'ದಿ ವಿಲನ್' ಚಿತ್ರೀಕರಣ ಮುಗಿಸಿದ ಶಿವಣ್ಣ
Recommended Video

ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಮೊದಲ ಬಾರಿಗೆ ಒಟ್ಟಿಗೆ ಅಭಿನಯ ಮಾಡುತ್ತಿರುವ 'ದಿ ವಿಲನ್' ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಹಾಗಂತ ಸಿನಿಮಾ ಸಂಪೂರ್ಣವಾಗಿ ಮುಗಿದಿಲ್ಲ. ಹ್ಯಾಟ್ರಿಕ್ ಹೀರೋ ಮಾತ್ರ ತಮ್ಮ ಪಾಲಿನ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿದ್ದಾರೆ.
ನಿನ್ನೆಯಷ್ಟೇ ಶಿವಣ್ಣ ಶೂಟಿಂಗ್ ಮುಗಿಸಿರುವ ಖುಷಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಸಂಪೂರ್ಣ ತಂಡದ ಜೊತೆಯಲ್ಲಿ ಫೋಟೋ ತೆಗೆಯುವ ಮೂಲಕ 'ದಿ ವಿಲನ್' ಚಿತ್ರತಂಡ ಶಿವಣ್ಣನಿಗೆ ಸಂತಸದ ಬಿಳ್ಕೊಡುಗೆ ನೀಡಿದ್ದಾರೆ.

'ದಿ ವಿಲನ್' ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ. ಸಿ ಆರ್ ಮನೋಹರ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆಮಿ ಜಾಕ್ಸನ್ ಚಿತ್ರಲ್ಲಿ ನಾಯಕಿಯಾಗಿ ಮಿಂಚಿದ್ದು ಗಿರಿ ಗೌಡ ಕ್ಯಾಮೆರಾ ವರ್ಕ್ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

'ದಿ ವಿಲನ್' ಸಿನಿಮಾದ ಟೀಸರ್ ಹಾಗೂ ಆಡಿಯೋ ಆಗಷ್ಟ್ ನಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಸಾಕಷ್ಟು ಕುತೂಹಲ ಮೂಡಿಸಿರುವ ದಿ ವಿಲನ್ ಸಿನಿಮಾಗಾಗಿ ಸುದೀಪ್ ಹಾಗೂ ಶಿವಣ್ಣನ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.


Click it and Unblock the Notifications











