'ಓಂ' ಸಿನಿಮಾಕ್ಕೆ ಮೊದಲ ಆಯ್ಕೆ ಶಿವರಾಜ್ ಕುಮಾರ್ ಆಗಿರಲಿಲ್ಲ!

ಕನ್ನಡ ಸಿನಿಮಾ ಉದ್ಯಮದಲ್ಲಿ ಟ್ರೆಂಡ್ ಸೆಟ್ಟರ್ ಸಿನಿಮಾ 'ಓಂ'. ಕನ್ನಡ ಸಿನಿಮಾದಲ್ಲಿ ರೌಡಿಸಂ ಕತೆಗಳು ಹೆಚ್ಚಾಗಲು ಹಾಗೂ ಕತೆ ಹೇಳುವ ತಂತ್ರ ಬದಲಾಗಲು ಮುಖ್ಯ ಕಾರಣ ಈ ಸಿನಿಮಾ.

Recommended Video

'ಓಂ' ಚಿತ್ರದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು | 25 Years for OM | Shivarajkumar | Upendra

ಓಂ ಸಿನಿಮಾ ಹಲವು ಹೊಸತನಗಳಿಗೆ ನಾಂದಿಯಾಯಿತು. ಶಿವರಾಜ್ ಕುಮಾರ್ ಅವರಿಗಂತೂ ಹೊಚ್ಚ ಹೊಸ ಲುಕ್ ಅನ್ನೇ ನೀಡಿಬಿಟ್ಟಿತು ಈ ಸಿನಿಮಾ. ಓಂ ನಿಂದ ಪ್ರಾರಂಭವಾದ ರೌಡಿ ಲುಕ್ ಇನ್ನಾದರೂ ಶಿವಣ್ಣನನ್ನು ಬಿಟ್ಟು ಹೋಗಿಲ್ಲ.

ಶಿವರಾಜ್‌ ಕುಮಾರ್ ವೃತ್ತಿ ಜೀವನದಲ್ಲೇ ದೊಡ್ಡ ಹಿಟ್ ಆದ 'ಓಂ' ಸಿನಿಮಾದ ನಾಯಕ ಸತ್ಯ ಪಾತ್ರಕ್ಕೆ ಮೊದಲ ಆಯ್ಕೆ ಶಿವರಾಜ್ ಕುಮಾರ್ ಆಗಿರಲಿಲ್ಲವಂತೆ.

ಕುಮಾರ್ ಗೋವಿಂದ್ ಮೊದಲ ಆಯ್ಕೆ

ಕುಮಾರ್ ಗೋವಿಂದ್ ಮೊದಲ ಆಯ್ಕೆ

ಹೌದು, ಓಂ ಸಿನಿಮಾಕ್ಕೆ ಶಿವರಾಜ್ ಕುಮಾರ್ ಮೊದಲ ಆಯ್ಕೆ ಆಗಿರಲಿಲ್ಲ. ಓಂ ನಿರ್ದೇಶಕ ಉಪೇಂದ್ರ ಅವರು ಕುಮಾರ್ ಗೋವಿಂದ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಸಿನಿಮಾ ಶುರುವಾಗುವ ಕೆಲವೇ ದಿನಗಳ ಮುಂಚೆ ಆಯ್ಕೆ ಬದಲಾಯಿತು.

ಉಪೇಂದ್ರ-ಕುಮಾರ್ ಗೋವಿಂದ್ ನಡುವೆ ಸಣ್ಣ ಮನಸ್ತಾಪ

ಉಪೇಂದ್ರ-ಕುಮಾರ್ ಗೋವಿಂದ್ ನಡುವೆ ಸಣ್ಣ ಮನಸ್ತಾಪ

ಕುಮಾರ್ ಗೋವಿಂದ್ ನಾಯಕರಾಗಿದ್ದ ಶ್ ಸಿನಿಮಾ ಆಗಷ್ಟೆ ಸೂಪರ್ ಹಿಟ್ ಆಗಿತ್ತು. ಹಾಗಾಗಿ ಉಪೇಂದ್ರ ಅವರು ಕುಮಾರ್ ಗೋವಿಂದ್ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಿದ್ದರು. ಆದರೆ ಸಿನಿಮಾ ಸೆಟ್ಟೇರಲು ಕೆಲವೇ ದಿನ ಇದ್ದಂತೆ, ಉಪೇಂದ್ರ ಹಾಗೂ ಕುಮಾರ್ ಗೋವಿಂದ್ ನಡುವೆ ಸಣ್ಣ ತಕರಾರು ಏರ್ಪಟ್ಟಿತು.

ಉಪೇಂದ್ರ ಅವರನ್ನು ರಾಜ್‌ಕುಮಾರ್ ಬಳಿ ಕರೆತಂದರು

ಉಪೇಂದ್ರ ಅವರನ್ನು ರಾಜ್‌ಕುಮಾರ್ ಬಳಿ ಕರೆತಂದರು

ಉಪೇಂದ್ರ ಪ್ರತಿಭೆ ಗಮನಿಸಿದ್ದ ಹೊನ್ನವಳ್ಳಿ ಕೃಷ್ಣ ಮತ್ತು ಗೌರಿಶಂಕರ್, ಉಪೇಂದ್ರ ಅವರನ್ನು ರಾಜ್‌ಕುಮಾರ್ ಅವರ ಬಳಿ ಕರೆದೊಯ್ದರು. ಅದರಂತೆ ರಾಜ್‌ಕುಮಾರ್ ಹಾಗೂ ವರದಣ್ಣ ಕತೆ ಕೇಳಿ, ಓಕೆ ಎಂದರು. ಹಾಗೆ ಕುಮಾರ್ ಬಂಗಾರಪ್ಪ ಮಾಡಬೇಕಾಗಿದ್ದ ಸತ್ಯ ಪಾತ್ರ ಶಿವರಾಜ್ ಕುಮಾರ್ ಪಾಲಾಯಿತು.

ಸತ್ಯ ಪಾತ್ರಕ್ಕೆ ಜೀವ ತುಂಬಿದ ಶಿವರಾಜ್ ಕುಮಾರ್

ಸತ್ಯ ಪಾತ್ರಕ್ಕೆ ಜೀವ ತುಂಬಿದ ಶಿವರಾಜ್ ಕುಮಾರ್

ಆಮೇಲೆ ನಡೆದಿದ್ದೆಲ್ಲಾ ಇತಿಹಾಸ. ಶಿವರಾಜ್ ಕುಮಾರ್ ಅವರು ಸತ್ಯ ಪಾತ್ರಕ್ಕೆ ಜೀವ ತುಂಬಿದರು. ಓಂ ಸಿನಿಮಾದ ಪಾತ್ರಕ್ಕೆ ಹಲವು ಪ್ರಶಸ್ತಿಗಳು ಶಿವಣ್ಣ ಅವರನ್ನು ಹುಡುಕುಕಿಕೊಂಡು ಬಂದವು. ಫಿಲ್ಮ್‌ಫೇರ್ ಅವಾರ್ಡ್, ಕರ್ನಾಟಕ ರಾಜ್ಯ ಪ್ರಶಸ್ತಿ, ಹೀರೋ ಹೊಂಡಾ ಎಕ್ಸ್‌ಪ್ರೆಸ್ ಅವಾರ್ಡ್ ಅವರ ಪಾಲಾದವು.

More from Filmibeat

English summary
Actor Shivraj Kumar was not the first choice for the movie 'Om'. Upendra wanted to do the film with Kumar Bangarappa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X