For Quick Alerts
  ALLOW NOTIFICATIONS  
  For Daily Alerts

  ಕುಕ್ಕರಳ್ಳಿ ಕೆರೆಯಲ್ಲಿ ಶಿವಣ್ಣನ ವಾಕಿಂಗ್

  By Pavithra
  |

  ಡಾ ರಾಜ್ ಕುಮಾರ್ ಕುಟುಂಬಕ್ಕೂ ಮೈಸೂರಿಗೂ ಎಲ್ಲಿಲ್ಲದ ನಂಟು .ರಾಜ್ ಕುಮಾರ್ ಅವರ ಬಹುತೇಕ ಚಿತ್ರಗಳು ಮೈಸೂರಿನಲ್ಲಿ ಚಿತ್ರೀಕರಣವಾಗಿದೆ. ಅದಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ಅವರೇ ಮೈಸೂರಿಗೂ ಅವರ ಕುಟುಂಬಕ್ಕೂ ಇರುವ ನಂಟಿನ ಬಗ್ಗೆ ಮಾತನಾಡಿದ್ದರು .

  ಇವುಗಳ ಜತೆಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರ ಮನೆಗೆ ಮೈಸೂರಿನ ಹುಡುಗಿಯನ್ನೇ ಸೊಸೆಯಾಗಿ ಮಾಡಿಕೊಳ್ಳುತ್ತಿದ್ದಾರೆ. ಇವುಗಳ ಮಧ್ಯೆ ಶಿವರಾಜ್ ಕುಮಾರ್ ಮೈಸೂರಿಗೆ ಬಂದಾಗಲೆಲ್ಲಾ ಒಂದು ಸ್ಥಳಕ್ಕೆ ಭೇಟಿ ಕೊಟ್ಟೇ ಕೊಡುತ್ತಾರೆ. ಇಷ್ಟೇ ಕೆಲಸಗಳ ಮಧ್ಯದಲ್ಲಿಯೂ ಈ ಸ್ಥಳಕ್ಕೆ ಭೇಟಿ ಕೊಡದೆ ಶಿವರಾಜ್ ಕುಮಾರ್ ಬೆಂಗಳೂರಿಗೆ ಹಿಂದಿರುಗುವುದಿಲ್ಲ.

  ಸಾಮಾನ್ಯ ಜನರಿಗೆ ಮಾತ್ರವಲ್ಲದೆ ಸಿನಿಮಾಗಳಲ್ಲೂ ಕೂಡ ಫೇಮಸ್ ಆಗಿರುವಂತಹ ಕುಕ್ಕರಹಳ್ಳಿ ಕೆರೆಗೆ ಶಿವರಾಜ್ ಕುಮಾರ್ ಪ್ರತಿ ಬಾರಿ ಮೈಸೂರಿಗೆ ಬಂದಾಗ ಭೇಟಿ ನೀಡುತ್ತಾರೆ .ಬೆಳ್ಳಂಬೆಳಗ್ಗೆ ಸ್ನೇಹಿತರ ಜೊತೆಯಲ್ಲಿ ಕುಕ್ಕರಹಳ್ಳಿ ಕೆರೆಗೆ ಭೇಟಿ ಕೊಟ್ಟು ಕೆಲ ಸಮಯ ವಾಕ್ ಕೂಡ ಮಾಡುತ್ತಾರೆ .

  ಶಿವರಾಜ್ ಕುಮಾರ್ ಇತ್ತೀಚೆಗಷ್ಟೆ ಚಿತ್ರೀಕರಣಕ್ಕಾಗಿ ಮೈಸೂರಿಗೆ ಭೇಟಿ ನೀಡಿದ್ದರೂ ಬೆಳ್ಳಂಬೆಳಗ್ಗೆ ಸ್ನೇಹಿತರ ಜೊತೆ ಕುಕ್ಕರಹಳ್ಳಿ ಕೆರೆಯಲ್ಲಿ ವಾಕಿಂಗ್ ಮಾಡುತ್ತಿರುವ ಫೋಟೋ ವಿಡಿಯೋಗಳು ವೈರಲ್ ಆಗಿದೆ. ಕೆಲವೇ ತಿಂಗಳಲ್ಲಿ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಮಗ ಯುವರಾಜ್ ಕುಮಾರ್ ಅವರ ನಿಶ್ಚಿತಾರ್ಥಕ್ಕೆ ಬಂದಾಗಲೂ ಕೂಡ ಶಿವರಾಜ್ ಕುಮಾರ್ ಕುಕ್ಕರಹಳ್ಳಿ ಕೆರೆಯನ್ನು ಒಂದು ಸುತ್ತು ಹಾಕಿದ್ದರು.

  Shivraj Kumar visits Kukkarahalli Lake whenever he visits Mysore

  ಸದ್ಯ ಕವಚ ಸಿನಿಮಾದ ಚಿತ್ರೀಕರಣ ಮೈಸೂರಿನ ಸುತ್ತ ಮುತ್ತಾ ನಡೆಯುತ್ತಿದ್ದು ಶಿವಣ್ಣ ಶೂಟಿಂಗ್ ಗೂ ಮುನ್ನ ಕುಕ್ಕರಹಳ್ಳಿ ಕೆರೆಯನ್ನು ಒಂದು ಸುತ್ತು ಹಾಕಿ ಸ್ನೇಹಿತರ ಜೊತೆ ಎಂಜಾಯ್ ಮಾಡಿದ್ದಾರೆ.

  English summary
  Kannada actor Shivraj Kumar visits Kukkarahalli Lake whenever he visits Mysore. The shooting of Shivarajkumar's Kavacha film is now being shot around Mysore

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X