'ಇಂದ್ರಸೇನ'ನಾಗಿ ಭಿನ್ನ ಕತೆಯೊಂದಿಗೆ ಬರಲಿದ್ದಾರೆ ಶಿವರಾಜ್ ಕುಮಾರ್
ಲಾಕ್‌ಡೌನ್‌ನಿಂದಾಗಿ ಇಡೀಯ ಚಿತ್ರರಂಗವೇ ಸ್ಥಬ್ಧವಾಗಿದ್ದರೂ ಸಹ ಕನ್ನಡ ಚಿತ್ರರಂಗದ ಬ್ಯುಸಿ ನಟ ಶಿವರಾಜ್ ಕುಮಾರ್ ಅವರನ್ನು ಹುಡುಕಿಕೊಂಡು ಸಿನಿಮಾಗಳ ಮೇಲೆ ಸಿನಿಮಾಗಳು ಬರುತ್ತಲೇ ಇವೆ.
Recommended Video
ಹೌದು, ಶಿವರಾಜ್ ಕುಮಾರ್ ಲಾಕ್‌ಡೌನ್ ನಿಂದಾಗಿ ಮನೆಯಲ್ಲಿ ಉಳಿದಿದ್ದಾಗಲೇ ಹಲವಾರು ಕತೆಗಳನ್ನು ಕೇಳಿದ್ದಾರೆ, ಮತ್ತು ಕೆಲವಕ್ಕೆ ಸಮ್ಮತಿಯನ್ನೂ ಸೂಚಿಸಿದ್ದಾರೆ.
ಈಗಾಗಲೇ ಹಲವು ಸಿನಿಮಾಗಳನ್ನು ಕೈಯಲ್ಲಿಟ್ಟಿಕೊಂಡಿರುವ ಶಿವರಾಜ್ ಕುಮಾರ್ ಇದೀಗ ಮತ್ತೊಂದು ಹೊಸ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಸಾಮಾಜಿಕ ಸಮಸ್ಯೆಯನ್ನೇ ಕಥಾಹಂದರ ಹೊಂದಿರುವ ಸಿನಿಮಾ ಒಂದಕ್ಕೆ ಶಿವರಾಜ್‌ಕುಮಾರ್ ಎಸ್ ಎಂದಿದ್ದಾರೆ.

ಇಂದ್ರಸೇನಾ ಸಿನಿಮಾಕ್ಕೆ ಒಪ್ಪಿಗೆ
'ಇಂದ್ರಸೇನಾ' ಹೆಸರಿನ ಸಿನಿಮಾಕ್ಕೆ ಶಿವರಾಜ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ. ಈ ಸಿನಿಮಾವನ್ನು ಮುರಳಿ ಮೋಹನ್ ನಿರ್ದೇಶಿಸುತ್ತಿದ್ದಾರೆ. ನಾಗರಹಾವು. ಸಂತ, ಮಲ್ಲಿಕಾರ್ಜುನ ಸಿನಿಮಾಗಳನ್ನು ಈ ಮುಂಚೆ ನಿರ್ದೇಶಿಸಿದ್ದರು ಇವರು.

ಸಾಮಾಜಿಕ ಕಥಾಹಂದರ ಹೊಂದಿದ ಚಿತ್ರ
ಬ್ರಿಟೀಷರಿಂದ ಗಳಿಸಿದ ಸ್ವಾತಂತ್ರ್ಯವನ್ನು ಈಗ ನಮ್ಮವರೇ ಕಿತ್ತುಕೊಳ್ಳುತ್ತಿದ್ದಾರೆ, ಅದರಿಂದ ರಕ್ಷಿಸಲು ಯಾರು ಬರಬೇಕು ಎಂಬ ಒನ್‌ಲೈನರ್ ಇಟ್ಟುಕೊಂಡು ಕತೆ ಹೆಣೆದಿದ್ದಾರೆ ಉಪೇಂದ್ರ ಕ್ಯಾಂಪ್‌ನಲ್ಲಿದ್ದ ಮುರಳಿ ಮೋಹನ್.

ಕೆಲವು ಕತೆ ಕೇಳಿ ಮುಗಿಸಿದ್ದಾರೆ ಶಿವರಾಜ್ ಕುಮಾರ್
ಇದನ್ನು ಬಿಟ್ಟು ಶಿವರಾಜ್ ಕುಮಾರ್ ಅವರು ಈಗಾಗಲೇ ಆರ್‌ಡಿಎಕ್ಸ್ ಕತೆ ಕೇಳಿ ಮುಗಿಸಿದ್ದಾರೆ. ತೆಲುಗಿನ ರಾಮ್ ಧುಲಿಪುಡಿ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಜೊತೆ ಕರಗವನ್ನು ಮುನ್ನೆಲೆಯಲ್ಲಿಟ್ಟು ರಥಾವರ ಸಿನಿಮಾ ನಿರ್ದೇಶಕ ಕತೆಯೊಂದು ಹೆಣೆದಿದ್ದು ಅದರಲ್ಲಿಯೂ ನಟಿಸಲಿದ್ದಾರೆ.

ಎರಡು ರೀಮೇಕ್ ಸಿನಿಮಾದಲ್ಲಿ ನಟಿಸಲಿದ್ದಾರಾ?
ಇದರ ಜೊತೆಗೆ ಇನ್ನೂ ಎರಡು ರೀಮೇಕ್ ಸಿನಿಮಾಗಳಲ್ಲಿ ಶಿವಣ್ಣ ನಟಿಸುವ ಸಾಧ್ಯತೆ ಇದೆ. ತಮಿಳಿನ ಅಸುರನ್ ಮತ್ತು ಖೈದಿ ಸಿನಿಮಾಗಳಲ್ಲಿ ನಟಿಸಲು ಶಿವರಾಜ್ ಕುಮಾರ್ ಅವರನ್ನು ಕೇಳಲಾಗಿದೆಯಂತೆ.


Click it and Unblock the Notifications











