twitter
    For Quick Alerts
    ALLOW NOTIFICATIONS  
    For Daily Alerts

    ಶಿವರಾಜ್‌ ಕುಮಾರ್ ಸಿನಿಮಾ ನಿರ್ದೇಶಿಸಲು ಬಂದ ತೆಲುಗು ಪ್ರತಿಭೆ

    |

    ಕೊರೊನಾ ಲಾಕ್‌ಡೌನ್‌ನಿಂದಾಗಿ ಇಡೀಯ ಸಿನಿಮಾ ರಂಗವೇ ಸ್ಥಬ್ಧವಾಗಿದೆ. ಯಾವ ಚಿತ್ರೀಕರಣಗಳೂ ನಡೆಯುತ್ತಿಲ್ಲ. ಆದರೆ ಬ್ಯುಸಿ ಸ್ಟಾರ್ ಶಿವಣ್ಣ ಮಾತ್ರ ಹೊಸ ಕತೆಗಳನ್ನು ಕೇಳುತ್ತಲೇ ಇದ್ದಾರೆ.

    Recommended Video

    ಈ ವರ್ಷ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಶಿವಣ್ಣ ಏನು ಮಾಡುತ್ತಿದ್ದಾರೆ | Shivarajkumar | Raj kumar Birthday

    ಹೌದು, ಸಿನಿಮಾರಂಗದಲ್ಲಿ ದಶಕಗಳನ್ನು ಕಳೆದಿದ್ದರೂ ಸಹ ಚಂದನವನದ ಬ್ಯುಸಿ ಸ್ಟಾರ್ ಈಗಲೂ ಶಿವರಾಜ್ ಕುಮಾರ್. ಕೊರೊನಾ ಸಮಯದಲ್ಲೂ ಶಿವರಾಜ್ ಕುಮಾರ್ ಅವರನ್ನು ಹುಡುಕಿಕೊಂಡು ಸಿನಿಮಾಗಳು ಬರುತ್ತಿವೆ.

    ಹೊಸ ಸಿನಿಮಾವೊಂದರ ಕತೆಯನ್ನು ಶಿವರಾಜ್ ಕುಮಾರ್ ಫೈನಲ್ ಮಾಡಿದ್ದು, ಲಾಕ್‌ಡೌನ್ ಬಳಿಕ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಕುರಿತ ಅಧಿಕೃತ ಘೋಷಣೆ, ರಾಜ್‌ಕುಮಾರ್ ಹುಟ್ಟುಹಬ್ಬದಂದು ಹೊರಬೀಳುವ ಸಾಧ್ಯತೆ ಇದೆ.

    ಶೀವಣ್ಣ ಸಿನಿಮಾಕ್ಕೆ ತೆಲುಗು ನಿರ್ದೇಶಕ

    ಶೀವಣ್ಣ ಸಿನಿಮಾಕ್ಕೆ ತೆಲುಗು ನಿರ್ದೇಶಕ

    ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾವನ್ನು ತೆಲುಗಿನಿಂದ ಬಂದ ನಿರ್ದೇಶಕ ನಿರ್ದೇಶಿಸುತ್ತಿರುವುದು ವೈಶಿಷ್ಟ್ಯ. ತೆಲುಗಿನಲ್ಲಿ ಸಂಭಾಷಣೆಗಾರ, ಕತೆಗಾರ, ಸಹ ನಿರ್ಮಾಪಕರಾಗಿ ಖ್ಯಾತಿಗಳಿಸಿರುವ ರಾಮ್ ಧುಲಿಪುಡಿ ಮೊದಲ ಬಾರಿಗೆ ನಿರ್ದೇಶಕರಾಗಲಿದ್ದು, ಶಿವರಾಜ್ ಕುಮಾರ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

    ಯೋಧನ ಪಾತ್ರದಲ್ಲಿ ಶಿವರಾಜ್‌ ಕುಮಾರ್

    ಯೋಧನ ಪಾತ್ರದಲ್ಲಿ ಶಿವರಾಜ್‌ ಕುಮಾರ್

    ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಯೋಧನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಭಾವನಾತ್ಮಕ ವಿಚಾರಗಳೊಂದಿಗೆ ಪ್ರೀತಿಯನ್ನು ಎತ್ತಿಹಿಡಿಯುವ ಕಥಾಹಂದರ ಇದರಲ್ಲಿದೆ. ಕಾಶ್ಮೀರ, ಶಿವಮೊಗ್ಗ ಸೇರಿದಂತೆ ಅಮೆರಿಕದಲ್ಲೂ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.

    ಶ್ರೀಚರಣ್ ಪಕಲ ಸಂಗೀತ ನಿರ್ದೇಶನ

    ಶ್ರೀಚರಣ್ ಪಕಲ ಸಂಗೀತ ನಿರ್ದೇಶನ

    ಶ್ರೀಚರಣ್ ಪಕಲ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಕನ್ನಡದ ಖ್ಯಾತ ಛಾಯಾಗ್ರಾಹಕ ರವಿಕುಮಾರ್ ಸನಾ ಛಾಯಾಗ್ರಹಣ ಇರುವ ಈ ಚಿತ್ರವನ್ನು ಬಾಲಶ್ರೀರಾಂ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಮತ್ತು ನರಲ ಶ್ರೀನಿವಾಸ ರೆಡ್ಡಿ ಸೇರಿ ನಿರ್ಮಿಸುತ್ತಿದ್ದಾರೆ. ಕುಡ್ಡಿಪುಡಿ ವಿಜಯ್ ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

    ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ

    ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ

    ಸೆಪ್ಟೆಂಬರ್ ತಿಂಗಳಲ್ಲಿ ಆರಂಭಗೊಂಡು ಐವತ್ತೈದು ದಿನಗಳ ಕಾಲ ಚಿತ್ರೀಕರಣಗೊಳ್ಳಲಿರುವ ಈ ನೂತನ ಚಿತ್ರಕ್ಕೆ ಉಳಿದ ಕಲಾವಿದರ ಆಯ್ಕೆ ನಡೆಯುತ್ತಿದೆ. ಶೀರ್ಷಿಕೆ ಸೇರಿದಂತೆ ಇನ್ನೂ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರಬರಲಿದೆ.

    English summary
    Actor Shivraj Kumar signed new movie. Director will be Telugu talent Ram Dhulipudi .
    Thursday, April 23, 2020, 14:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X