twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಬಂದ ಶಿವರಾಜ್ ಕುಮಾರ್

    |

    ಕೊರೊನಾ ವೈರಸ್ ಪೀಡಿತರು ಅದೆಷ್ಟು ನೋವನುಭವಿಸುತ್ತಿದ್ದಾರೆಯೋ ಸಮನಾದ ನೋವನ್ನು, ಕೊರೊನಾ ದಿಂದ ಉಂಟಾಗಿರುವ ಸ್ಥಬ್ಧ ಸ್ಥಿತಿಯಿಂದ ಉಳಿದವರು ಅನುಭವಿಸುತ್ತಿದ್ದಾರೆ.

    ಎಷ್ಟೋ ಜನಕ್ಕೆ ಊರಿಗೆ ಹೋಗಲು ಆಗುತ್ತಿಲ್ಲ, ಅಂದಿನ ಅನ್ನ ದುಡಿದು ತಿನ್ನುವ ಕಾರ್ಮಿಕ ವರ್ಗಕ್ಕೆ ದಿನದ ಊಟಕ್ಕೂ ತತ್ವಾರವಾಗಿದೆ. ದಿನಗೂಲಿ ನೌಕರರ ಬಾಳು ಅಂಧಕಾರದಲ್ಲಿ ಮುಳುಗಿದೆ.

    ಇಂಥಹರ ನೆರವಿಗೆ ರಾಜ್ಯ ಸರ್ಕಾರ, ಸಂಘ-ಸಂಸ್ಥೆಗಳು, ಸಿನಿಮಾ ನಟ-ನಟಿಯರು ನಿಂತಿದ್ದಾರೆ. ಹಿರಿಯ ನಟ ಶಿವರಾಜ್ ಕುಮಾರ್ ಅವರು ಸಹ ದಿನಗೂಲಿ ನೌಕರರ ಸಹಾಯಕ್ಕೆಂದು ಮುಂದೆ ಬಂದಿದ್ದಾರೆ.

    ಸಮಸ್ಯೆಗೆ ಸಿಲುಕಿದವರಿಗೆ ಶಿವಣ್ಣ ನೆರವು

    ಸಮಸ್ಯೆಗೆ ಸಿಲುಕಿದವರಿಗೆ ಶಿವಣ್ಣ ನೆರವು

    ಹೌದು ಶಿವರಾಜ್ ಕುಮಾರ್ ಅವರು ದಿನಗೂಲಿ ನೌಕರರಿಗೆ, ಬಡವರಿಗೆ ಕೊರೊನಾ ಲಾಕ್ ಡೌನ್ ಸಮಯ ಸಮಸ್ಯೆಗೆ ಸಿಲುಕಿದವರಿಗೆ ಸಹಾಯ ಮಾಡಲೆಂದು ಮುಂದೆ ಬಂದಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವರ ಹಂಚಿಕೊಂಡಿದ್ದಾರೆ.

    ಆರ್ಟ್‌ ಆಫ್ ಲಿವಿಂಗ್ ಜೊತೆ ಕೈಜೋಡಿಸಿದ ಶಿವಣ್ಣ

    ಆರ್ಟ್‌ ಆಫ್ ಲಿವಿಂಗ್ ಜೊತೆ ಕೈಜೋಡಿಸಿದ ಶಿವಣ್ಣ

    ಶಿವರಾಜ್ ಕುಮಾರ್ ಅವರು ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಜೊತೆ ಸೇರಿ ದಿನಗೂಲಿ ನೌಕರರು, ಸಂಕಷ್ಟಕ್ಕೆ ಸಿಲುಕಿರುವವರು, ವಲಸಿಗರ ಸಹಾಯಕ್ಕೆ ನಿಂತಿದ್ದಾರೆ.

    ಕಷ್ಟದಲ್ಲಿರುವವರಿಗೆ ದಿನಸಿ-ತರಕಾರಿ ವಿತರಣೆ

    ಕಷ್ಟದಲ್ಲಿರುವವರಿಗೆ ದಿನಸಿ-ತರಕಾರಿ ವಿತರಣೆ

    ಕೊರೊನಾ ಲಾಕ್‌ಡೌನ್‌ ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ದಿನಸಿ, ತರಕಾರಿಗಳನ್ನು ತಲುಪಿಸುವ ಕಾರ್ಯವನ್ನು ಆರ್ಟ್ ಆಫ್ ಲಿವಿಂಗ್ ಮಾಡುತ್ತಿದ್ದು, ಈಗಾಗಲೇ ಮುಂಬೈ ಮತ್ತಿತರೆ ಕಡೆಗಳಲ್ಲಿ ಈ ಕೆಲಸ ಶುರು ಮಾಡಿದೆ. ರಾಜ್ಯದಲ್ಲಿ ಆರ್ಟ್‌ ಆಫ್ ಲಿವಿಂಗ್ ಜೊತೆ ಶಿವಣ್ಣ ಕೈಜೋಡಿಸಿದ್ದಾರೆ.

    ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ

    ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ

    ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಸಿನಿಮಾ ನಟರುಗಳು ಕೊರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಹಾಯ ಘೋಷಿಸಿದ್ದು ಕಡಿಮೆಯೇ ಆಗಿದೆ. ನಿರ್ದೇಶಕ ಪವನ್ ಕುಮಾರ್ ನೆರವಿಗೆ ಮನವಿ ಮಾಡಿ ಸುಮಾರು 6 ಲಕ್ಷ ಹಣ ಸಂಗ್ರಹಿಸಿ ಸಿನಿಮಾ ದಿನಗೂಲಿ ನೌಕರರಿಗೆ ಹಂಚುತಿದ್ದಾರೆ.

    English summary
    Actor Shivraj Kumar joins hand with Art of Living to help daily wagers who were in trouble in these coronavrirus lock down situation.
    Monday, March 30, 2020, 21:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X