Shivarajkumar : 'ಐ ಲವ್ ಯೂ, ಯೂ ಮಸ್ಟ್ ಲವ್ ಮಿ' ಕೆಜಿಎಫ್ ಅಡ್ಡಾದಲ್ಲಿ ಓಂ ಡೈಲಾಗ್ ಬಿಟ್ಟ ಶಿವಣ್ಣ

ಬಹು ನಿರೀಕ್ಷಿತ 'ಕೆಜಿಎಫ್ ಚಾಪ್ಟರ್ 2' ಟ್ರೈಲರ್ ಇಂದು (ಮಾರ್ಚ್27) ರಿಲೀಸ್ ಆಗಿದೆ. ಚಿತ್ರತಂಡ ಹೇಳಿಕೊಂಡಂತೆ ಸರಿಯಾಗಿ 6.40ಕ್ಕೆ ರಿಲೀಸ್ ಆಗಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ರಿಲೀಸ್ ಮಾಡಿದ್ದಾರೆ. "ಐ ಲವ್ ಯೂ, ಯೂ ಮಸ್ಟ್ ಲವ್ ಮಿ ಹಾಡನ್ನು ಹಾಡುತ್ತಾ ವಿಭಿನ್ನವಾಗಿ ಟ್ರೈಲರ್ ಲಾಂಚ್‌ಗೆ ಶಿವರಾಜ್‌ ಕುಮಾರ್ ಚಾಲನೆ ನೀಡಿದ್ದಾರೆ.

ಶಿವರಾಜ್‌ಕುಮಾರ್ ಚಾಲನೆ ನೀಡಿದ ಬಳಿಕ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಟ್ರೈಲರ್ ಪ್ರದರ್ಶನ ಕಂಡಿದೆ. ಟ್ರೈಲರ್ ವೀಕ್ಷಿಸಿದ ಬಳಿಕ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

Recommended Video

KGF 2 | Shivarajkumar | ಎಲ್ಲರು KGF 2 ನ ಲವ್ ಮಾಡ್ಲೇ ಬೇಕು | Yash | Sanjay Dutt | Raveena Tandon

'ಕೆಜಿಎಫ್ ಚಾಪ್ಟರ್ 2' ನಲ್ಲಿ ಯಶ್ ಹೇಳುವ ಡೈಲಾಗ್‌ನಿಂದ ಮಾತು ಆರಂಭ ಆಗಿತ್ತು. ಆದರೆ ಅದಕ್ಕಿಂತಲೂ ಮುನ್ನ "ಐ ಲವ್ ಯೂ, ಯೂ ಮಸ್ಟ್ ಲವ್ ಮಿ" ಅಂತ ಅವರದ್ದೇ ಸಿನಿಮಾ 'ಓಂ' ಡೈಲಾಗ್ ಹೇಳುವ ಮೂಲಕ ಆರಂಭಿಸಿದ್ದರು. "ಐ ಹೇಟ್ ವೈಲೆನ್ಸ್, ಬಟ್ ವೈಲೆನ್ಸ್ ಲೈಕ್ಸ್ ಮಿ, ಸೋ ಐ ಕಾಂಟ್ ಅವಾಯ್ಡ್ ಇಟ್" ಎಂದು ಹೇಳುವ ಡೈಲಾಗ್ ಅನ್ನು ಹೇಳುತ್ತಾ ಮಾತನಾಡಲು ಆರಂಭಿಸುವ ಶಿವಣ್ಣ "ಟ್ರೈಲರ್ ತುಂಬಾ ಅದ್ಭುತವಾಗಿ ಬಂದಿದೆ. ಪ್ರಶಾಂತ್ ನೀಲ್, ಯಶ್, ನಿಮ್ಮ ಕೆಲಸಕೆ ತುಂಬ ಅದ್ಭುತವಾಗಿ ಮೂಡಿ ಬಂದಿದೆ. ಯಶ್ ನನಗೆ ಮೊದಲಿನಿಂದಲೂ ಆತ್ಮೀಯ. ಅವನು ತುಂಬ ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಳ್ತಾನೆ" ಎಂದಿದ್ದಾರೆ.

Shivarajkumar wishes for Kgf 2 team and Yash

ಮಾತು ಮುಂದುವರೆಸಿ "ರಾಧಿಕಾ ಪಂಡಿತ್ ಯಶ್ ಬದುಕಲಿ ಬಂದ ನಂತರ ಅವನ ಲಕ್ ಮತ್ತಷ್ಟು ಹೆಚ್ಚಾಗಿದೆ. ರಾಧಿಕಾ ಯಶ್ ತುಂಬಾ ಕ್ಯೂಟ್ ಕಪ್ಪಲ್ ಗಳು. ನಮ್ಮ ಕುಟುಂಬ ಮತ್ತು ಯಶ್ ಕುಟುಂಬ ತುಂಬಾ ಆತ್ಮೀಯವಾಗಿ ಇದ್ದೇವೆ. ಹೆಚ್ಚೇನು ಹೇಳಲ್ಲಾ ಇಡೀ 'ಕೆಜಿಎಫ್ ಚಾಪ್ಟರ್ 2' ತಂಡಕ್ಕೆ ನನ್ನ ಶುಭಾಶಯಗಳು" ಎಂದು ಹೇಳಿ ಶಿವಣ್ಣ ತನ್ನ ಮಾತು ಮುಗಿಸಿದ್ದಾರೆ.

More from Filmibeat

English summary
Shivarajkumar wishes for Kgf 2 team ofter relesing KGF 2 Trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X