»   » ವಾಣಿಜ್ಯ ಚಿತ್ರಗಳಲ್ಲಿ ನಟಿಸಲು ಒಪ್ಪಿಗೆ ಕೊಡಿ : ಶಿವರಾಮು ಮೊರೆ

ವಾಣಿಜ್ಯ ಚಿತ್ರಗಳಲ್ಲಿ ನಟಿಸಲು ಒಪ್ಪಿಗೆ ಕೊಡಿ : ಶಿವರಾಮು ಮೊರೆ

Posted By: Staff
Subscribe to Filmibeat Kannada

ದಾವಣಗೆರೆ : ವಾಣಿಜ್ಯ ಚಿತ್ರಗಳಲ್ಲಿ ಅಭಿನಯಿಸಲು ನನಗೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರುತ್ತೇನೆ ಎಂದು ಇಲ್ಲಿನ ಜಿಲ್ಲಾಧಿಕಾರಿ ಹಾಗೂ ಚಿತ್ರನಟ ಕೆ.ಶಿವರಾಮು ಶನಿವಾರ ಹೇಳಿದ್ದಾರೆ.

ಹತ್ತು ವರ್ಷಗಳ ಹಿಂದೆ ವಾಣಿಜ್ಯ ಚಿತ್ರಗಳಲ್ಲಿ ನಟಿಸಲು ಸರ್ಕಾರದ ಅನುಮತಿ ಪಡೆದಿದ್ದೆ. ಚಲಚ್ಚಿತ್ರಗಳಲ್ಲಿ ನಟಿಸುತ್ತಿರುವ ಏಕೈಕ ಐಎಎಸ್‌ ಅಧಿಕಾರಿ ನಾನು. ನಟನೆ ನನ್ನ ಹವ್ಯಾಸ. ಅದಕ್ಕಾಗಿ ನಾನು ಯಾವ ಸಂಭಾವನೆಯನ್ನೂ ತೆಗೆದುಕೊಳ್ಳುತ್ತಿಲ್ಲ. ಈವರೆಗೆ ಸರ್ಕಾರದಿಂದ ವಾಣಿಜ್ಯ ಚಿತ್ರಗಳಲ್ಲಿ ನಟಿಸಕೂಡದೆಂಬ ಯಾವುದೇ ಅಧಿಕೃತ ಪತ್ರ ನನಗೆ ಬಂದಿಲ್ಲ. ಅಕಸ್ಮಾತ್‌ ವಾಣಿಜ್ಯ ಚಿತ್ರಗಳಲ್ಲಿ ನಟಿಸಕೂಡದೆಂದು ಸರ್ಕಾರ ತಾಕೀತು ಮಾಡಿದಲ್ಲಿ ಅದಕ್ಕೆ ಬದ್ಧನಾಗಿರಲು ನಾನು ಸಿದ್ಧ . ನನ್ನ ಮನವಿಗೆ ಸರ್ಕಾರ ಸ್ಪಂದಿಸುತ್ತದೆ ಎಂಬ ಆಶಾ ಭಾವನೆ ನನ್ನದು ಎಂದು ಶಿವರಾಮು ಹೇಳಿದರು.

ಸರ್ಕಾರಿ ಸೇವೆಯಲ್ಲಿರುವವರು ವಾಣಿಜ್ಯ ಚಿತ್ರಗಳಲ್ಲಿ ನಟಿಸಕೂಡದೆಂದು ಶನಿವಾರ ತಮ್ಮ ಅಧಿಕಾರ ಬಿಟ್ಟು ಕೊಡಲಿರುವ ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ.ಸಿ.ಭಟ್ಟಾಚಾರ್ಯ ಹೇಳಿದ್ದರು. ಕಳೆದ ಮಂಗಳವಾರ ಸಿಓಡಿ ತನಿಖೆಗೆ ಒಳಗಾಗಿದ್ದ ಮತ್ತೊಬ್ಬ ಸರ್ಕಾರಿ ಅಧಿಕಾರಿ ಕಂ ನಟ ಬಿ.ಸಿ.ಪಾಟೀಲ್‌ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

(ಯುಎನ್‌ಐ)

English summary
DC cum actor shivramu appeals govt. to permit him to act in commercial movies

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada