'ಭೈರತಿ ರಣಗಲ್' ತೆಲುಗು, ತಮಿಳು ಅಡ್ವಾನ್ಸ್ ಬುಕ್ಕಿಂಗ್ ಶುರು; ಹೇಗಿದೆ ರೆಸ್ಪಾನ್ಸ್?

ಕನ್ನಡದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿರುವ 'ಭೈರತಿ ರಣಗಲ್' ತೆಲುಗು, ತಮಿಳಿನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಟ್ರೈಲರ್, ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇದೀಗ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ. ಹೈದರಾಬಾದ್‌ನಲ್ಲಿ ದೊಡ್ಡಮಟ್ಟದಲ್ಲೇ ಸಿನಿಮಾ ತೆರೆಗಪ್ಪಳಿಸುತ್ತಿದೆ.

ನರ್ತನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಭೈರತಿ ರಣಗಲ್' ನವೆಂಬರ್ 15ಕ್ಕೆ ತೆರೆಗೆ ಬಂದಿತ್ತು. ಮತ್ತೊಮ್ಮೆ ರಣಗಲ್ ಆಗಿ ಶಿವಣ್ಣನ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ಸೂಪರ್ ಹಿಟ್ 'ಮಫ್ತಿ' ಪ್ರೀಕ್ವೆಲ್ ಆಗಿರುವ 'ಭೈರತಿ ರಣಗಲ್' ಸಿನಿರಸಿಕರ ಮನಗೆದ್ದಿದೆ. 3ನೇ ವಾರವೂ ಕರ್ನಾಟಕದಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Shivarjakumar Starrer Bhairathi Ranagal telugu and tamil advance booking open

'ಭೈರತಿ ರಣಗಲ್' ಚಿತ್ರತಂಡ ಕೂಡ ವಿಜಯಯಾತ್ರೆ ಕೈಗೊಂಡು ಸಿನಿರಸಿಕರ ಪ್ರೀತಿಗೆ ಧನ್ಯವಾದ ತಿಳಿಸುತ್ತಿದೆ. ರೋಣಾಪುರದ ಜನರಿಗಾಗಿ ಗ್ಯಾಂಗ್‌ಸ್ಟರ್ ಆದ ರಣಗಲ್ ಕಥೆ ಪ್ರೇಕ್ಷಕರ ಮನಗೆದ್ದಿದೆ. ಆರಂಭದಲ್ಲಿ ಜಾಲಾಮುಖಿಯಂತೆ ತಣ್ಣಗೆ ಇರುವ ರಣಗಲ್ ಬಳಿಕ ತಿರುಗಿ ಬಿದ್ದು ಅಬ್ಬರಿಸುವ ಪರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಕೆಲ ಸನ್ನಿವೇಶಗಳಿಗೆ ಶಿಳ್ಳೆ ಚಪ್ಪಾಳೆ ಸಿಗುತ್ತಿದೆ.

3ನೇ ವಾರವೂ ಸಂಜೆಯ ಕೆಲ ಶೋಗಳು ಹೌಸ್‌ಫುಲ್ ಆಗುತ್ತಿದೆ. 'ಭೈರತಿ ರಣಗಲ್' ಸಕ್ಸಸ್‌ಗೆ ಇದು ಕನ್ನಡಿ. ಇನ್ನು ತೆಲುಗು, ತಮಿಳು ಪ್ರೇಕ್ಷಕರಿಗೂ ಶಿವಣ್ಣ ಪರಿಚಿತರಾಗಿದ್ದಾರೆ. 'ಜೈಲರ್' ಚಿತ್ರದ ನರಸಿಂಹ ಪಾತ್ರ ಹೊರ ರಾಜ್ಯಗಳಲ್ಲಿ ಸದ್ದು ಮಾಡಿತ್ತು. ಅದಕ್ಕೂ ಮುನ್ನ ಶಿವಣ್ಣ 'ವೇದ' ಸಿನಿಮಾ ತೆಲುಗು, ತಮಿಳಿಗೆ ಡಬ್ ಆಗಿ ರಿಲೀಸ್ ಆಗಿತ್ತು. ಇದೀಗ ರಣಗಲ್ ಸರದಿ.

Shivarjakumar Starrer Bhairathi Ranagal telugu and tamil advance booking open

ತೆಲುಗಿನಲ್ಲಿ ನಾನಿ ಹಾಗೂ ತಮಿಳಿನಲ್ಲಿ ಶಿವಕಾರ್ತಿಕೇಯನ್ 'ಭೈರತಿ ರಣಗಲ್' ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದರು. ಇನ್ನು ತಮಿಳು, ತೆಲುಗಿನಲ್ಲಿ ಕೂಡ ತಮ್ಮ ಪಾತ್ರಕ್ಕೆ ಸ್ವತಃ ಶಿವಣ್ಣ ಡಬ್ ಮಾಡಿದ್ದಾರೆ ಎನ್ನಲಾಗ್ತಿದೆ. ಇದೇ ಶುಕ್ರವಾರ ಸಿನಿಮಾ ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ತೆರೆಗೆ ಬರಲಿದೆ. ಹೈದರಾಬಾದ್‌ನಲ್ಲಿ ಮೊದಲ ದಿನ 35ಕ್ಕೂ ಅಧಿಕ ಶೋಗಳು 'ಭೈರತಿ ರಣಗಲ್' ಸಿನಿಮಾ ಪ್ರದರ್ಶನಗೊಳ್ಳಲಿದೆ. ನಿಧಾನವಾಗಿ ಬುಕ್ಕಿಂಗ್ ಆರಂಭವಾಗಿದೆ.

ಇನ್ನು ಚೆನ್ನೈನಲ್ಲೇ ಹುಟ್ಟಿ ಬೆಳೆದವರು ಶಿವರಾಜ್‌ಕುಮಾರ್. ತಮ್ಮ ಹುಟ್ಟೂರಿನ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ. ಚೆನ್ನೈನಲ್ಲಿ ಸದ್ಯಕ್ಕೆ 3 ಶೋಗಳು ಸಿಕ್ಕಿದೆ. ನಿಧಾನವಾಗಿ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ತೆಲುಗು, ತಮಿಳು ಪ್ರೇಕ್ಷಕರಿಗೂ ಆಕ್ಷನ್ ಸಿನಿಮಾಗಳಂದ್ರೆ ಇಷ್ಟ. 'ಭೈರತಿ ರಣಗಲ್' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುವ ನಿರೀಕ್ಷೆಯಿದೆ.

ತಮಿಳುನಾಡಿದ ಹೊಸೂರಿನಲ್ಲಿ 'ಭೈರತಿ ರಣಗಲ್' ಕನ್ನಡ ವರ್ಷನ್ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಅಲ್ಲಿನ ಗ್ರ್ಯಾಂಡ್ ಸಿನಿಮಾಸ್ ಚಿತ್ರಮಂದಿರದಲ್ಲಿ ಚಿತ್ರಕ್ಕೆ ಒಂದು ಎರಡು ಶೋಗಳು ಸಿಗುತ್ತಿದೆ. 3ನೇ ವಾರವೂ ಒಂದು ಶೋ ಪ್ರದರ್ಶನವಾಗುತ್ತಿದೆ. ಇದೀಗ ತಮಿಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ.

ಸದ್ಯ ಚಿತ್ರದ 'ಕಾವಲಿಗ' ಹಾಡಿನ ತೆಲುಗು, ತಮಿಳು ವರ್ಷನ್ ರಿಲೀಸ್ ಆಗಿದೆ. ಚಿತ್ರದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಪ್ಲಸ್ ಆಗಿದೆ. ತೆಲುಗಿನಲ್ಲಿ ಹಾಡಿಗೆ ವನಮಲಿ ಸಾಹಿತ್ಯ ಬರೆದಿದ್ದಾರೆ. ಸಾಯಿ ವಿಘ್ನೇಶ್ ಹಾಡನ್ನು ಹಾಡಿದ್ದಾರೆ. ಕನ್ನಡದಷ್ಟೆ ತೆಲುಗಿನಲ್ಲಿ ಸಾಂಗ್ ಕೇಳುಗರ ಮನಗೆದ್ದಿದೆ.

ತಮಿಳಿನಲ್ಲಿ ವಿಷ್ಣು ಎಡವನ್ ಸಾಹಿತ್ಯ ಬರೆದಿದ್ದು ಸಾಯಿ ವಿಘ್ನೇಶ್ ದನಿಯಲ್ಲೇ ಹಾಡು ಮೂಡಿಬಂದಿದೆ. ಕನ್ನಡದಲ್ಲಿ 'ಕಾವಲಿಗ' ಹಾಡಿಗೆ ವಿಜಯ ಪ್ರಕಾಶ್ ದನಿಯಾಗಿದ್ದರು. ಸಾಯಿ ಸರ್ವೇಶ್ ಸಾಹಿತ್ಯ ಗೀಚಿದ್ದರು. ಕನ್ನಡದಲ್ಲಿ 3 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ಸಾಂಗ್ ಸದ್ದು ಮಾಡಿತ್ತು.

More from Filmibeat

English summary
Bhairathi Ranagal telugu and tamil version Hyderabad, Chennai shows count
Read more about: shivarajkumar kollywood bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X