Ghost: ಯು/ಎ ಸೆನ್ಸಾರ್ ಸರ್ಟಿಫಿಕೇಟ್ ಪಡೆದ 'ಘೋಸ್ಟ್': ಓಟಿಟಿಯಲ್ಲಿ ಯಾವಾಗ, ಎಲ್ಲಿ ಸ್ಟ್ರೀಮಿಂಗ್?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ಈಗಾಗಲೇ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಕನ್ನಡಕ್ಕಿಂತ ಹಿಂದಿ ವರ್ಷನ್ ಟ್ರೈಲರ್ ಹೆಚ್ಚು ವೀವ್ಸ್ ಸಾಧಿಸಿದೆ. ಏಕಕಾಲದಲ್ಲಿ ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ.

'ಘೋಸ್ಟ್' ಯುದ್ಧಭೂಮಿ ನೋಡೊಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಶ್ರೀನಿ ತಮ್ಮ ನೆಚ್ಚಿನ ನಟನನ್ನು ತೆರೆಮೇಲೆ ಹೇಗೆ ತೋರಿಸಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇನ್ನು ಶಿವಣ್ಣ ಡಬಲ್ ರೋಲ್‌ನಲ್ಲಿ ದರ್ಬಾರ್ ನಡೆಸುತ್ತಾರಾ? ಎನ್ನುವ ಅನುಮಾನವೂ ಅಭಿಮಾನಿಗಳಲ್ಲಿದೆ. ಸಿಕ್ಕಾಪಟ್ಟೆ ಯಂಗ್ ಆಗಿ 'ಆನಂದ್' ಸಿನಿಮಾ ಶಿವಣ್ಣನನ್ನು ನೆನಪಿಸುವ ಲುಕ್ ಅಂತೂ ಸಿಂಪ್ಲಿ ಸೂಪರ್.

Shivarajkumar-Ghost-censor

ಅಕ್ಟೋಬರ್ 19ಕ್ಕೆ 'ಘೋಸ್ಟ್' ಸಿನಿಮಾ ತೆರೆಗೆ ಬರ್ತಿದೆ. ದಸರಾ ವೀಕೆಂಡ್‌ನಲ್ಲಿ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಕ್ತಿದೆ. ಅನುಪಮ್ ಕೇರ್, ಜಯರಾಂ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಮಹೇಂದ್ರ ಸಿಂಗ್ ಛಾಯಾಗ್ರಹಣ, ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ. 48 ಗಂಟೆಗಳಲ್ಲಿ ನಡೆಯುವ ಕತೆ 'ಘೋಸ್ಟ್' ಚಿತ್ರದಲ್ಲಿದ್ದು ಬಹುತೇಕ ಸೆಟ್‌ಗಳಲ್ಲೇ ಸಿನಿಮಾ ಚಿತ್ರೀಕರಣ ನಡೆದಿದೆ.

ಇನ್ನು ಶ್ರೀನಿ ನಿರ್ದೇಶಿಸಿ ನಟಿಸಿದ 'ಬೀರ್‌ಬಲ್' ಕತೆಗೂ 'ಘೋಸ್ಟ್'ಗೂ ಲಿಂಕ್ ಇದೆ. ಅದು ಏನು ಅನ್ನುವುದನ್ನು ತೆರೆಮೇಲೆ ನೋಡಬೇಕು. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಂದೇಶ್ ನಾಗರಾಜ್ ಸಿನಿಮಾ ನಿರ್ಮಿಸಿದ್ದಾರೆ. ಭಾರೀ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಸೆರೆಹಿಡಿಯಲಾಗಿದೆ. ಇನ್ನು ಇದು ಕಂಪ್ಲೀಟ್ ಆಗಿ ಗ್ಯಾಂಗ್‌ಸ್ಟರ್ ಸಿನಿಮಾ ಅಲ್ಲ ಎಂದು ಶಿವಣ್ಣ ಹೇಳಿದ್ದಾರೆ.

'ಘೋಸ್ಟ್' ಸಿನಿಮಾ ಇದೀಗ ಸೆನ್ಸಾರ್ ಮುಗಿಸಿದೆ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇನ್ನು ಜೀ ಸಂಸ್ಥೆ ಚಿತ್ರದ ಡಿಜಿಟಲ್ ರೈಟ್ಸ್ ಖರೀದಿಸಿದೆ. ಸಿನಿಮಾ ಥಿಯೇಟರ್‌ಗಳಲ್ಲಿ ತೆರೆಕಂಡ ಒಂದೂವರೆ ತಿಂಗಳ ಬಳಿಕ ಓಟಿಟಿಗೆ ಬರಲಿದೆ. ಅದಕ್ಕಿಂತ ಮುಂಚೆ ಬಂದರೂ ಅಚ್ಚರಿಪಡಬೇಕಿಲ್ಲ.

'ಘೋಸ್ಟ್' ಟ್ರೈಲರ್‌ನಲ್ಲಿ "ಇತಿಹಾಸ ಬರೆಯೋದೆ ತಾಕತ್ತು ಇರೋ ಮನುಷ್ಯನ ಬಗ್ಗೆ ಸಲಾಂ ಹೊಡೆಯೋನ ಬಗ್ಗೆ ಒಂದೂ ಸಾಲು ಬರೆಯೋದಿಲ್ಲ. ಸಾಮಾನ್ಯವಾಗಿ ನಾನು ಯಾರ ತಂಟೆಗೂ ಹೋಗಲ್ಲ. ಹಾಂ, ಸೋಲ್ತೀನಿ ಅನ್ನೋ ಭಯಕ್ಕಲ್ಲ, ನಾ ಹೋದ್ರೆ ಯುದ್ಧ ಭೂಮಿ ರುದ್ರಭೂಮಿ ಆಗುತ್ತೆ" ಎನ್ನುವ ಡೈಲಾಗ್​ ಗಮನ ಸೆಳೆದಿದೆ. ಮಾಸ್ತಿ ಹಾಗೂ ಪ್ರಸನ್ನ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ಹಿಂದಿ ಬೆಲ್ಟ್‌ನಲ್ಲೂ 'ಘೋಸ್ಟ್' ಸಿನಿಮಾ ದೊಡ್ಡದಾಗಿ ರಿಲೀಸ್ ಆಗುವ ಸಾಧ್ಯತೆಯಿದೆ. ಪೆನ್ ಸ್ಟುಡಿಯೋ ಸಂಸ್ಥೆ ಚಿತ್ರದ ರೈಟ್ಸ್ ಕೊಂಡುಕೊಂಡಿದೆ. 'ಜೈಲರ್' ಚಿತ್ರದ ನರಸಿಂಹ ಪಾತ್ರದಿಂದ ಅಕ್ಕ ಪಕ್ಕದ ರಾಜ್ಯಗಳಲ್ಲೂ ಶಿವಣ್ಣ ಸದ್ದು ಮಾಡಿದ್ದರು. ಹಾಗಾಗಿ 'ಘೋಸ್ಟ್' ಚಿತ್ರಕ್ಕೆ ಹೊರ ರಾಜ್ಯಗಳಲ್ಲೂ ಒಳ್ಳೆ ಕ್ರೇಜ್ ಇದೆ. ತಮಿಳಿನಲ್ಲಿ ಸಿನಿಮಾ ದೊಡ್ಡದಾಗಿಯೇ ರಿಲೀಸ್ ಆಗುವ ಸುಳಿವು ಸಿಗುತ್ತಿದೆ. ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ-2' ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿದ್ದು ಕರ್ನಾಟಕದಲ್ಲಿ 'ಘೋಸ್ಟ್‌' ಸೋಲೋ ರಿಲೀಸ್ ಆಗ್ತಿದೆ.

ಇನ್ನು ಈ ಬಾರಿ ದಸರಾ ಸಂಭ್ರಮದಲ್ಲಿ ತಮಿಳಿನಲ್ಲಿ ವಿಜಯ್ ನಟನೆಯ 'ಲಿಯೋ' ಸಿನಿಮಾ ರಿಲೀಸ್ ಆಗ್ತಿದೆ. ತೆಲುಗಿನಲ್ಲಿ ಬಾಲಕೃಷ್ಣ ನಟನೆಯ 'ಭಗವಂತ್ ಕೇಸರಿ' ಹಾಗೂ ರವಿತೇಜಾ ಅಭಿನಯದ 'ಟೈಗರ್ ನಾಗೇಶ್ವರ ರಾವ್' ಸಿನಿಮಾಗಳು ಬರ್ತಿವೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಭಾರೀ ಪೈಪೋಟಿ ಏರ್ಪಡಲಿದೆ. ಇನ್ನು 'ಘೋಸ್ಟ್' ಸಿನಿಮಾ ಬಹಳ ಚಿಕ್ಕದು. ಸಿನಿಮಾ ಕಾಲಾವಧಿ 2 ಗಂಟೆ 8 ನಿಮಿಷ ಮಾತ್ರ. ಫಸ್ಟ್ ಹಾಫ್ 1 ಗಂಟೆ 7 ನಿಮಿಷ, ಸೆಕೆಂಡ್ ಹಾಫ್ 1 ಗಂಟೆ 1 ನಿಮಿಷ ಮಾತ್ರ ಇರುತ್ತದೆ ಎಂದು ಸಂದರ್ಶನವೊಂದರಲ್ಲಿ ಶಿವಣ್ಣ ಹೇಳಿದ್ದರು.

More from Filmibeat

English summary
Ghost Certified with U/A Certificate, post theatrical digital rights Bagged by Zee
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X