For Quick Alerts
  ALLOW NOTIFICATIONS  
  For Daily Alerts

  ನೀವು ನನ್ನ ಸ್ವಂತ ಅಣ್ಣನಂತೆ: ಹಿರಿಯ ನಟನಿಗೆ ಶಿವಣ್ಣ ಹುಟ್ಟುಹಬ್ಬ ಶುಭಾಶಯ

  |

  ಕನ್ನಡ ಚಿತ್ರರಂಗದ ದೊಡ್ಮನೆ ಎಂದರೆ ಪರಭಾಷೆ ಸಿನಿಮಾ ನಟರಿಗೂ ಗೌರವ ಮತ್ತು ರಾಜ್‌ಕುಮಾರ್ ಕುಟುಂಬದೊಂದಿಗೆ ಬಹುಕಾಲದ ನಂಟು.

  ಬಿಡುಗಡೆಯಾಯ್ತು ಚಿರುಗೆ ಬ್ರೇಕ್ ನೀಡಬೇಕಿದ್ದ ಸಿನಿಮಾದ ಹಾಡು. | Chiranjeevi Sarja | Hari Santosh

  ರಾಜ್‌ಕುಮಾರ್ ಇದ್ದಾಗ ಆರಂಭವಾದ ಈ ಪರಭಾಷಾ ನಟರು ಹಾಗೂ ಅವರ ಕುಟುಂಬದೊಂದಿಗಿನ ಬಾಂಧವ್ಯವನ್ನು ಅವರ ಮಕ್ಕಳಾದ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರು ಈಗಲೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.

  ಪುನೀತ್ ಜೊತೆ ಸಿನಿಮಾ ಯಾವಾಗ? ಶಿವರಾಜ್ ಕುಮಾರ್ ಕೊಟ್ಟರು ಉತ್ತರಪುನೀತ್ ಜೊತೆ ಸಿನಿಮಾ ಯಾವಾಗ? ಶಿವರಾಜ್ ಕುಮಾರ್ ಕೊಟ್ಟರು ಉತ್ತರ

  ಇದಕ್ಕೆ ತಾಜಾ ಉದಾಹರಣೆ, ಮೊನ್ನೆಯಷ್ಟೆ ಜೂ.ಎನ್‌ಟಿಆರ್ ಹುಟ್ಟುಹಬ್ಬಕ್ಕೆ ಪುನೀತ್ ರಾಜ್‌ಕುಮಾರ್ ಅವರು ಶುಭಾಶಯ ಕೋರಿದ್ದು, ಈಗ ಶಿವರಾಜ್ ಕುಮಾರ್ ಅವರು ತೆಲುಗಿನ ಹಿರಿಯ ನಟ ಬಾಲಕೃಷ್ಣ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

  ವಿಡಿಯೋ ಮೂಲಕ ಶುಭಾಶಯ

  ವಿಡಿಯೋ ಮೂಲಕ ಶುಭಾಶಯ

  ಬಾಲಕೃಷ್ಣ ಹುಟ್ಟುಹಬ್ಬಕ್ಕೆ ವಿಡಿಯೋ ಮೂಲಕ ಶುಭಾಶಯ ಕೋರಿರುವ ಶಿವರಾಜ್ ಕುಮಾರ್, ಬಾಲಕೃಷ್ಣ ಅವರನ್ನು ಅಣ್ಣನೆಂದು ಕರೆದು ಇಬ್ಬರ ಬಾಂಧವ್ಯದ ಝಲಕ್ ಅನ್ನು ಅಭಿಮಾನಿಗಳಿಗೆ ತೋರಿಸಿಕೊಟ್ಟಿದ್ದಾರೆ.

  ನೀವು ನನ್ನ ಪಾಲಿಗೆ ಅಣ್ಣ: ಶಿವಣ್ಣ

  ನೀವು ನನ್ನ ಪಾಲಿಗೆ ಅಣ್ಣ: ಶಿವಣ್ಣ

  'ಬ್ರದರ್ ಬಾಲಕೃಷ್ಣ ಅವರಿಗೆ 60 ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. ನೀವು ನನ್ನನ್ನು ಬ್ರದರ್ ಎಂದು ಕರೆಯುತ್ತೀರಿ, ನನಗೆ ಆಗ ಸ್ವಂತ ಅಣ್ಣನೇ ನನ್ನನ್ನು ತಮ್ಮನೆಂದು ಕರೆದಂತೆ ಭಾಸವಾಗುತ್ತದೆ. ಇದು ಬಾಯಿ ಮಾತಿಗೆ ಹೇಳುತ್ತಿಲ್ಲ' ಎಂದು ಶಿವರಾಜ್ ಕುಮಾರ್ ವಿಡಿಯೋದಲ್ಲಿ ಹೇಳಿದ್ದಾರೆ.

  ಓಂ ಸಿನಿಮಾಕ್ಕೆ 25 ವರ್ಷ: ಸಂಭ್ರಮಕ್ಕೆ ಅಡ್ಡಿಯಾದ ಟೆಕ್ನಿಕಲ್ ಪ್ರಾಬ್ಲಮ್!ಓಂ ಸಿನಿಮಾಕ್ಕೆ 25 ವರ್ಷ: ಸಂಭ್ರಮಕ್ಕೆ ಅಡ್ಡಿಯಾದ ಟೆಕ್ನಿಕಲ್ ಪ್ರಾಬ್ಲಮ್!

  ಮತ್ತೆ ನಿಮ್ಮೊಂದಿಗೆ ನಟಿಸುತ್ತೇನೆ: ಶಿವರಾಜ್‌ಕುಮಾರ್

  ಮತ್ತೆ ನಿಮ್ಮೊಂದಿಗೆ ನಟಿಸುತ್ತೇನೆ: ಶಿವರಾಜ್‌ಕುಮಾರ್

  'ನಾನು ನಿಮ್ಮ ನೂರನೇ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ನಿಮ್ಮ ಇನ್ನೂರನೇ ಸಿನಿಮಾದಲ್ಲಿಯೂ ಅತಿಥಿ ಪಾತ್ರದಲ್ಲಿ ನಟಿಸುತ್ತೇನೆ. ಅಷ್ಟು ಮಾತ್ರವಲ್ಲ ನಿಮ್ಮ ಜೊತೆ ಮುಖ್ಯಪಾತ್ರಧಾರಿಯಾಗಿಯೂ ನಟಿಸಬಹುದು' ಎಂದಿದ್ದಾರೆ ಶಿವರಾಜ್ ಕುಮಾರ್.

  ಹೆಚ್ಚಿನ ಕೀರ್ತಿ ನೀಡಲಿ: ಶಿವರಾಜ್‌ ಕುಮಾರ್

  ಹೆಚ್ಚಿನ ಕೀರ್ತಿ ನೀಡಲಿ: ಶಿವರಾಜ್‌ ಕುಮಾರ್

  'ಆ ದೇವರು ಬಾಲಕೃಷ್ಣ ಅವರಿಗೆ ಹೆಚ್ಚಿನ ಆರೋಗ್ಯ, ಆಯುಷ್ಯ ಮತ್ತು ಇನ್ನೂ ಹೆಚ್ಚಿನ ಕೀರ್ತಿ ನೀಡಲಿ' ಎಂದು ಶಿವರಾಜ್ ಕುಮಾರ್ ಅವರು ಹಾರೈಸಿದ್ದಾರೆ.

  ರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್‌ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರುರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್‌ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರು

  English summary
  Actor Shivraj Kumar birthday wish to actor Balakrishna. He said i may act in his film again.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X