For Quick Alerts
  ALLOW NOTIFICATIONS  
  For Daily Alerts

  ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ

  |

  ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಉಳಿದಿದ್ದ ಶಿವರಾಜ್ ಕುಮಾರ್, ಅನ್‌ಲಾಕ್ ಪ್ರಾರಂಭವಾದ ನಂತರ ಬದಲಾವಣೆಗಾಗಿ ನಿಸರ್ಗದತ್ತ ಮುಖ ಮಾಡಿದ್ದಾರೆ.

  Shivanna in Farm House,ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ

  ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಜಂಟಿಯಾಗಿ ತೋಟಗಳನ್ನು ಸುತ್ತಾಡಿ ನಿಸರ್ಗದ ಮಡಿಲಲ್ಲಿ ಕೆಲ ಕಾಲ ಕಳೆದಿದ್ದಾರೆ.

  'ಇಂದ್ರಸೇನ'ನಾಗಿ ಭಿನ್ನ ಕತೆಯೊಂದಿಗೆ ಬರಲಿದ್ದಾರೆ ಶಿವರಾಜ್‌ ಕುಮಾರ್'ಇಂದ್ರಸೇನ'ನಾಗಿ ಭಿನ್ನ ಕತೆಯೊಂದಿಗೆ ಬರಲಿದ್ದಾರೆ ಶಿವರಾಜ್‌ ಕುಮಾರ್

  ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ನಿನ್ನೆ ಸಿನಿಮಾ ನಿರ್ದೇಶಕ ಆರ್.ಚಂದ್ರು ಅವರ ಸ್ವಗ್ರಾಮಕ್ಕೆ ತೆರಳಿ ಅವರ ತೋಟದಲ್ಲಿ ಸುತ್ತಾಡಿದ್ದಾರೆ.

  ಚಿಕ್ಕಬಳ್ಳಾಪುರ ಜಿಲ್ಲೆ ಕೇಶವಾರ ಗ್ರಾಮಕ್ಕೆ ಭೇಟಿ

  ಚಿಕ್ಕಬಳ್ಳಾಪುರ ಜಿಲ್ಲೆ ಕೇಶವಾರ ಗ್ರಾಮಕ್ಕೆ ಭೇಟಿ

  ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ಕೇಶವಾರ ಗ್ರಾಮಕ್ಕೆ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಭೇಟಿ ನೀಡಿದ್ದರು. ಕೇಶವಾರ ಸಿನಿಮಾ ನಿರ್ದೇಶಕ ಆರ್.ಚಂದ್ರು ಅವರ ಹುಟ್ಟೂರು, ಅವರ ಕುಟುಂಬ ನೆಲೆಸಿರುವುದು ಇಲ್ಲಿಯೇ.

  ರೇಷ್ಮೆ, ದ್ರಾಕ್ಷಿ ತೋಟ ಸುತ್ತಾಡಿದ್ದಾರೆ

  ರೇಷ್ಮೆ, ದ್ರಾಕ್ಷಿ ತೋಟ ಸುತ್ತಾಡಿದ್ದಾರೆ

  ಆರ್.ಚಂದ್ರು ಅವರ ದ್ರಾಕ್ಷಿ, ರೇಷ್ಮೆ, ತರಕಾರಿ ತೋಟಗಳನ್ನು ಸುತ್ತಾಡಿದ ಶಿವರಾಜ್ ಕುಮಾರ್, ಅನಿತಾ ಬಹುಸಮಯ ಅಲ್ಲಿಯೇ ಕಳೆದು, ಚಂದ್ರು ಅವರ ಆತಿಥ್ಯ ಸ್ವೀಕರಿಸಿ ತೆರಳಿದ್ದಾರೆ.

  ರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್‌ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರುರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್‌ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರು

  ಅಭಿಮಾನಿಗಳು ಜಮಾಯಿಸಿದ್ದರು

  ಅಭಿಮಾನಿಗಳು ಜಮಾಯಿಸಿದ್ದರು

  ಶಿವರಾಜ್ ಕುಮಾರ್ ಭೇಟಿ ವಿಷಯ ತಿಳಿದು ಹಲವಾರು ಅಭಿಮಾನಿಗಳು ಜಮಾಯಿಸಿದ್ದರು. ಶಿವರಾಜ್ ಕುಮಾರ್ ಎಂದಿನಂತೆ ಸೌಜನ್ಯದಿಂದ ಅಭಿಮಾನಿಗಳೊಂದಿಗೆ ಫೋಟೊಕ್ಕೆ ಫೋಸು ನೀಡಿದ್ದಾರೆ.

  ಕೃಷಿಕರಾಗಿರುವ ಆರ್.ಚಂದ್ರು

  ಕೃಷಿಕರಾಗಿರುವ ಆರ್.ಚಂದ್ರು

  ಆರ್.ಚಂದ್ರು ಅವರು ಮೂಲತಃ ಕೃಷಿಕರು, ಈಗಲೂ ಅವರು ಕೃಷಿಯನ್ನು ಮಾಡುತ್ತಾರೆ. ತಾಜ್ ಮಹಲ್ ಸಿನಿಮಾ ಮೂಲಕ ನಿರ್ದೇಶಕರಾದ ಅವರು ಈಗ ಉಪೇಂದ್ರ ಅವರೊಂದಿಗೆ ಕಬ್ಜ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

  ಪುನೀತ್ ಜೊತೆ ಸಿನಿಮಾ ಯಾವಾಗ? ಶಿವರಾಜ್ ಕುಮಾರ್ ಕೊಟ್ಟರು ಉತ್ತರಪುನೀತ್ ಜೊತೆ ಸಿನಿಮಾ ಯಾವಾಗ? ಶಿವರಾಜ್ ಕುಮಾರ್ ಕೊಟ್ಟರು ಉತ್ತರ

  English summary
  Actor Shivraj Kumar visited director R Chandru's village with his wife Anitha Shivraj Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X