Ghost: ಶಿವಣ್ಣ 'ಘೋಸ್ಟ್' ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರು: ಫ್ಯಾನ್ಸ್ ಶೋ ಸೋಲ್ಡ್‌ಔಟ್
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಶ್ರೀನಿ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಇನ್ನು ಬುಧವಾರ ಮಧ್ಯರಾತ್ರಿ 12.30ಕ್ಕೆ ಚಿತ್ರದ ಮೊದಲ ಪ್ರದರ್ಶನ ಆರಂಭವಾಗಲಿದೆ.
ಈ ವರ್ಷ ದಸರಾ ಸಂಭ್ರಮದಲ್ಲಿ ಕನ್ನಡ ಘೋಸ್ಟ್ ಜೊತೆಗೆ ತಮಿಳಿನ 'ಲಿಯೋ' ಹಾಗೂ ತೆಲುಗಿನ 'ಭಗವಂತ್ ಕೇಸರಿ', 'ಟೈಗರ್ ನಾಗೇಶ್ವರ ರಾವ್' ಸಿನಿಮಾಗಳು ರಿಲೀಸ್ ಆಗುತ್ತಿದೆ. 4 ಸಿನಿಮಾಗಳು ರಾಜ್ಯದಲ್ಲಿ ದೊಡ್ಡಮಟ್ಟದಲ್ಲೇ ತೆರೆಗಪ್ಪಳಿಸುತ್ತಿವೆ. ತಮಿಳಿನ 'ಘೋಸ್ಟ್' ಸಿನಿಮಾ ಆರ್ಭಟ ಜೋರಾಗಿದೆ. ಇನ್ನು ಕನ್ನಡದ 'ಘೋಸ್ಟ್' ಸಿನಿಮಾ ತಮಿಳು, ಹಿಂದಿ, ತೆಲುಗಿಗೆ ಡಬ್ ಆಗಿ ಹೊರ ರಾಜ್ಯಗಳಲ್ಲಿ ರಿಲೀಸ್ ಆಗುತ್ತಿದೆ.

ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಘೋಸ್ಟ್' ಸಿನಿಮಾ ಮೂಡಿ ಬಂದಿದೆ. ಚಿತ್ರದ ಕತೆ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡದೇ ಶ್ರೀನಿ ಟೀಂ ಗೆದ್ದಿದೆ. ಚಿತ್ರದ ಟೀಸರ್ ಹಾಗೂ ಟ್ರೈಲರ್ ಸಿನಿಮಾ ಬಗ್ಗೆ ಕುತೂಹಲ ಕೆರಳುವಂತೆ ಮಾಡಿದೆ. ಮಹೇನ್ ಸಿಂಹ ಛಾಯಾಗ್ರಹಣ, ಅರ್ಜುನ್ ಜನ್ಯಾ ಸಂಗೀತ, ಮಾಸ್ತಿ ಹಾಗೂ ಪ್ರಸನ್ನ ಸಂಭಾಷಣೆ 'ಘೋಸ್ಟ್' ಚಿತ್ರಕ್ಕಿದೆ. ಅನುಪಮ್ ಖೇರ್, ಜಯರಾಂರಂತಹ ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ.
3 ದಿನ ಮುನ್ನ 'ಘೋಸ್ಟ್' ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ಗೆ ಚಾಲನೆ ಸಿಕ್ಕಿದೆ. ನಿಧಾನವಾಗಿ ಪ್ರೇಕ್ಷಕರು ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಈ ವರ್ಷ ಶಿವಣ್ಣ ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. 'ಘೋಸ್ಟ್' ಅವತಾರದಲ್ಲಿ ಸೆಂಚುರಿ ಸ್ಟಾರ್ ಪ್ರೇಕ್ಷಕರನ್ನು ರಂಜಿಸೋಕೆ ಬರುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎನ್ನಲಾಗ್ತಿದ್ದು ಭಿನ್ನ ವಿಭಿನ್ನ ಗೆಟಪ್‌ಗಳಿರೋ ಪಾತ್ರದಲ್ಲಿ ಶಿವಣ್ಣನನ್ನು ನೋಡಬಹುದು.
ಡೀ- ಏಜಿಂಗ್ ತಂತ್ರಜ್ಞಾನ ಬಳಿಸಿ ಕೆಲ ನಿಮಿಷಗಳ ಕಾಲ ಶಿವಣ್ಣನನ್ನು 30 ವರ್ಷ ಯಂಗ್ ಆಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಅದು ಚಿತ್ರದ ಹೈಲೆಟ್ ಎನ್ನಲಾಗುತ್ತಿದೆ. ಇನ್ನು ಕೆಲವು ನಿಮಿಷಗಳು ಮಾತ್ರ ಶಿವಣ್ಣ ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಇನ್ನು ಚಿತ್ರದಲ್ಲಿ ನಾಯಕಿ, ಡ್ಯುಯೆಟ್ ಯಾವುದು ಇರಲ್ಲ. ಕೇವಲ 48 ಗಂಟೆಗಳಲ್ಲಿ ನಡೆಯುವ ಕತೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಬೆಂಗಳೂರು ಹಾಗೂ ಮೈಸೂರಿನಲ್ಲಿ 'ಘೋಸ್ಟ್' ಸಿನಿಮಾ ದೊಡ್ಡದಾಗಿ ರಿಲೀಸ್ ಆಗ್ತಿದೆ. ನಿಧನಾವಾಗಿ ಟಿಕೆಟ್ ಮಾರಾಟವಾಗುತ್ತಿದೆ. ಇನ್ನು ನಗರದ ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 12.30ಕ್ಕೆ ಫ್ಯಾನ್ಸ್ ಶೋ ಏರ್ಪಡಿಸಲಾಗಿದೆ. ಅಭಿಮಾನಿಗಳು ಥಿಯೇಟರ್ ಮುಂದೆ ಕ್ಯೂ ನಿಂತು ಟಿಕೆಟರ ಖರೀದಿಸಿದ್ದಾರೆ. ಫ್ಯಾನ್ಸ್ ಶೋ ಸೋಲ್ಡ್‌ಔಟ್ ಆಗೋಗಿದೆ.
ಹೊಸ ಪ್ರತಿಭೆಗಳಿಗೆ ಸದಾ ಅವಕಾಶ ಕೊಡುವ ಶಿವಣ್ಣ 'ಘೋಸ್ಟ್' ಸಿನಿಮಾ ಮೂಲಕ ಪ್ರಯೋಗ ಮಾಡುತ್ತಿದ್ದಾರೆ. 12ಕ್ಕೂ ಅಧಿಕ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಇನ್ನು ಕರ್ನಾಟಕದಲ್ಲಿ 'ಘೋಸ್ಟ್'ಗಿಂತ ತಮಿಳಿನ 'ಲಿಯೋ' ಚಿತ್ರಕ್ಕೆ ಹೆಚ್ಚು ಶೋ ಕೊಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. 'ಲಿಯೋ' ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಜೋರಾಗಿದೆ. ಆದರೆ ಗುರುವಾರದ ವೇಳೆಗೆ ಯಾವ ಚಿತ್ರಕ್ಕೆ ಎಷ್ಟು ಶೋ ಸಿಗುತ್ತದೆ ಅನ್ನೋದು ಗೊತ್ತಾಗುತ್ತದೆ.


Click it and Unblock the Notifications











