»   » 'ಕಾಮಿಡಿ ಕಿಲಾಡಿ' ಶಿವರಾಜ್ ಕೆ.ಆರ್.ಪೇಟೆಗೆ ಗೋಲ್ಡನ್ ಚಾನ್ಸ್! ಯಾವ ಚಿತ್ರದಲ್ಲಿ?

'ಕಾಮಿಡಿ ಕಿಲಾಡಿ' ಶಿವರಾಜ್ ಕೆ.ಆರ್.ಪೇಟೆಗೆ ಗೋಲ್ಡನ್ ಚಾನ್ಸ್! ಯಾವ ಚಿತ್ರದಲ್ಲಿ?

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿ.. ಅದರಲ್ಲೂ 'ಕಾಮಿಡಿ ಕಿಲಾಡಿಗಳು' ಶೋ ನೋಡುವವರಿಗೆ ಕೆ.ಆರ್.ಪೇಟೆಯ ಪ್ರತಿಭೆ ಶಿವರಾಜ್ ಪರಿಚಯ ಇರಲೇಬೇಕು.[ಕಾಮಿಡಿ ಕಿಲಾಡಿಗಳ ಅಡ್ಡದಲ್ಲಿ ಜಗ್ಗೇಶ್ ಪ್ರತ್ಯಕ್ಷ !]

ಎಂಥಾ ಪಾತ್ರ ಕೊಟ್ಟರೂ, ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ವೀಕ್ಷಕರನ್ನು ನಕ್ಕು-ನಲಿಸುವ 'ಕಾಮಿಡಿ ಕಿಲಾಡಿ' ಶಿವರಾಜ್ ಕೆ.ಆರ್.ಪೇಟೆ ಇನ್ಮೇಲೆ ಬೆಳ್ಳಿತೆರೆ ಮೇಲೂ ನಿಮ್ಮನ್ನೆಲ್ಲಾ ರಂಜಿಸಲಿದ್ದಾರೆ.

ಶಿವರಾಜ್ ಕೆ.ಆರ್.ಪೇಟೆಗೆ ಸಿಕ್ಕಿದೆ ಗೋಲ್ಡನ್ ಚಾನ್ಸ್

ನಂಬಿದ್ರೆ ನಂಬಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಅಭಿನಯದ ಬಿಗ್ ಬಜೆಟ್ ನ ಚಿತ್ರವೊಂದರಲ್ಲಿ ನಟಿಸಲು 'ಕಾಮಿಡಿ ಕಿಲಾಡಿ' ಶಿವರಾಜ್ ಕೆ.ಆರ್.ಪೇಟೆ ರವರಿಗೆ ಸುವರ್ಣಾವಕಾಶ ಒದಗಿ ಬಂದಿದೆ.

ಯಾವ ಸಿನಿಮಾದಲ್ಲಿ.?

'ಜೋಗಿ' ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರಲಿರುವ 'ದಿ ವಿಲನ್' ಚಿತ್ರದಲ್ಲಿ ನಟಿಸುವ ಗೋಲ್ಡನ್ ಚಾನ್ಸ್ ಶಿವರಾಜ್ ಕೆ.ಆರ್.ಪೇಟೆ ರವರಿಗೆ ಲಭಿಸಿದೆ.

'ದಿ ವಿಲನ್' ಚಿತ್ರದಲ್ಲಿ ಕಾಮಿಡಿಯನ್.?

ಶಿವರಾಜ್ ಕೆ.ಆರ್.ಪೇಟೆ ರವರಲ್ಲಿ ಅಡಗಿರುವ ಅಗಾಧ ಪ್ರತಿಭೆ ಮತ್ತು ಕಾಮಿಡಿ ಟೈಮಿಂಗ್ ಗೆ ಮನಸೋತು ರಕ್ಷಿತಾ ಮತ್ತು ಪ್ರೇಮ್ ಈ ಅವಕಾಶ ನೀಡಿದ್ದಾರೆ. ಆದ್ರೆ, 'ದಿ ವಿಲನ್' ಚಿತ್ರದಲ್ಲಿ ಕಾಮಿಡಿಯನ್ ಆಗಿ ಕಾಣಿಸಿಕೊಳ್ಳುತ್ತಾರೋ ಅಥವಾ ಶಿವರಾಜ್ ಕೆ.ಆರ್.ಪೇಟೆ ರವರಿಗೆ ವಿಶಿಷ್ಟ ಪಾತ್ರವಿದೆಯೋ... ಸದ್ಯಕ್ಕೆ ಕನ್ಫರ್ಮ್ ಆಗಿಲ್ಲ.

ಶಿವರಾಜ್ ಕೆ.ಆರ್.ಪೇಟೆಗೆ ಚಿತ್ರರಂಗ ಹೊಸದಲ್ಲ.!

ಈ ಹಿಂದೆ ಸಿನಿಮಾವೊಂದರಲ್ಲಿ (ಹೆಸರು.?) ಸಹಾಯಕ ನಿರ್ದೇಶಕನಾಗಿ ಶಿವರಾಜ್ ಕೆ.ಆರ್.ಪೇಟೆ ಕೆಲಸ ಮಾಡಿದ್ದರು. ಹೀಗಾಗಿ ಚಿತ್ರರಂಗದ ನಂಟು ಅವರಿಗೆ ಹೊಸದಲ್ಲ.

ಬಣ್ಣದ ನಂಟು.?

ಮೂಲತಃ ಕೆ.ಆರ್.ಪೇಟೆಯವರಾದ ಶಿವರಾಜ್ ರವರ ತಂದೆ ನಾಟಕದ ಮೇಷ್ಟ್ರು. ಹೀಗಾಗಿ, ತಂದೆ ನಿರ್ದೇಶನದ ಅನೇಕ ನಾಟಕಗಳಲ್ಲಿ ಶಿವರಾಜ್ ಕೆ.ಆರ್.ಪೇಟೆ ಪಾತ್ರ ಮಾಡಿದ್ದಾರೆ. ನಾಟಕ ಮತ್ತು ಟಿವಿ ಶೋ ಬಳಿಕ ಇದೀಗ ಬೆಳ್ಳಿತೆರೆ ಮೇಲೆ ಶಿವರಾಜ್ ಮಿನುಗಲಿದ್ದಾರೆ.

'ದಿ ವಿಲನ್' ಕುರಿತು...

ಮೊಟ್ಟ ಮೊದಲ ಬಾರಿಗೆ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಒಂದಾಗಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿರುವ ಸಿನಿಮಾ 'ದಿ ವಿಲನ್'. 'ಜೋಗಿ' ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುವ ಬಿಗ್ ಬಜೆಟ್ ಸಿನಿಮಾ ಇದು.

English summary
Shivraj.K.R.Pete of Zee Kannada 'Comedy Khiladigalu' fame has got a golden opportunity to act in Prem directorial 'The Villain'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada