»   » ಶಿವರಾಜ್‌ಕುಮಾರ್‌ ಇದೇ ಜುಲೈ 12ರಂದು 40ನೇ ವಯಸ್ಸಿಗೆ ಅಡಿಯಿಡುತ್ತಿದ್ದಾರೆ. ಸದಾಶಿವ ನಗರದ ಅವರ ಮನೆ ಮುಂದೆ ಈ ಸಂದರ್ಭದ ಆಚರಣೆಗೆ ಸಿದ್ಧತೆಗಳು ನಡೆದಿವೆ. ಮೊನ್ನೆಯಷ್ಟೇ ರಾಜ್‌ಕುಮಾರ್‌ ಅವರ 72ನೆಯ ಹುಟ್ಟುಹಬ್ಬವನ್ನು ಅಷ್ಟೇ ಕೇಜಿ ತೂಕದ ಕೇಕ್‌ನೊಂದಿಗೆ ಆಚರಿಸಿದ್ದ ದಕ್ಷಿಣ ವಲಯ ರಾಜ್‌ಕುಮಾರ್‌ ಅಭಿಮಾನಿಗಳ ಬಳಗ ಶಿವರಾಜ್‌ ಕುಮಾರ್‌ ಹುಟ್ಟುಹಬ್ಬವನ್ನು ಆಚರಿಸುವ ಹೊಣೆ ಹೊತ್ತುಕೊಂಡಿದೆ. ಹುಟ್ಟು ಹಬ್ಬವೆಂದರೆ ಕೇಕ್‌ ಕತ್ತರಿಸಿ ಮೇಣದ ಬತ್ತಿ ಆರಿಸುವಲ್ಲಿಗೆ ಮುಗಿದುಹೊಗಬಾರದು ಎನ್ನುವುದು ಈ ಅಭಿಮಾನಿ ಬಳಗದ ಉದ್ದೇಶ. ಈ ಕಾರಣದಿಂದಲೇ ಈ ಬಾರಿ ಅಭಿಮಾನಿಗಳು ಬೇರೆಯೇ ರೀತಿಯ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಈ ಮೂಲಕ ಸಿನಿಮಾದಾಚೆಗೂ ಒಬ್ಬನ ಹುಟ್ಟು ಹಬ್ಬದ ವ್ಯಾಪ್ತಿ ವಿಸ್ತರಿಸಬಹುದು ಅನ್ನುವುದನ್ನು ಸಾಬೀತು ಪಡಿಸುವ ಆಸೆ ಅವರದು. ಉದಾಹರಣೆಗೆ ಇತ್ತೀಚೆಗೆ ನಾಡಿನ ಜನರ ಗಮನ ಸೆಳೆದಿದ್ದ ಶ್ರೀರಂಗ ಪಟ್ಟಣದ ಹಂಗರ ಹಳ್ಳಿಯ ಜೀತದಾಳುಗಳ ದಾರುಣ ಕತೆಯನ್ನು ಶಿವಣ್ಣ ಅಭಿಮಾನಿಗಳು ಓದಿದ್ದಾರೆ. ಅಲ್ಲಿಂದ ವಿಮುಕ್ತರಾದ ಜನರ ವಿಳಾಸ ಸಂಗ್ರಹಿಸಿದ್ದಾರೆ. ಜುಲೈ 12ರಂದು ಶಿವರಾಜ್‌ ಸಮ್ಮುಖದಲ್ಲಿ ಅವರಿಗೆ ಒಂದು ನಿವೇಶನ ಮತ್ತು ಮನೆ ಕಟ್ಟುವುದಕ್ಕಾಗುವಷ್ಟು ಮೊತ್ತವನ್ನು ಅಭಿಮಾನಿಗಳು ನೀಡಲಿದ್ದಾರಂತೆ. ಅದೇ ರೀತಿ ಕಾರ್ಪೊರೇಷನ್‌ ಸ್ಕೂಲ್‌ ವಿದ್ಯಾರ್ಥಿನಿ ಶೈಲಶ್ರೀಗೆ ನಗದು ಬಹುಮಾನ ನೀಡುವ ಯೋಜನೆಯೂ ಇದೆ. ಇವೆಲ್ಲಾ ಆಯಾ ಕಾಲದ, ಸಂದರ್ಭದ ಬೆಳವಣಿಗೆಗಳಿಗೆ ಅಭಿಮಾನಿ ಸಂಘ ಸ್ಪಂದಿಸಬಹುದು ಎನ್ನುವುದಕ್ಕೆ ಸೂಚನೆ. ಅದಿರಲಿ, ನಲ್ವತ್ತರ ಹೊಸಿಲಿನಲ್ಲಿ ರುವ ಶಿವರಾಜ್‌ ಅವರ ವೃತ್ತಿ ಬದುಕೇ ಈಗ ಸುಸ್ಥಿತಿಯಲ್ಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅವರ ಎಂಟು ಚಿತ್ರಗಳು ಸತತವಾಗಿ ಸೋಲುಂಡಿವೆ. ಹಾಗಾಗಿ ಅಪರೂಪಕ್ಕೆ ‘ಪ್ರೀತ್ಸೆ’ ಚಿತ್ರ ಹಿಟ್‌ ಆದರೂ ಅದರ ಕ್ರೆಡಿಟ್‌ ಉಪೇಂದ್ರರಿಗೆ ಹೋಯಿತು. ಈಗ ಪ್ರದರ್ಶಿತವಾಗುತ್ತಿರುವ ದೇವರ ಮಗನೂ ಜಾರು ಹಾದಿಯಲ್ಲೇ ಇದ್ದಾನೆ. ಬಳಿ ಬಂದವರಿಗೆಲ್ಲಾ ಕಾಲ್‌ ಶೀಟ್‌ ಕೊಡುವ ಶಿವರಾಜ್‌ ಕುಮಾರ್‌ ಔದಾರ್ಯದಿಂದಲೇ ಇಂಥ ಅಪಘಾತಗಳಾಗುತ್ತಿವೆ ಅನ್ನುವ ಮಾತು ಕೇಳಿ ಬರುತ್ತಿದೆ. ವಿಚಿತ್ರವೆಂದರೆ ಚಿತ್ರಗಳು ಸೋತರೂ ಶಿವಣ್ಣಂಗೆ ಬೇಡಿಕೆ ಕಡಿಮೆಯಾಗಿಲ್ಲ. ಆದರೆ ಒಬ್ಬ ಸ್ಟಾರ್‌ ವರ್ಷಕ್ಕೊಂದು ಹಿಟ್‌ ಚಿತ್ರ ಕೊಡದಿದ್ದರೆ ಅದು ಅಪಾಯದ ಸೂಚನೆ. ನಾನಾ ಥರದ ಪಾತ್ರಗಳನ್ನು ಮಾಡಿ ಇನ್ನೇನು ಮಾಡಲಿ ಎಂಬ ಗೊಂದಲದಲ್ಲಿರುವ ಶಿವರಾಜ್‌ಗೆ ಈಗ ಒಬ್ಬ ಒಳ್ಳೇ ನಿರ್ದೇಶಕನ ಅಗತ್ಯವಿದೆ. ನಲುವತ್ತು ದಾಟಿದ ಮೇಲೆ ನಟನೊಬ್ಬ ಮೆಚ್ಯೂರ್ಡ್‌ ಪಾತ್ರಗಳತ್ತ ಒಲವು ತೋರುತ್ತಾನೆ. ಶಿವರಾಜ್‌ ಈಗಾಗಲೇ ಅಂಥಾ ಪಾತ್ರಗಳನ್ನು ಮಾಡಿದ್ದಾಗಿದೆ. ಹಾಗಿದ್ದಾಗ ಮುಂದೇನು ?ಮುಖಪುಟ / ಸ್ಯಾಂಡಲ್‌ವುಡ್‌

ಶಿವರಾಜ್‌ಕುಮಾರ್‌ ಇದೇ ಜುಲೈ 12ರಂದು 40ನೇ ವಯಸ್ಸಿಗೆ ಅಡಿಯಿಡುತ್ತಿದ್ದಾರೆ. ಸದಾಶಿವ ನಗರದ ಅವರ ಮನೆ ಮುಂದೆ ಈ ಸಂದರ್ಭದ ಆಚರಣೆಗೆ ಸಿದ್ಧತೆಗಳು ನಡೆದಿವೆ. ಮೊನ್ನೆಯಷ್ಟೇ ರಾಜ್‌ಕುಮಾರ್‌ ಅವರ 72ನೆಯ ಹುಟ್ಟುಹಬ್ಬವನ್ನು ಅಷ್ಟೇ ಕೇಜಿ ತೂಕದ ಕೇಕ್‌ನೊಂದಿಗೆ ಆಚರಿಸಿದ್ದ ದಕ್ಷಿಣ ವಲಯ ರಾಜ್‌ಕುಮಾರ್‌ ಅಭಿಮಾನಿಗಳ ಬಳಗ ಶಿವರಾಜ್‌ ಕುಮಾರ್‌ ಹುಟ್ಟುಹಬ್ಬವನ್ನು ಆಚರಿಸುವ ಹೊಣೆ ಹೊತ್ತುಕೊಂಡಿದೆ. ಹುಟ್ಟು ಹಬ್ಬವೆಂದರೆ ಕೇಕ್‌ ಕತ್ತರಿಸಿ ಮೇಣದ ಬತ್ತಿ ಆರಿಸುವಲ್ಲಿಗೆ ಮುಗಿದುಹೊಗಬಾರದು ಎನ್ನುವುದು ಈ ಅಭಿಮಾನಿ ಬಳಗದ ಉದ್ದೇಶ. ಈ ಕಾರಣದಿಂದಲೇ ಈ ಬಾರಿ ಅಭಿಮಾನಿಗಳು ಬೇರೆಯೇ ರೀತಿಯ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಈ ಮೂಲಕ ಸಿನಿಮಾದಾಚೆಗೂ ಒಬ್ಬನ ಹುಟ್ಟು ಹಬ್ಬದ ವ್ಯಾಪ್ತಿ ವಿಸ್ತರಿಸಬಹುದು ಅನ್ನುವುದನ್ನು ಸಾಬೀತು ಪಡಿಸುವ ಆಸೆ ಅವರದು. ಉದಾಹರಣೆಗೆ ಇತ್ತೀಚೆಗೆ ನಾಡಿನ ಜನರ ಗಮನ ಸೆಳೆದಿದ್ದ ಶ್ರೀರಂಗ ಪಟ್ಟಣದ ಹಂಗರ ಹಳ್ಳಿಯ ಜೀತದಾಳುಗಳ ದಾರುಣ ಕತೆಯನ್ನು ಶಿವಣ್ಣ ಅಭಿಮಾನಿಗಳು ಓದಿದ್ದಾರೆ. ಅಲ್ಲಿಂದ ವಿಮುಕ್ತರಾದ ಜನರ ವಿಳಾಸ ಸಂಗ್ರಹಿಸಿದ್ದಾರೆ. ಜುಲೈ 12ರಂದು ಶಿವರಾಜ್‌ ಸಮ್ಮುಖದಲ್ಲಿ ಅವರಿಗೆ ಒಂದು ನಿವೇಶನ ಮತ್ತು ಮನೆ ಕಟ್ಟುವುದಕ್ಕಾಗುವಷ್ಟು ಮೊತ್ತವನ್ನು ಅಭಿಮಾನಿಗಳು ನೀಡಲಿದ್ದಾರಂತೆ. ಅದೇ ರೀತಿ ಕಾರ್ಪೊರೇಷನ್‌ ಸ್ಕೂಲ್‌ ವಿದ್ಯಾರ್ಥಿನಿ ಶೈಲಶ್ರೀಗೆ ನಗದು ಬಹುಮಾನ ನೀಡುವ ಯೋಜನೆಯೂ ಇದೆ. ಇವೆಲ್ಲಾ ಆಯಾ ಕಾಲದ, ಸಂದರ್ಭದ ಬೆಳವಣಿಗೆಗಳಿಗೆ ಅಭಿಮಾನಿ ಸಂಘ ಸ್ಪಂದಿಸಬಹುದು ಎನ್ನುವುದಕ್ಕೆ ಸೂಚನೆ. ಅದಿರಲಿ, ನಲ್ವತ್ತರ ಹೊಸಿಲಿನಲ್ಲಿ ರುವ ಶಿವರಾಜ್‌ ಅವರ ವೃತ್ತಿ ಬದುಕೇ ಈಗ ಸುಸ್ಥಿತಿಯಲ್ಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅವರ ಎಂಟು ಚಿತ್ರಗಳು ಸತತವಾಗಿ ಸೋಲುಂಡಿವೆ. ಹಾಗಾಗಿ ಅಪರೂಪಕ್ಕೆ ‘ಪ್ರೀತ್ಸೆ’ ಚಿತ್ರ ಹಿಟ್‌ ಆದರೂ ಅದರ ಕ್ರೆಡಿಟ್‌ ಉಪೇಂದ್ರರಿಗೆ ಹೋಯಿತು. ಈಗ ಪ್ರದರ್ಶಿತವಾಗುತ್ತಿರುವ ದೇವರ ಮಗನೂ ಜಾರು ಹಾದಿಯಲ್ಲೇ ಇದ್ದಾನೆ. ಬಳಿ ಬಂದವರಿಗೆಲ್ಲಾ ಕಾಲ್‌ ಶೀಟ್‌ ಕೊಡುವ ಶಿವರಾಜ್‌ ಕುಮಾರ್‌ ಔದಾರ್ಯದಿಂದಲೇ ಇಂಥ ಅಪಘಾತಗಳಾಗುತ್ತಿವೆ ಅನ್ನುವ ಮಾತು ಕೇಳಿ ಬರುತ್ತಿದೆ. ವಿಚಿತ್ರವೆಂದರೆ ಚಿತ್ರಗಳು ಸೋತರೂ ಶಿವಣ್ಣಂಗೆ ಬೇಡಿಕೆ ಕಡಿಮೆಯಾಗಿಲ್ಲ. ಆದರೆ ಒಬ್ಬ ಸ್ಟಾರ್‌ ವರ್ಷಕ್ಕೊಂದು ಹಿಟ್‌ ಚಿತ್ರ ಕೊಡದಿದ್ದರೆ ಅದು ಅಪಾಯದ ಸೂಚನೆ. ನಾನಾ ಥರದ ಪಾತ್ರಗಳನ್ನು ಮಾಡಿ ಇನ್ನೇನು ಮಾಡಲಿ ಎಂಬ ಗೊಂದಲದಲ್ಲಿರುವ ಶಿವರಾಜ್‌ಗೆ ಈಗ ಒಬ್ಬ ಒಳ್ಳೇ ನಿರ್ದೇಶಕನ ಅಗತ್ಯವಿದೆ. ನಲುವತ್ತು ದಾಟಿದ ಮೇಲೆ ನಟನೊಬ್ಬ ಮೆಚ್ಯೂರ್ಡ್‌ ಪಾತ್ರಗಳತ್ತ ಒಲವು ತೋರುತ್ತಾನೆ. ಶಿವರಾಜ್‌ ಈಗಾಗಲೇ ಅಂಥಾ ಪಾತ್ರಗಳನ್ನು ಮಾಡಿದ್ದಾಗಿದೆ. ಹಾಗಿದ್ದಾಗ ಮುಂದೇನು ?ಮುಖಪುಟ / ಸ್ಯಾಂಡಲ್‌ವುಡ್‌

Posted By:
Subscribe to Filmibeat Kannada

ಶಿವರಾಜ್‌ಕುಮಾರ್‌ ಇದೇ ಜುಲೈ 12ರಂದು 40ನೇ ವಯಸ್ಸಿಗೆ ಅಡಿಯಿಡುತ್ತಿದ್ದಾರೆ. ಸದಾಶಿವ ನಗರದ ಅವರ ಮನೆ ಮುಂದೆ ಈ ಸಂದರ್ಭದ ಆಚರಣೆಗೆ ಸಿದ್ಧತೆಗಳು ನಡೆದಿವೆ. ಮೊನ್ನೆಯಷ್ಟೇ ರಾಜ್‌ಕುಮಾರ್‌ ಅವರ 72ನೆಯ ಹುಟ್ಟುಹಬ್ಬವನ್ನು ಅಷ್ಟೇ ಕೇಜಿ ತೂಕದ ಕೇಕ್‌ನೊಂದಿಗೆ ಆಚರಿಸಿದ್ದ ದಕ್ಷಿಣ ವಲಯ ರಾಜ್‌ಕುಮಾರ್‌ ಅಭಿಮಾನಿಗಳ ಬಳಗ ಶಿವರಾಜ್‌ ಕುಮಾರ್‌ ಹುಟ್ಟುಹಬ್ಬವನ್ನು ಆಚರಿಸುವ ಹೊಣೆ ಹೊತ್ತುಕೊಂಡಿದೆ.

ಹುಟ್ಟು ಹಬ್ಬವೆಂದರೆ ಕೇಕ್‌ ಕತ್ತರಿಸಿ ಮೇಣದ ಬತ್ತಿ ಆರಿಸುವಲ್ಲಿಗೆ ಮುಗಿದುಹೊಗಬಾರದು ಎನ್ನುವುದು ಈ ಅಭಿಮಾನಿ ಬಳಗದ ಉದ್ದೇಶ. ಈ ಕಾರಣದಿಂದಲೇ ಈ ಬಾರಿ ಅಭಿಮಾನಿಗಳು ಬೇರೆಯೇ ರೀತಿಯ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಈ ಮೂಲಕ ಸಿನಿಮಾದಾಚೆಗೂ ಒಬ್ಬನ ಹುಟ್ಟು ಹಬ್ಬದ ವ್ಯಾಪ್ತಿ ವಿಸ್ತರಿಸಬಹುದು ಅನ್ನುವುದನ್ನು ಸಾಬೀತು ಪಡಿಸುವ ಆಸೆ ಅವರದು.

ಉದಾಹರಣೆಗೆ ಇತ್ತೀಚೆಗೆ ನಾಡಿನ ಜನರ ಗಮನ ಸೆಳೆದಿದ್ದ ಶ್ರೀರಂಗ ಪಟ್ಟಣದ ಹಂಗರ ಹಳ್ಳಿಯ ಜೀತದಾಳುಗಳ ದಾರುಣ ಕತೆಯನ್ನು ಶಿವಣ್ಣ ಅಭಿಮಾನಿಗಳು ಓದಿದ್ದಾರೆ. ಅಲ್ಲಿಂದ ವಿಮುಕ್ತರಾದ ಜನರ ವಿಳಾಸ ಸಂಗ್ರಹಿಸಿದ್ದಾರೆ. ಜುಲೈ 12ರಂದು ಶಿವರಾಜ್‌ ಸಮ್ಮುಖದಲ್ಲಿ ಅವರಿಗೆ ಒಂದು ನಿವೇಶನ ಮತ್ತು ಮನೆ ಕಟ್ಟುವುದಕ್ಕಾಗುವಷ್ಟು ಮೊತ್ತವನ್ನು ಅಭಿಮಾನಿಗಳು ನೀಡಲಿದ್ದಾರಂತೆ.

ಅದೇ ರೀತಿ ಕಾರ್ಪೊರೇಷನ್‌ ಸ್ಕೂಲ್‌ ವಿದ್ಯಾರ್ಥಿನಿ ಶೈಲಶ್ರೀಗೆ ನಗದು ಬಹುಮಾನ ನೀಡುವ ಯೋಜನೆಯೂ ಇದೆ. ಇವೆಲ್ಲಾ ಆಯಾ ಕಾಲದ, ಸಂದರ್ಭದ ಬೆಳವಣಿಗೆಗಳಿಗೆ ಅಭಿಮಾನಿ ಸಂಘ ಸ್ಪಂದಿಸಬಹುದು ಎನ್ನುವುದಕ್ಕೆ ಸೂಚನೆ.

ಅದಿರಲಿ, ನಲ್ವತ್ತರ ಹೊಸಿಲಿನಲ್ಲಿ ರುವ ಶಿವರಾಜ್‌ ಅವರ ವೃತ್ತಿ ಬದುಕೇ ಈಗ ಸುಸ್ಥಿತಿಯಲ್ಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅವರ ಎಂಟು ಚಿತ್ರಗಳು ಸತತವಾಗಿ ಸೋಲುಂಡಿವೆ. ಹಾಗಾಗಿ ಅಪರೂಪಕ್ಕೆ ‘ಪ್ರೀತ್ಸೆ’ ಚಿತ್ರ ಹಿಟ್‌ ಆದರೂ ಅದರ ಕ್ರೆಡಿಟ್‌ ಉಪೇಂದ್ರರಿಗೆ ಹೋಯಿತು. ಈಗ ಪ್ರದರ್ಶಿತವಾಗುತ್ತಿರುವ ದೇವರ ಮಗನೂ ಜಾರು ಹಾದಿಯಲ್ಲೇ ಇದ್ದಾನೆ.

ಬಳಿ ಬಂದವರಿಗೆಲ್ಲಾ ಕಾಲ್‌ ಶೀಟ್‌ ಕೊಡುವ ಶಿವರಾಜ್‌ ಕುಮಾರ್‌ ಔದಾರ್ಯದಿಂದಲೇ ಇಂಥ ಅಪಘಾತಗಳಾಗುತ್ತಿವೆ ಅನ್ನುವ ಮಾತು ಕೇಳಿ ಬರುತ್ತಿದೆ. ವಿಚಿತ್ರವೆಂದರೆ ಚಿತ್ರಗಳು ಸೋತರೂ ಶಿವಣ್ಣಂಗೆ ಬೇಡಿಕೆ ಕಡಿಮೆಯಾಗಿಲ್ಲ. ಆದರೆ ಒಬ್ಬ ಸ್ಟಾರ್‌ ವರ್ಷಕ್ಕೊಂದು ಹಿಟ್‌ ಚಿತ್ರ ಕೊಡದಿದ್ದರೆ ಅದು ಅಪಾಯದ ಸೂಚನೆ. ನಾನಾ ಥರದ ಪಾತ್ರಗಳನ್ನು ಮಾಡಿ ಇನ್ನೇನು ಮಾಡಲಿ ಎಂಬ ಗೊಂದಲದಲ್ಲಿರುವ ಶಿವರಾಜ್‌ಗೆ ಈಗ ಒಬ್ಬ ಒಳ್ಳೇ ನಿರ್ದೇಶಕನ ಅಗತ್ಯವಿದೆ.

ನಲುವತ್ತು ದಾಟಿದ ಮೇಲೆ ನಟನೊಬ್ಬ ಮೆಚ್ಯೂರ್ಡ್‌ ಪಾತ್ರಗಳತ್ತ ಒಲವು ತೋರುತ್ತಾನೆ. ಶಿವರಾಜ್‌ ಈಗಾಗಲೇ ಅಂಥಾ ಪಾತ್ರಗಳನ್ನು ಮಾಡಿದ್ದಾಗಿದೆ. ಹಾಗಿದ್ದಾಗ ಮುಂದೇನು ?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada