ತಮನ್ನಾ 'ಕಾವಾಲಯ್ಯ' ಟ್ರೆಂಡ್‌ಗೆ ಟಾಂಗ್: 'ಘೋಸ್ಟ್' ವಿಸ್ಕಿಪುರಿ ವಿಡಿಯೋ ಬಿಟ್ಟ ಕನ್ನಡಿಗ

ಸೋಶಿಯಲ್ ಮೀಡಿಯಾ ಪುಣ್ಯದಿಂದ ಜನರಿಗೆ ಇತ್ತೀಚೆಗೆ ಹೆಚ್ಚು ಹೆಚ್ಚು ಮನರಂಜನೆ ಸಿಗುತ್ತಿದೆ. ಯಾವುದೋ ಸಿನಿಮಾ ಸಾಂಗ್, ಡೈಲಾಗ್ ಹಿಟ್ ಆದ್ರೆ, ಡಬ್‌ಸ್ಮ್ಯಾಶ್, ಇನ್‌ಸ್ಟಾ ರೀಲ್ಸ್ ಅಂತೆಲ್ಲಾ ಭಾರೀ ಟ್ರೆಂಡ್ ನಡೆಯುತ್ತದೆ. ಕೆಲವೊಮ್ಮೆ ತಮಾಷೆಯಾಗಿಯೂ ಇಂತಹ ರೀಲ್ಸ್‌, ಮೀಮ್ಸ್ ಹಾವಳಿ ಶುರುವಾಗುತ್ತದೆ. ಸದ್ಯ ಟ್ರೆಂಡ್‌ನಲ್ಲಿರೋದು 'ಜೈಲರ್' ಚಿತ್ರಕ್ಕಾಗಿ ತಮನ್ನಾ ಹೆಜ್ಜೆಹಾಕಿರೋ 'ಕಾವಾಲಯ್ಯ' ಸಾಂಗ್ ರೀಲ್ಸ್.

ಹೌದು ಇತ್ತೀಚೆಗೆ ಬಿಡುಗಡೆಯಾದ ಈ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಅನಿರುದ್ಧ್ ಮ್ಯೂಸಿಕ್, ಶಿಲ್ಪಾ ರಾವ್ ವಾಯ್ಸ್‌ನಲ್ಲಿ ಸಾಂಗ್ ಕೇಳುಗರಿಗೆ ಇಷ್ಟವಾಗುತ್ತಿದೆ. ಇನ್ನು ತಮನ್ನಾ ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಬಿಂದಾಸ್ ಆಗಿ ಕುಣಿದು ಮಿಲ್ಕಿ ಬ್ಯೂಟಿ ರಂಗೇರಿಸಿದ್ದಾರೆ. ಚಿಕ್ಕ ಮಕ್ಕಳಿಂದ ವಯಸ್ಸಾದ ಅಜ್ಜಿಯರವರೆಗೂ 'ಕಾವಾಲಯ್ಯ' ಹುಕ್‌ ಸ್ಟೆಪ್ ಟ್ರೈ ಮಾಡಿ ವಿಡಿಯೋಗಳನ್ನು ತೇಲಿ ಬಿಡುತ್ತಿದ್ದಾರೆ.

Shivarajkumars fan Ghost trend instead of kaavala song Reels goes viral

ಸದ್ಯ ಸೋಶಿಯಲ್ ಮೀಡಿಯಾ ತುಂಬೆಲ್ಲಾ 'ಕಾವಾಲಯ್ಯ' ರೀಲ್ಸ್ ತುಂಬಿ ತುಳುಕುತ್ತಿದೆ. ಫೇಸ್ಬುಕ್, ಇನ್‌ಸ್ಟಾ, ವಾಟ್ಸಪ್‌ ಸ್ಟೇಟಸ್‌ನಲ್ಲೂ ಇದೇ ಈಗ ಟ್ರೆಂಡಿಂಗ್‌ನಲ್ಲಿದೆ. ಸದ್ಯ ಶಿವಣ್ಣನ ಅಭಿಮಾನಿಯೊಬ್ಬರು ಇದಕ್ಕೆ ಟಾಂಗ್ ಕೊಟ್ಟು 'ಘೋಸ್ಟ್' ಚಿತ್ರದ ಟೀಸರ್‌ ಝಲಕ್ ರೀಲ್ಸ್ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋವನ್ನು ಚಿತ್ರದ ನಿರ್ದೇಶಕ ಶ್ರೀನಿ ಕೂಡ ಹಂಚಿಕೊಂಡಿದ್ದಾರೆ.

'ಘೋಸ್ಟ್' ಟೀಸರ್ ಹವಾ

ಶಿವಣ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ಬಾರಿ 'ಘೋಸ್ಟ್' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಶ್ರೀನಿ ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣ ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಶಿವಣ್ಣನ ಲುಕ್‌, ಸ್ಟೈಲ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಟೀಸರ್‌ನಲ್ಲಿ 'ಘೋಸ್ಟ್' ಶಿವಣ್ಣ ಪಾನಿಪುರಿಯನ್ನು ವಿಕ್ಸಿಯಲ್ಲಿ ಅದ್ದಿ ಬಾಯಿಗಿಟ್ಟುಕೊಳ್ಳುವ ಸನ್ನಿವೇಶ ಇದೆ. ಇದು ಎಲ್ಲರ ಗಮನ ಸೆಳೆದಿದೆ. ಟೀಸರ್ ಲಕ್ಷ ಲಕ್ಷ ವೀವ್ಸ್ ಸಾಧಿಸಿ ಸದ್ದು ಮಾಡ್ತಿದೆ.

Shivarajkumars fan Ghost trend instead of kaavala song Reels goes viral

'ಕಾವಾಲಯ್ಯ' ಟ್ರೆಂಡ್‌ಗೆ ಟಾಂಗ್

ವಿಡಿಯೋ ಕ್ರಿಯೇಟರ್ ತೇಜಸ್ ಗೌಡ ಎಂಬುವವರು ಇದೀಗ 'ಘೋಸ್ಟ್' ಸಿನಿಮಾ ಟೀಸರ್ ರೀಲ್ಸ್ ಮಾಡಿದ್ದಾರೆ. ಆದರೆ 'ಕಾವಾಲಯ್ಯ' ಟ್ರೆಂಡ್‌ಗೆ ತಮಾಷೆಯಾಗಿ ಟಾಂಗ್ ಕೊಟ್ಟಿದ್ದಾರೆ. ಮೊದಲಿಗೆ ಹುಡುಗಿಯರು ಟ್ರೆಂಡ್ ಹೇಗೆ ಫಾಲೋ ಮಾಡ್ತಾರೆ ಗೊತ್ತಾ ಎಂದು ಹೇಳಿ ಹುಡುಗಿ ವೇಷದಲ್ಲಿ ತಮನ್ನಾ ರೀತಿ ಹೆಜ್ಜೆ ಹಾಕಿದ್ದಾರೆ. ಆದರೆ ಲೆಜೆಂಡ್ಸ್ ಹೇಗೆ ಟ್ರೆಂಡ್ ಮಾಡ್ತಾರೆ ಗೊತ್ತಾ ಎಂದು ಹೇಳಿ ತಮ್ಮದೇ ಸ್ಟೈಲ್‌ನಲ್ಲಿ 'ಘೋಸ್ಟ್' ಟೀಸರ್‌ನಲ್ಲಿರುವ ವಿಸ್ಕಿಪುರಿ ಸೀನ್ ರೀ ಕ್ರಿಯೇಟ್ ಮಾಡಿದ್ದಾರೆ. ಈ ವಿಡಿಯೋ ಸಖತ್ ಮಜವಾಗಿದೆ.

'ಜೈಲರ್' ಚಿತ್ರದಲ್ಲಿ ಶಿವಣ್ಣ

ನೆಲ್ಸನ್ ನಿರ್ದೇಶನದ 'ಜೈಲರ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟು ಹಾಕಿದೆ. ರಜನಿಕಾಂತ್, ತಮನ್ನಾ, ರಮ್ಯಾ ಕೃಷ್ಣ, ಮೋಹನ್ ಲಾಲ್, ಜಾಕಿಶ್ರಾಫ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಶಿವಣ್ಣನ ಚೊಚ್ಚಲ ತಮಿಳು ಸಿನಿಮಾ. ಇನ್ನು ಇದರ ಬೆನ್ನಲ್ಲೇ ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲೂ ಸೆಂಚುರಿ ಸ್ಟಾರ್ ಮಿಂಚಿದ್ದಾರೆ. ಆಗಸ್ಟ್ 10ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.

ದಸರಾಗೆ 'ಘೋಸ್ಟ್' ಶಿವಣ್ಣ ಎಂಟ್ರಿ

ಶ್ರೀನಿ ನಿರ್ದೇಶನದ 'ಘೋಸ್ಟ್' ಸಿನಿಮಾ ಈ ವರ್ಷ ದಸರಾ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಬಹುತೇಕ ಸೆಟ್‌ಗಳಲ್ಲೇ ಸಿನಿಮಾ ಚಿತ್ರೀಕರಣ ನಡೆದಿದೆ. ಬಾಲಿವುಡ್ ನಟ ಅನುಪಮ್ ಖೇರ್, ಮಲಯಾಳಂನ ಜಯರಾಂ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಟೈಟಲ್‌ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

More from Filmibeat

English summary
Shivarajkumar's fan Ghost trend instead of kaavala song Reels goes viral. Recently Ghost teaser released on the occasion of Shivanna Birthday. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X