂ' ಚಿತ್ರಕ್ಕಾಗಿ ಮಿನರ್ವಾ ಮಿಲ್ ನಲ್ಲಿ ಅದ್ಧೂರಿಯಾಗಿ ಸೆಟ್ ಹಾಕಲಾಗಿತ್ತಂತೆ. ಹತ್ತು ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸೆಟ್ ನಲ್ಲಿ ಶಿವಣ್ಣನ ಹೊಸ ಲುಕ್ ಸೆರೆಹಿಡಿಯಲಾಗಿದೆ.

ಮಹೇಂದ್ರ ಸಿಂಹ ಕ್ಯಾಮೆರಾ ಕಣ್ಣಲ್ಲಿ 'ರುಸ್ತುಂ'
ಟಗರು ಸಿನಿಮಾದಲ್ಲಿ ಕ್ಯಾಮೆರಾ ಮ್ಯಾನ್ ಆಗಿ ಕೆಲಸ ಮಾಡಿದ್ದ ಮಹೇಂದ್ರ ಸಿಂಹ 'ರುಸ್ತುಂ' ಚಿತ್ರದ ಫೋಟೋ ಶೂಟ್ ಮಾಡಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ನಟಿ ಮಯೂರಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಣ್ಣಾವ್ರ ಹುಟ್ಟುಹಬ್ಬದಂದು ಮಹೂರ್ತ
ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂತು ರುಸ್ತುಂ ಸಿನಿಮಾ ಮಹೂರ್ತ ನಡೆಯಲಿದೆ. ಸಾಕಷ್ಟು ದಿನಗಳಿಂದ ಶಿವಣ್ಣನ ಚಿತ್ರವನ್ನ ಡೈರೆಕ್ಟ್ ಮಾಡಲು ಕಾದಿದ್ದ ನಿರ್ದೇಶಕರು 'ರುಸ್ತುಂ' ಚಿತ್ರದ ಮೂಲಕ ಅಭಿಮಾನಿಗಳಿಗೆ ಒಂದು ಒಳ್ಳೆ ಸಿನಿಮಾವನ್ನ ನೀಡಲಿದ್ದಾರೆ.


Click it and Unblock the Notifications











