twitter
    For Quick Alerts
    ALLOW NOTIFICATIONS  
    For Daily Alerts

    ಶಿವರಾಂ ಅವರೊಟ್ಟಿಗಿನ ನಂಟು ಬಿಚ್ಚಿಟ್ಟ ಶಿವರಾಜ್ ಕುಮಾರ್

    |

    ಹಿರಿಯ ನಟ ಶಿವರಾಂ ಇಂದು ನಿಧನರಾಗಿದ್ದಾರೆ. ಪುನೀತ್ ಅವರನ್ನು ಕಳೆದುಕೊಂಡು ಒಂದು ತಿಂಗಳಾಗಿದೆಯಷ್ಟೆ ಅಷ್ಟರಲ್ಲಿ ಮತ್ತೊಂದು ನೋವು ಚಿತ್ರರಂಗವನ್ನು ಆವರಿಸಿಕೊಂಡಿದೆ.

    ಚಿತ್ರರಂಗದವರೊಟ್ಟಿಗೆ ಆತ್ಮೀಯ ಬಂಧವನ್ನು ಶಿವರಾಂ ಹೊಂದಿದ್ದರು. ಅದರಲ್ಲಿಯೂ ದೊಡ್ಮನೆ ಕುಟುಂಬದೊಟ್ಟಿಗಿನ ಅವರ ಬಂಧ ಬಹಳ ಹಳತು.

    ಶಿವರಾಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆಯೆಂದು ಗೊತ್ತಾದ ಕೂಡಲೇ ಶಿವರಾಜ್ ಕುಮಾರ್ ಅವರು ಆಸ್ಪತ್ರೆಗೆ ಧಾವಿಸಿದ್ದರು. ನಿನ್ನೆಯಷ್ಟೆ ಆಸ್ಪತ್ರೆಗೆ ಭೇಟಿ ನೀಡಿದ್ದ ಶಿವಣ್ಣ, ಶಿವರಾಂ ಅವರನ್ನು ಕಂಡಿದ್ದರು, ಅವರ ಕುಟುಂಬದವರೊಟ್ಟಿಗೆ ಮಾತನಾಡಿದ ಧೈರ್ಯದ ಮಾತುಗಳನ್ನು ಹೇಳಿದ್ದರು. ಆದರೆ ಇಂದು ಶಿವರಾಂ ನಿಧನರಾಗಿಬಿಟ್ಟಿದ್ದಾರೆ.

    ಶಿವರಾಂ ಅವರ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ಶಿವರಾಜ್ ಕುಮಾರ್ ಮಾಧ್ಯಮಗಳೊಟ್ಟಿಗೆ ಮಾತನಾಡಿ ದುಃಖ ವ್ಯಕ್ತಪಡಿಸಿದರು. ತಮ್ಮ ಕುಟುಂಬಕ್ಕೂ ಶಿವರಾಂ ಅವರಿಗೂ ಇದ್ದ ನಂಟಿನ ಬಗ್ಗೆ ಮಾತನಾಡಿದರು.

    ಅಪ್ಪ-ಅಮ್ಮನಿಗೂ ಬಹಳ ಆತ್ಮೀಯರಾಗಿದ್ದರು: ಶಿವಣ್ಣ

    ಅಪ್ಪ-ಅಮ್ಮನಿಗೂ ಬಹಳ ಆತ್ಮೀಯರಾಗಿದ್ದರು: ಶಿವಣ್ಣ

    ''ಬಹಳ ನೋವಾಗುತ್ತದೆ. ಹೀಗೆ ಒಂದರ ಹಿಂದೆ ನೋವನ್ನು ಕೊಡುತ್ತಾ ಹೋದರೆ ಹೇಗೆ ತಡೆದುಕೊಳ್ಳಬೇಕು. ಶಿವರಾಮಣ್ಣ ನಮಗೆ ಬಹಳ ಆತ್ಮೀಯರಾಗಿದ್ದವರು. ಅವರು ನಮ್ಮ ಕುಟುಂಬದವರೇ ಆಗಿದ್ದರು. ಅಪ್ಪ, ಅಮ್ಮನಿಗೂ ಅವರ ಬಹಳ ಆತ್ಮೀಯರಾಗಿದ್ದರು. ನಮ್ಮ ಕುಟುಂಬದಲ್ಲಿ ಏನೇ ಕಾರ್ಯಕ್ರಮ ನಡೆದರೂ ಅವರು ಇರಲೇ ಬೇಕಿತ್ತು. ನಮ್ಮ ಕುಟುಂಬದ ಬಗ್ಗೆಯೂ ಅವರಿಗೆ ಅಷ್ಟೇ ಪ್ರೀತಿ, ಗೌರವ ಇತ್ತು'' ಎಂದರು ಶಿವರಾಜ್ ಕುಮಾರ್.

    ಅಪ್ಪಾಜಿಯವರಿಗೂ ಗುರುಸ್ವಾಮಿಗಳಾಗಿದ್ದರು: ಶಿವಣ್ಣ ನೆನಪು

    ಅಪ್ಪಾಜಿಯವರಿಗೂ ಗುರುಸ್ವಾಮಿಗಳಾಗಿದ್ದರು: ಶಿವಣ್ಣ ನೆನಪು

    ''ಶಿವರಾಮಣ್ಣ ಎಂದರೆ ಮೊದಲು ನೆನಪು ಬರುವುದೇ ಶಬರಿಮಲೆ. ಅಪ್ಪಾಜಿಯವರು ಮಾಲೆ ಹಾಕಲು ಪ್ರಾರಂಭ ಮಾಡಿದಾಗಿನಿಂದಲೂ ಶಿವರಾಂ ಅವರು ಜೊತೆಗೆ ಇರುತ್ತಿದ್ದರು. ನಂತರ ಇವರನ್ನೇ ಗುರುಸ್ವಾಮಿಗಳು ಎಂದು ಮಾಡಿ ಇವರ ನೇತೃತ್ವದಲ್ಲಿ ಶಬರಿಮಲೆ ಯಾತ್ರೆ ಹೋಗುತ್ತಿದ್ದರು. ಆ ನಂತರ ನಾವು ಮಾಲಾಧಾರಣೆ ಪ್ರಾರಂಭ ಮಾಡಿದಾಗಲೂ ಸಹ ಶಿವರಾಮಣ್ಣನ ನೇತೃತ್ವದಲ್ಲಿಯೇ ಶಬರಿಮಲೆಗೆ ಹೋಗುತ್ತಿದ್ದೆವು'' ಎಂದರು ಶಿವಣ್ಣ.

    ''ಮೂರು ವರ್ಷದ ಹಿಂದೆ ಸರಾಗವಾಗಿ ಶಬರಿಮಲೆ ಬೆಟ್ಟ ಹತ್ತಿದ್ದರು''

    ''ಮೂರು ವರ್ಷದ ಹಿಂದೆ ಸರಾಗವಾಗಿ ಶಬರಿಮಲೆ ಬೆಟ್ಟ ಹತ್ತಿದ್ದರು''

    ''ಶಿವರಾಮಣ್ಣನ ಬಳಿ ಒಂದು ಶಕ್ತಿಯಿತ್ತು. ಕೆಲವು ವರ್ಷಗಳ ಹಿಂದೆಯಷ್ಟೆ ನಾವೆಲ್ಲ ಒಟ್ಟಿಗೆ ಶಬರಿಮಲೆಗೆ ಹೋಗಿದ್ದಾಗಲೂ ಅವರು ಅನಾಯಾಸವಾಗಿ ಬೆಟ್ಟ ಹತ್ತಿದ್ದರು. ಅವರು ಬಹಳ ಶಿಸ್ತಿನ ವ್ಯಕ್ತಿ. ಎಲ್ಲವನ್ನೂ ಪೂರ್ವತಯಾರಿ ಮಾಡಿಕೊಂಡು ಶಿಸ್ತಿನಿಂದ ಇರುತ್ತಿದ್ದರು. ಬಹಳ ಪರಿಶುದ್ಧರು. ಅವರಂಥಹಾ ವ್ಯಕ್ತಿಯನ್ನು ನಾನು ಜೀವನದಲ್ಲಿ ನೋಡೇ ಇಲ್ಲ'' ಎಂದು ಭಾವುಕರಾದರು ಶಿವಣ್ಣ.

    ಶಿವರಾಮಣ್ಣ ಎಂದೆಂದೂ ನಮ್ಮ ಹೃದಯದಲ್ಲಿರುತ್ತಾರೆ: ಶಿವಣ್ಣ

    ಶಿವರಾಮಣ್ಣ ಎಂದೆಂದೂ ನಮ್ಮ ಹೃದಯದಲ್ಲಿರುತ್ತಾರೆ: ಶಿವಣ್ಣ

    ''ಇತ್ತೀಚಿನ ದಿನಗಳಲ್ಲಿ ಹತ್ತಿರದವರೇ ದೂರ ಹೋಗುತ್ತಿದ್ದಾರೆ. ಇದು ಬಹಳ ನೋವು ಕೊಟ್ಟಿದೆ. ನೋವಿನ ಮೇಲೆ ನೋವು ಕೊಡುತ್ತಲೇ ಹೋದರೆ ಮನುಷ್ಯ ತಡೆದುಕೊಳ್ಳುವುದಾದರೂ ಹೇಗೆ? ಶಿವರಾಮಣ್ಣನ ಇಡೀ ಕುಟುಂಬಕ್ಕೆ ಆ ದೇವರು ಶಕ್ತಿ ನೀಡಲಿ. ಅವರ ಕುಟುಂಬಕ್ಕೆ ಬೆಂಬಲವಾಗಿ ನಾವೆಲ್ಲ ಇದ್ದೀವಿ ಆದರೂ ಅವರು ಇದ್ದಂತೆ ಆಗುವುದಿಲ್ಲ. ಶಿವರಾಮಣ್ಣನ ಆತ್ಮಕ್ಕೆ ಶಾಂತಿ ಸಿಗಲಿ, ಅವರನ್ನು ಯಾವಾಗಲೂ ನಾವು ಮಿಸ್ ಮಾಡಿಕೊಳ್ಳುತ್ತಾ ಇರುತ್ತೇವೆ. ಶಿವರಾಮಣ್ಣ ನೀವಿಲ್ಲವೆಂದರೂ ನಿಮ್ಮ ನೆನಪನ್ನು ನಾವು ಯಾವಾಗಲೂ ನಮ್ಮ ಹೃದಯದಲ್ಲಿ ಇಟ್ಟುಕೊಳ್ಳುತ್ತೀವಿ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ'' ಎಂದರು ಶಿವರಾಜ್ ಕುಮಾರ್.

    English summary
    Actor Shivaram is like our family member said Shiva Rajkumar. He said Shivaramanna is very close to our family.
    Saturday, December 4, 2021, 17:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X