ಶಿವಣ್ಣನ ಮನೆಯಲ್ಲಿ ಡಬಲ್ ಖುಷಿಯ ಸಂಭ್ರಮ
Recommended Video

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಇಂದು ಎರಡೆರೆಡು ಸಂಭ್ರಮ. ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವಿಂದು. ಇಂದು( ಮೇ-19) ಶಿವರಾಜ್ ಕುಮಾರ್ ತಮ್ಮ 32ನೇ ವರ್ಷ ಮದುವೆ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
ಮತ್ತೊಂದು ವಿಶೇಷ ಅಂದರೆ ಕನ್ನಡ ಸಿನಿಮಾರಂಗದಲ್ಲಿ ದಾಖಲೆಯನ್ನು ಸೃಷ್ಟಿ ಮಾಡಿರುವ ಚಿತ್ರ ಓಂ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಮೂಡಿ ಬಂದ ಓಂ ಸಿನಿಮಾ ಬಿಡುಗಡೆ ಆಗಿ ಇಂದಿಗೆ 23 ವರ್ಷಗಳು ಕಳೆದು ಹೋಗಿವೆ.

ಇವತ್ತಿಗೂ ಕೂಡ ಒಳ್ಳೆಯ ಚಿತ್ರಗಳು ಬಿಡುಗಡೆ ಆಗದ ಸಂದರ್ಭದಲ್ಲಿ ಚಿತ್ರಮಂದಿರದ ಮಾಲೀಕರಿಗೆ ಖಾಲಿ ಇರುವ ಥಿಯೇಟರ್ ನಲ್ಲಿ ಭರ್ತಿ ಮಾಡುವುದು ಉತ್ತಮ ಅವಕಾಶ ಕೊಡುವುದು ಓಂ ಸಿನಿಮಾವೇ.

23 ವರ್ಷದ ಹಿಂದೆ ಇದೇ ದಿನ ಓಂ ಚಿತ್ರ ಬಿಡುಗಡೆ ಆಗಿತ್ತು. ಇದೇ ಖುಷಿಯಲ್ಲಿ ಇಂದಿನಿಂದ ಬೆಂಗಳೂರಿನ ಕೆಂಗೇರಿ ಸಮೀಪವಿರುವ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಯಾರದರೂ ಚಿತ್ರವನ್ನು ಮಿಸ್ ಮಾಡಿಕೊಂಡಿದ್ದರೆ. ಅಥವಾ ಮತ್ತೆ ಥಿಯೇಟರ್ ನಲ್ಲಿ ಸಿನಿಮಾ ನೋಡುವ ಆಸೆ ಇದ್ದರೆ, ಇಂದೇ ಓಂ ಚಿತ್ರವನ್ನ ನೋಡಬಹುದು.


Click it and Unblock the Notifications











