'ಶಿವಣ್ಣ ಬಾಳಲಿ, ಶಿವಣ್ಣ ಬೆಳಗಲಿ' ಹೆಸರಿನಲ್ಲಿ ಅಭಿಮಾನೋತ್ಸವ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಳೆ ತಮ್ಮ 56ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಸರಳವಾಗಿ ಬರ್ತಡೇ ಆಚರಣೆ ಮಾಡಿಕೊಂಡಿದ್ದ ಶಿವರಾಜ್ ಕುಮಾರ್ ಈ ಬಾರಿ ಅಭಿಮಾನಿಗಳನ್ನ ಭೇಟಿ ಮಾಡಿ ಅವರ ಜೊತೆಯಲ್ಲೇ ಕೇಕ್ ಕತ್ತರಿಸಲಿದ್ದಾರೆ.
ಇಂದು ರಾತ್ರಿಯಿಂದಲೇ ಶಿವರಾಜ್ ಕುಮಾರ್ ಅವರ ಬೆಂಗಳೂರಿನಲ್ಲಿರುವ ನಿವಾಸದ ಬಳಿ ಅಭಿಮಾನಿಗಳು ಹಾಜರಾಗಿ ಮಧ್ಯರಾತ್ರಿಯಿಂದಲೇ ಬರ್ತಡೇ ಆಚರಣೆಯನ್ನು ಶುರು ಮಾಡಲಿದ್ದಾರೆ. ಇನ್ನು ಶಿವಣ್ಣ ಅಭಿನಯದ ಸಿನಿಮಾಗಳು, ಅಭಿನಯ ಮಾಡುತ್ತಿರುವ ಚಿತ್ರದ ಫೋಸ್ಟರ್ ಗಳು ನಾಳೆ ಬಿಡುಗಡೆ ಆಗಲಿದೆ.
ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿರುವ ಶಿವರಾಜ್ ಕುಮಾರ್ ಹುಟ್ಟುಹಬ್ಬ ಈ ವರ್ಷ ಎಷ್ಟು ಸ್ಪೆಷಲ್ ಆಗಿರುತ್ತೆ? ಅಭಿಮಾನಿಗಳ ತಯಾರಿ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ...

ಶಿವಣ್ಣನ ಅಭಿಮಾನೋತ್ಸವ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಶಿವಣ್ಣನ ಅಭಿಮಾನೋತ್ಸವ ಎನ್ನುವ ಹೆಸರಿನಲ್ಲಿ ಆಚರಣೆ ಮಾಡುತ್ತಿದ್ದಾರೆ. ಇದಕ್ಕಾಗಿ ವಾಟ್ಸ್ ಆಫ್ ಗೆ ಬಳಸಿಕೊಳ್ಳಲು ಕಾಮನ್ ಡಿಪಿ ಡಿಸೈನ್ ಮಾಡಿಸಿದ್ದಾರೆ.

ಹುಟ್ಟುಹಬ್ಬಕ್ಕಾಗಿ ಭರ್ಜರಿ ಕೇಕ್
ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕಾಗಿಯೇ ಅಭಿಮಾನಿಗಳೆಲ್ಲರೂ ಒಟ್ಟಿಗೆ ಸೇರಿ 125 ಕೆಜಿ ತೂಕದ ಕೇಕ್ ಅನ್ನು ಮಾಡಿಸುತ್ತಿದ್ದಾರೆ. 7 ರಿಂದ 20 ಅಡಿ ಎತ್ತರ ಇರಲಿದ್ಯಂತೆ ಈ ಕೇಕ್. ಕುರಬರಹಳ್ಳಿಯಲ್ಲಿ ಈಗಾಗಲೇ ಕೇಕ್ ತಯಾರಿ ಕೆಲಸ ಶುರುವಾಗಿದ್ದು ನಾಳೆ ಶಿವರಾಜ್ ಮನೆ ಅಂಗಳಕ್ಕೆ ಟ್ರಕ್ ಮೂಲಕ ಕೇಕ್ ತರಲಾಗುತ್ತಂತೆ.

ಅನ್ನದಾನ-ರಕ್ತದಾನ
ಪ್ರತಿ ವರ್ಷದಂತೆ ಈ ವರ್ಷವೂ ಶಿವರಾಜ್ ಕುಮಾರ್ ಮನೆಯ ಬಳಿ ಅನ್ನದಾನ, ರಕ್ತದಾನ ಹಾಗೂ ಸಿಹಿ ವಿತರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಅಭಿಮಾನಿಗಳು ಬಂದು ನೆಚ್ಚಿನ ಕಲಾವಿದನಿಗೆ ಶುಭಕೋರಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಹೊಸ ಸಿನಿಮಾಗಳ ಘೋಷಣೆ
ಇನ್ನು ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಎರಡರಿಂದ ಮೂರು ಹೊಸ ಚಿತ್ರಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ. ಇದರ ಜೊತೆಯಲ್ಲಿ ಟಗರು2 ಸಿನಿಮಾ ಬಗ್ಗೆ ಹೊಸ ಮಾಹಿತಿ ನೀಡುವ ಸಾಧ್ಯತೆಗಳಿವೆ.


Click it and Unblock the Notifications











